ಬೆಂಗಳೂರು: ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಜಿ.ಎಸ್. ಶರ್ಮಾಜಿ ಅವರ ಜನ್ಮ ಶತಾಬ್ದಿ ವರ್ಷಾಚರಣೆ ಅಂಗವಾಗಿ ಬೃಹತ್ ಶೈಕ್ಷಣಿಕ ಸಮ್ಮೇಳನವನ್ನು, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಕುಸ್ಮ ಅಧ್ಯಕ್ಷರಾದಂತ ಎಸ್ ಸತ್ಯಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡಿಸೆಂಬರ್ 7ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಜಯನಗರದಲ್ಲಿರುವ ಆರ್. ವಿ. ಕಾಲೇಜು ಶಿಕ್ಷಕರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದಿದ್ದಾರೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ದಿನೇಶ್ ಕುಮಾರ್ ಪಿ ಎಸ್, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಕೆ.ವಿ. ಧನಂಜಯ, ರಿಜಿನಲ್ ಪ್ರಾವಿಡೆಂಟ್ ಕಮಿಷನರ್ -1 ಮಿಹೀರ್ ಕುಮಾರ್, ರಿಜಿನಲ್ ಪ್ರಾವಿಡೆಂಟ್ ಕಮಿಷನರ್ -2 ಅನಿಕೇತ್ ಅನಿಲ್ ಅಂಬೇಕರ್, ಬೆಂಗಳೂರು ಇಎಸ್ಐ ರೀಜನಲ್ ಡೈರೆಕ್ಟರ್ ಮನೋಜ್ ಕುಮಾರ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಅಂತ ತಿಳಿಸಿದ್ದಾರೆ.
ಅನುದಾನ ರಹಿತ ಶಾಲಾ ಮಂಡಳಿಯ ಪದಾಧಿಕಾರಿಗಳು ಶಿಕ್ಷಣ ತಜ್ಞರು ಮತ್ತು ಇತರ ಚಿಂತಕರು ಇದರಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಶಿಕ್ಷಣ ಮಂಡಳಿಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.








