ಬೆಂಗಳೂರು: ಆಗಸ್ಟ್.15, 2025ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಈ ಕುರಿತಂತೆ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆಗಸ್ಟ್.15, 2025ರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಅಂದರೆ ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಈ ಕೆಳಗೆ ಸೂಚಿಸಿದಂತೆ ಸಚಿವರುಗಳನ್ನು ಧ್ವಜಾರೋಹಣ ಮಾಡಲು ನೇಮಿಸಲಾಗಿದೆ ಎಂದಿದ್ದಾರೆ.
ಹೀಗಿದೆ ಆಗಸ್ಟ್.15ರಂದು ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಎನ್ನುವ ಪಟ್ಟಿ
- ಡಾ.ಜಿ ಪರಮೇಶ್ವರ್ – ತುಮಕೂರು
- ಹೆಚ್.ಕೆ ಪಾಟೀಲ್ – ಗದಗ
- ಕೆ.ಹೆಚ್ ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
- ರಾಮಲಿಂಗಾರೆಡ್ಡಿ – ಬೆಂಗಳೂರು ದಕ್ಷಿಣ
- ಎಂ.ಬಿ ಪಾಟೀಲ್ – ವಿಜಯಪುರ
- ಕೆಜೆ ಜಾರ್ಜ್ – ಚಿಕ್ಕಮಗಳೂರು
- ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ
- ಡಾ.ಹೆಚ್ ಸಿ ಮಹದೇವಪ್ಪ – ಮೈಸೂರು
- ಸತೀಶ್ ಜಾರಕಿಹೊಳಿ – ಬೆಳಗಾವಿ
- ಕೃಷ್ಣ ಬೈರೇಗೌಡ – ಬಳ್ಳಾರಿ
- ಪ್ರಿಯಾಂಕ್ ಖರ್ಗೆ – ಕಲಬುರ್ಗಿ
- ಶಿವಾನಂದ ಪಾಟೀಲ್ – ಹಾವೇರಿ
- ಜಮೀರ್ ಅಹ್ಮದ್ ಖಾನ್ – ವಿಜಯನಗರ
- ಶರಣಬಸಪ್ಪ ದರ್ಶನಾಪುರ – ಯಾದಗಿರಿ
- ಈಶ್ವರ್ ಖಂಡ್ರೆ – ಬೀದರ್
- ಎನ್ ಚಲುವರಾಯಸ್ವಾಮಿ – ಮಂಡ್ಯ
- ಎಸ್ ಎಸ್ ಮಲ್ಲಿಕಾರ್ಜುನ – ದಾವಣಗೆರೆ
- ಸಂತೋಷ್ ಲಾಡ್ – ಧಾರವಾಡ
- ಡಾ.ಶರಣಪ್ರಕಾಶ್ ಪಾಟೀಲ್ – ರಾಯಚೂರು
- ಆರ್ ಬಿ ತಿಮ್ಮಾಪುರ – ಬಾಗಲಕೋಟೆ
- ಕೆ.ವೆಂಕಟೇಶ್ – ಚಾಮರಾಜನಗರ
- ಶಿವರಾಜ್ ತಂಗಡಗಿ – ಕೊಪ್ಪಳ
- ಡಿ.ಸುಧಾಕರ್ – ಚಿತ್ರದುರ್ಗ
- ಲಕ್ಷ್ಮೀ ಹೆಬ್ಬಾಳ್ಕರ್ – ಉಡುಪಿ
- ಎನ್ ರಾಜಣ್ಣ – ಹಾಸನ
- ಸುರೇಶ್ ಬಿಎಸ್ – ಕೋಲಾರ
- ಮಂಕಾಳ ವೈದ್ಯ – ಉತ್ತರ ಕನ್ನಡ
- ಮಧು ಬಂಗಾರಪ್ಪ – ಶಿವಮೊಗ್ಗ
- ಡಾ ಎಂ ಸಿ ಸುಧಾಕರ – ಚಿಕ್ಕಬಳ್ಳಾಪುರ
- ಎನ್ ಎಸ್ ಬೋಸರಾಜು – ಕೊಡಗು
ಒಂದು ವೇಳೆ ಈ ಮೇಲ್ಕಂಡ ಸಚಿವರು ಅನಾರೋಗ್ಯ ಅಥವಾ ಇತರೆ ಕಾರಣಗಳಿಂದಾಗಿ ಧ್ವಜಾರೋಹಣಕ್ಕೆ ಗೈರಾದರೇ ಅವರ ಅನುಪಸ್ಥಿತಿಯಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡತಕ್ಕದ್ದು ಎಂದಿದ್ದಾರೆ.
BREAKING: ಅರಣ್ಯದಲ್ಲಿ ದನಕರು, ಕುರಿ, ಮೇಕೆ ಮೇಯಿಸುವುದು ನಿಷೇಧ: ಸಚಿವ ಈಶ್ವರ ಖಂಡ್ರೆ ಆದೇಶ
‘ವಿದ್ಯುತ್ ಗ್ರಾಹಕ’ರ ಗಮನಕ್ಕೆ: ಈ ದಿನಗಳಂದು ‘ಎಸ್ಕಾಂ ಆನ್ ಲೈನ್ ಸೇವೆ’ ಸ್ಥಗಿತ