Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂಡೋನೇಷ್ಯಾದಲ್ಲಿ ಗಣಪನ ಪವಾಡ: ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವನ್ನು 700 ವರ್ಷಗಳಿಂದ ಕಾಪಾಡುತ್ತಿರುವ ಗಣೇಶ!

06/09/2025 6:04 AM

SHOCKING : ಗಣಪತಿ ಮಂಟಪದಲ್ಲಿ ಆಟವಾಡ್ತಿದ್ದ 10 ವರ್ಷದ ಬಾಲಕ ಹೃದಯಾಘಾತದಿಂದ ಸಾವು

05/09/2025 10:25 PM

9/9/9 ತುಂಬಾ ಪ್ರಭಾವಶಾಲಿ ; ಈ ದಿನ ಈ ಕೆಲಸ ತಪ್ಪಾಗಿ ಕೂಡ ಮಾಡ್ಬೇಡಿ, ನಿಮ್ಗೆ ದೊಡ್ಡ ನಷ್ಟ

05/09/2025 10:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೆ.13 ಹಾಗೂ 14 ರಂದು ಗಗನಚುಕ್ಕಿ ಜಲಪಾತೋತ್ಸವ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
KARNATAKA

ಸೆ.13 ಹಾಗೂ 14 ರಂದು ಗಗನಚುಕ್ಕಿ ಜಲಪಾತೋತ್ಸವ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

By kannadanewsnow0905/09/2025 7:51 PM

ಮಂಡ್ಯ: ಜನರ ಕಣ್ಮನ ಸೆಳೆಯುವ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನಲ್ಲಿರುವ ಗಗನಚುಕ್ಕಿ ಜಲಪಾತದ ಉತ್ಸವವನ್ನು ಇದೇ ಸೆಪ್ಟೆಂಬರ್ 13 ಹಾಗೂ 14 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿ ಗಗನಚುಕ್ಕಿ ಜಲಪಾತವನ್ನು ಉನ್ನತ ಪ್ರವಾಸಿ ತಾಣ ಮಾಡಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು 2 ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಾಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ರೊಟ್ಟಿಕಟ್ಟೆಯ ಬಳಿ ನೀರು ಸರಬರಾಜು ಕಾಮಗಾರಿ ನಡರಯುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಮಳ್ಳಿ ಕ್ಯಾತನಹಳ್ಳಿಯ ಬಳಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವೇದಿಕೆಯ ಬಳಿ ಜಲಪಾತದ ಮನಮೋಹಕ ದೃಶ್ಯಗಳನ್ನು ಸವಿಯಲು ಎಲ್.ಇ.ಡಿ ವ್ಯವಸ್ಥೆ ಸಹ ಮಾಡಲಾಗುವುದು ಎಂದರು.

ಉಚಿತ ಬಸ್ ವ್ಯವಸ್ಥೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಮಳವಳ್ಳಿ ತಾಲ್ಲೂಕಿನಿಂದ ಗಗನಚುಕ್ಕಿಯ ವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಉಚಿತ ಆಹಾರ ವ್ಯವಸ್ಥೆ ಜಲಪಾತೋತ್ಸವ ನಡೆಯುವ ಸೆಪ್ಟೆಂಬರ್ 13 ಹಾಗೂ 14 ರಂದು ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಉಚಿತವಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವ ರೀತಿ ಕುಳಿತಿಕೊಂಡು ವೀಕ್ಷಿಸಲು ಮೆಟ್ಟಿಲುಗಳು, ಲೈಟಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಕ್ವ ಪಾಕ್೯ ಅಭಿವೃದ್ಧಿ ಪಡಿಸಲು ಚಿಂತಿಸಲಾಗುತ್ತಿದೆ. ಇದಲ್ಲದೆ ಪಿ.ಪಿ.ಪಿ ಮಾಡಲ್ ನಲ್ಲಿ ಉದ್ಯಾನವನ, ಜಲಕ್ರೀಡೆ ಮಾಡಲು ಸಹ ಯೋಜಿಸಲಾಗುತ್ತಿದೆ ಎಂದರು.

ಸ್ಥಳೀಯ ಕಲಾವಿದರಿಗೆ ಅವಕಾಶ ಎರಡು ದಿನಗಳ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ರಿಂದ 3 ಗಂಟೆಯವರೆಗೆ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಅವಕಾಶ ಮಾಡಿಕಪಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಉತ್ತಮವಾದ 2 ಅಥವಾ 3 ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಉಪಸ್ಥಿತರಿದ್ದರು.

ಗಗನ ಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಗಳ ವಿವರ

ಸೆಪ್ಟೆಂಬರ್ 13 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 03.00 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
ಮಧ್ಯಾಹ್ನ 03:00 ರಿಂದ ಸಂಜೆ 06:00 ಗಂಟೆಯವರೆಗೆ ಸಾದ್ವಿನಿ ಕೊಪ್ಪ, ಸಾಕ್ಷಿ ಕೊಲ್ಲೂರು, ಹನುಮಂತ ಹಾಗೂ ಕಂಬದ ರಂಗಯ್ಯ ಗಾಯಕರಿಂದ ಜಾನಪದ ಸಂಗೀತ ಕಾರ್ಯಕ್ರಮ.

ಸಂಜೆ 06.00 ಗಂಟೆಗೆ ಶಿವರಾಜ್. ಕೆ.ಆರ್.ಪೇಟೆ ಮತ್ತು ಅವರ ತಂಡದ ವತಿಯಿಂದ ಕಾಮಿಡಿ ಶೋ ಕಾರ್ಯಕ್ರಮ.

ಸಂಜೆ 06.30 ಗಂಟೆಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಕಾರ್ಯಕ್ರಮದ ಉದ್ಘಾಟನೆ.

ಸಂಜೆ 07:30 ರಿಂದ ರಾತ್ರಿ 11:00 ರವರೆಗೆ ಅರ್ಜುನ್ ಜನ್ಯಾ ಮತ್ತು ಅವರ ತಂಡದಿಂದ ಹಾಗೂ ಖ್ಯಾತ ಗಾಯಕಿ ಮಂಗಲಿ ಅವರಿಂದ ಸಂಗೀತ ಕಾರ್ಯಕ್ರಮ,ಚಲನಚಿತ್ರ ನಟಿಯರಾದ ರಾಗಿಣಿ ತ್ರಿವೇದಿ, ಮನ್ವಿತ ಹರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೆ.13 ರಂದು ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 14 ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 03:00 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಮಧ್ಯಾಹ್ನ 03:00 ರಿಂದ ಸಂಜೆ 04.30 ಗಂಟೆಯವರೆಗೆ ಸವಿತಕ್ಕ, ರವಿ ಮೂರುರು, ಶ್ರೀಹರ್ಷ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ಇವರಿಂದ ಜಾನಪದ ಸಂಗೀತ ಕಾರ್ಯಕ್ರಮ.

ಸಂಜೆ 04:30 ರಿಂದ 06:00 ಗಂಟೆಯವರೆಗೆ ಬೆಂಗಳೂರಿನ Liquid Drums Fusion ತಂಡದಿಂದ Fusion Music Concert ಕಾರ್ಯಕ್ರಮ.

ಸಂಜೆ 06.00 ರಿಂದ 07.00 ಗಂಟೆಯವರೆಗೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಕಾಮಿಡಿ ಶೋ ಕಾರ್ಯಕ್ರಮ.

ಸಂಜೆ 07.00 ರಿಂದ 07.30 ಗಂಟೆಯವರೆಗೆ ಸಮಾರೋಪ ಕಾರ್ಯಕ್ರಮ ಮತ್ತು 07.30 ರಿಂದ 11: 00 ಗಂಟೆಯವರೆಗೆ ಗುರುಕಿರಣ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮದ ಆಯೋಜಿಸಿದ್ದು, ಸಿನಿಮಾ ನಟಿಯರಾದ ಹರ್ಷಿಕ ಪೂಣಚ್ಚ ಮತ್ತು ಭಾವನಾ ನೃತ್ಯ ಪ್ರದರ್ಶಿಸಲಿದ್ದಾರೆ.

ಸೆ.14 ರಂದು ಖ್ಯಾತ ಚಲನಚಿತ್ರ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ವಿವಿಧ ಮಳಿಗೆಗಳನ್ನು ಪ್ರದರ್ಶಿಸಲಾಗುವುದು. ಲೇಸರ್ ಲೈಟ್ ಶೋ, ಸೌಂಡ್ ಅಂಡ್ ಲೈಟ್ಸ್ ಗಳನ್ನು ಸಹ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿರುತ್ತದೆ.

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆಯು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಒಂದು ದಿಟ್ಟ ಹೆಜ್ಜೆ: ರಣದೀಪ್ ಸುರ್ಜೆವಾಲ

ಬೆಂಗಳೂರಲ್ಲಿ ಆಟೋಗೆ ‘ಗೇಮಿಂಗ್ ಚೇರ್’ ಅಳವಡಿಸಿದ ಚಾಲಕ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್

Share. Facebook Twitter LinkedIn WhatsApp Email

Related Posts

ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/09/2025 9:49 PM1 Min Read

ಸಮಾಜದ ಭವಿಷ್ಯದ ಶಿಲ್ಪಿಗಳೇ ಶಿಕ್ಷಕರು: ಮದ್ದೂರು ಶಾಸಕ ಕೆ.ಎಂ.ಉದಯ್

05/09/2025 8:39 PM2 Mins Read

ನಿಮ್ಮ ಮನೆಗೂ ‘UHID ಸ್ಟಿಕ್ಕರ್’ ಅಂಟಿಸಿದ್ದಾರೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ

05/09/2025 8:36 PM1 Min Read
Recent News

ಇಂಡೋನೇಷ್ಯಾದಲ್ಲಿ ಗಣಪನ ಪವಾಡ: ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವನ್ನು 700 ವರ್ಷಗಳಿಂದ ಕಾಪಾಡುತ್ತಿರುವ ಗಣೇಶ!

06/09/2025 6:04 AM

SHOCKING : ಗಣಪತಿ ಮಂಟಪದಲ್ಲಿ ಆಟವಾಡ್ತಿದ್ದ 10 ವರ್ಷದ ಬಾಲಕ ಹೃದಯಾಘಾತದಿಂದ ಸಾವು

05/09/2025 10:25 PM

9/9/9 ತುಂಬಾ ಪ್ರಭಾವಶಾಲಿ ; ಈ ದಿನ ಈ ಕೆಲಸ ತಪ್ಪಾಗಿ ಕೂಡ ಮಾಡ್ಬೇಡಿ, ನಿಮ್ಗೆ ದೊಡ್ಡ ನಷ್ಟ

05/09/2025 10:03 PM

ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

05/09/2025 9:49 PM
State News
KARNATAKA

ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

By kannadanewsnow0905/09/2025 9:49 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನಲೆಯಲ್ಲಿ ನಾಳೆ ಶಿವಮೊಗ್ಗ ನಗರದಲ್ಲಿ 1ನೇ ತರಗತಿಯಿಂದ ಪಿಯುಸಿಯವರೆಗೆ ರಜೆಯನ್ನು…

ಸಮಾಜದ ಭವಿಷ್ಯದ ಶಿಲ್ಪಿಗಳೇ ಶಿಕ್ಷಕರು: ಮದ್ದೂರು ಶಾಸಕ ಕೆ.ಎಂ.ಉದಯ್

05/09/2025 8:39 PM

ನಿಮ್ಮ ಮನೆಗೂ ‘UHID ಸ್ಟಿಕ್ಕರ್’ ಅಂಟಿಸಿದ್ದಾರೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ

05/09/2025 8:36 PM

ರಾಜ್ಯದ ಜನತೆಗೆ ಈ ಮನವಿ ಮಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

05/09/2025 8:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.