ಯಾದಗಿರಿ: ಮುಂದಿನ ಟೈಯರ್ ಸ್ಪೋಟಗೊಂಡ ಪರಿಣಾಮ, ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ವ್ಯಾನ್ ಉರುಳಿ ಬಿದ್ದಿದೆ. ಈ ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ನೋಡ ನೋಡುತ್ತಿದ್ದಂತೆ ನಡು ರಸ್ತೆಯಲ್ಲೇ ಹೊತ್ತಿ ಉರಿದಿರೋ ಘಟನೆ ಯಾದಗಿರಿಯ ಚಿತ್ತಾಪುರದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರದಲ್ಲಿ ಓಮ್ನಿ ವ್ಯಾನ್ ಒಂದರ ಟೈಯರ್ ಸ್ಪೋಟಗೊಂಡಿದೆ. ಈ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ನೋಡ ನೋಡುತ್ತಿದ್ದಂತೆ ಪಲ್ಟಿಯಾಗಿದೆ.
ಓಮ್ನಿ ವ್ಯಾನ್ ಪಲ್ಟಿಯಾದ ಪರಿಣಾಮ ಅದರೊಟ್ಟಿಗೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನ ಗಮನಿಸಿದಂತ ವಾಹನ ಸಾವರರು ಓಮ್ನಿ ವ್ಯಾನಿನಲ್ಲಿದ್ದಂತ ಓರ್ವನನ್ನು ಹೊರಗೆ ಎಳೆದುಕೊಂಡಿದ್ದಾರೆ.
ಈ ಬಳಿಕ ಓಮ್ನಿ ವ್ಯಾನ್ ಸಂಪೂರ್ಣವಾಗಿ ನಡು ರಸ್ತೆಯಲ್ಲೇ ಧಗಧಗಿಸಿ ಹೊತ್ತಿ ಉರಿದಿದೆ. ಈ ಅವಗಢದಲ್ಲಿ ಗಾಯಗೊಂಡಿದ್ದಂತ ಓರ್ವ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದಂತ ಚಿತ್ತಾಪುರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಮ ದಾಖಲಿಸಿಕೊಂಡಿದ್ದಾರೆ.