ಬೆಂಗಳೂರು: ರಾಜ್ಯದ ಜನರೇ ಬೆಚ್ಚಿ ಬೀಳುವಂತೆ ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಕೊಲೆ ಮಾಡಿರೋದಾಗಿ ಪೊಲೀಸರಿಗೆ ಸ್ಥಳ ಪರಿಶೀಲನೆ ವೇಳೆಯಲ್ಲಿ ಪತ್ತೆಯಾದಂತ ವಸ್ತುಗಳಿಂದ ದೃಢಪಟ್ಟಿದೆ.
ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ಬಳಿಕ I Have Finished Monster ಎಂಬುದಾಗಿ ಮತ್ತೋರ್ವ ಮಾಜಿ ಡಿಜಿ ಮತ್ತು ಐಜಿಪಿ ಪತ್ನಿಗೆ ಕರೆ ಮಾಡಿ ಓಂ ಪ್ರಕಾಶ್ ಪತ್ನಿ ಪಲ್ಲವಿ ಹೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್(68) ಅವರನ್ನು ಅವರ ಪತ್ನಿ ಪಲ್ಲವಿ ಎಂಬುವರೇ ಚಾಕುವಿನಿಂದ ಇರಿದು ಹತ್ಯೆ ಮಾಡಿರೋದಾಗಿ ತಿಳಿದು ಬಂದಿದೆ. ಓಂ ಪ್ರಕಾಶ್ ಕೊಲೆ ಬಳಿಕ ವೀಡಿಯೋ ಕರೆಯನ್ನು ಮತ್ತೋರ್ವ ನಿವೃತ್ತ ಡಿಜಿ ಮತ್ತು ಐಜಿಪಿ ಪತ್ನಿ ಪಲ್ಲವಿ ಮಾಡಿದ್ದಾರೆ. I Have Finished Monster ಎಂಬುದಾಗಿ ವೀಡಿಯೋ ಕರೆಯಲ್ಲಿ ತಿಳಿಸಿದ್ದಾಗಿ ತಿಳಿದು ಬಂದಿದೆ.
ಅಂದಹಾಗೇ ಮೂರು ದಿನಗಳ ಹಿಂದೆ ಐಪಿಎಸ್ ಫ್ಯಾಮಿಲಿ ವಾಟ್ಸ್ ಆಪ್ ಗ್ರೂಪ್ ನಲ್ಲಿ ಓಂ ಪ್ರಕಾಶ್ ಪತ್ನಿ ವಾಟ್ಸ್ ಆಪ್ ಮೆಸೇಜ್ ಮಾಡಿದ್ದರು. ನನ್ನ ಪತಿ ನನಗೆ, ಮಗಳಿಗೆ ತುಂಬಾ ಚಿತ್ರಹಿಂಸೆ ಕೊಡ್ತಿದ್ದಾರೆ. ಮನೆಯಲ್ಲಿ ನನ್ನ ಪತಿ ಗನ್ ಹಿಡಿದುಕೊಂಡು ಓಡಾಡ್ತಿದ್ದಾರೆ. ಶೂಟ್ ಮಾಡಿ ಕೊಲೆ ಮಾಡ್ತೀನಿ ಎಂದು ಭಯಪಡಿಸ್ತಿದ್ದಾರೆ. ಪತಿ ವಿರುದ್ಧ ಸುಮೋಟೋ ಕೇಸ್ ದಾಖಲಿಸುವಂತೆ ಮನವಿ ಮಾಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ಇನ್ನೂ ದಾಂಡೇಲಿಯಲ್ಲಿದ್ದ ಆಸ್ತಿ ವಿಚಾರಕ್ಕೆ ಓಂಪ್ರಕಾಶ್ ಕೊಲೆಯಾಗಿದೆ ಎನ್ನಲಾಗುತ್ತಿದೆ. ತಂಗಿಯವರ ಹೆಸರಿಗೆ ಪ್ರಾಪರ್ಟಿ ಮಾಡಿದ್ದಕ್ಕೆ ಹಲವು ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ಕೂಡ ಆಗುತ್ತಿತ್ತು. ಈ ವೇಳೆ ಮಾತನಾಡಬೇಡವೆಂದು ಪತ್ನಿಗೆ ಓಂ ಪ್ರಕಾಶ್ ವಾರ್ನ್ ಮಾಡಿದ್ದರಂತೆ.
ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಚುಚ್ಚಿ ಕೊಲೆ
ಇನ್ನೂ ಮಾಜಿ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರ ಕಣ್ಣಿಗೆ ಖಾರದಪುಡಿ ಎರಚಿರುವಂತ ಪತ್ನಿ ಪಲ್ಲವಿ, ಆ ಬಳಿಕ ಚಾಕುವಿನಿಂದ ಕೊಲೆ ಮಾಡಿದ್ದಾರೆ. ಓಂ ಪ್ರಕಾಶ್ ಅವರನ್ನು 8 ರಿಂದ 10 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.
ಓಂ ಪ್ರಕಾಶ್ ಅವರ ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿದು ಪತ್ನಿ ಪಲ್ಲವಿ ಹತ್ಯೆಗೈದಿದ್ದಾರೆ. ಓಂ ಪ್ರಕಾಶ್ ಅವರ ಹೊಟ್ಟೆ ಭಾಗಕ್ಕೆ 4ರಿಂದ 5 ಬಾರಿ ಇರಿದಿದ್ದರಿಂದ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ 15 ರಿಂದ 20 ನಿಮಿಷ ರಕ್ತದ ಮಡುವಿನಲ್ಲಿ ಒದ್ದಾಡಿ ಸಾವನ್ನಪ್ಪಿದ್ದಾರೆ.
ಅವರು ಸಾಯುವುದನ್ನು ಹತ್ತಿರದಲ್ಲೇ ನಿಂತು ನೋಡಿದಂತ ಪಲ್ಲವಿ, ಸಾವನ್ನಪ್ಪಿದ ಬಳಿಕ ಬೆಡ್ ಶೀಟ್ ನಿಂದ ಮುಚ್ಚಿದ್ದಾರೆ. ಇಷ್ಟೊಂದು ಕ್ರೌರ್ಯವನ್ನು ಓಂ ಪ್ರಕಾಶ್ ಹತ್ಯೆ ಮೊದಲು ಪತ್ನಿ ಪಲ್ಲವಿ ಮೆರೆದಿರೋದು ಪೊಲೀಸರು ಸ್ಥಳ ಪರಿಶೀಲನೆ ವೇಳೆಯಲ್ಲಿ ದೃಢಪಟ್ಟಿದೆ.
ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಪೈಲೆಟ್ ಕಣ್ಣಿಗೆ ಹೊಡೆದ ಡಿಜೆ ಲೈಟ್: ಕ್ಷಣ ಕಾಲ ಆತಂಕ, ಸೇಫ್ ಲ್ಯಾಂಡಿಂಗ್
BIG NEWS: ಎಲ್ಲಾ ಪೌರ ಕಾರ್ಮಿಕರನ್ನು ಖಾಯಂ, ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ: ಸಿಎಂ ಸಿದ್ದರಾಮಯ್ಯ ಘೋಷಣೆ