ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಿದ್ದಂತ ನೋಟಿಸ್ ಹಿನ್ನಲೆಯಲ್ಲಿ ಜುಲೈ.25ರಂದು ವರ್ತಕರು ಬಂದ್ ಗೆ ಕರೆ ನೀಡಿದ್ದರು. ಈ ಬಂದ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮಾತುಕತೆಯ ಮೇರೆಗೆ ವಾಪಾಸ್ ಪಡೆಯಲಾಗಿದೆ.
ಸಿಎಂ ಸಿದ್ಧರಾಮಯ್ಯ ಅವರು ಸಣ್ಣ ವ್ಯಾಪಾರಿಗಳಿಗೆ ಜುಲೈ.25ರಂದು ಕರೆ ನೀಡಿದ್ದ ಬಂದ್ ವಾಪಾಸ್ ಪಡೆಯುವಂತೆ ಮನವಿ ಮಾಡಿದ್ದರು. ಈ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿದಂತ ವರ್ತಕರು ಜುಲೈ.25ರಂದು ಕರೆ ನೀಡಿದ್ದಂತ ಬಂದ್ ವಾಪಾಸ್ ಪಡೆದಿದ್ದಾರೆ.
ಈ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಜುಲೈ.25ರಂದು ವರ್ತಕರು ಕರೆ ನೀಡಿದ್ದ ಬಂದ್ ವಾಪಾಸ್ ಪಡೆಯಲಾಗಿದೆ ಎಂದು ತಿಳಿಸಿದರು.
ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಹೇಳಿದ್ದೇನೆ. ಕೂಡಲೇ ಸಹಾಯವಾಣಿ ಆರಂಭಿಸುವಂತೆ ಮನವಿ ಮಾಡಿದ್ದಾರೆ. ಈಗಿರುವ ಹೆಲ್ಪ್ ಲೈನ್ ಸಮರ್ಪಕವಾಗಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.
ಈ ಹಿನ್ನಲೆಯಲ್ಲಿ ಜುಲೈ.25ರಂದು ಕರೆ ನೀಡಿದ್ದ ಬಂದ್ ಹಿಂಪಡೆಯಲು ಮನವಿ ಮಾಡಲಾಗಿತ್ತು. ವಾಣಿಜ್ಯೋದ್ಯಮಿಗಳು ಕರೆ ನೀಡಿದ್ದ ಬಂದ್ ಹಿಂಪಡೆಯಲು ಮನವಿ ಮಾಡಲಾಗಿತ್ತು. ಈ ಮನವಿ ಹಿನ್ನಲೆಯಲ್ಲಿ ವರ್ತಕರು ಕರೆ ನೀಡಿದ್ದಂತ ಬಂದ್ ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ