ಬೆಂಗಳೂರು: ನಗರದ ವಿವಿಧ ವಾರ್ಡ್ ಗಳಲ್ಲಿ ವಾರಾನುಗಟ್ಟಲೆ ರಸ್ತೆಯಲ್ಲಿ ನಿಲ್ಲಿಸಲಾದ ಹಳೆ ವಾಹನಗಳನ್ನು ಡಂಪ್ ಮಾಡಲಾಗುವುದು ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಿಬಿಎ ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಜಿಬಿಎ ಕಾರ್ಯಕಾರಿ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಹಳೆ ವಾಹನಗಳನ್ನು ವಾರಾನುಗಟ್ಟಲೆ ರಸ್ತೆಗಳಲ್ಲಿ ನಿಲ್ಲಿಸಿ ಹೋಗಿದ್ದಾರೆ, ಅವುಗಳನ್ನು ಎತ್ತಿಕೊಂಡು ಹೋಗಿ ನಿಗದಿತ ಜಾಗದಲ್ಲಿ ಹಾಕಲಾಗುವುದು. ಇದರ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಲಾಗಿದೆ. ಬೆಲ್ಲಳ್ಳಿ, ಬಿಡಗಾನಹಳ್ಳಿ, ಬಿದ್ದನಳ್ಳಿ, ಸೊಂಡೆಕೊಪ್ಪ ಜಾಗ ನಿಗದಿ ಮಾಡಲಾಗಿದ್ದು, ಇನ್ನು ಕೆಲವು ಜಾಗ ನೀಡಲಾಗುವುದು” ಎಂದು ಮಾಹಿತಿ ನೀಡಿದರು.
ವಾಹನಗಳ ಟೋಯಿಂಗ್ ಮಾಡುವ ವಿಚಾರ ಪ್ರಸ್ತಾಪ ಆಗಿದೆಯೇ ಎಂದು ಕೇಳಿದಾಗ, “ಎಲ್ಲಾ ಪಾಲಿಕೆಗಳಿಗೆ 2 ವಾಹನ ನೀಡಿದ್ದೇವೆ. ಎಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲವೋ, ಅಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲಾಗುವುದು” ಎಂದರು.
ಪ್ರತಿ ವಾರ್ಡಿಗೆ 5-10 ಕೋಟಿ ಅನುದಾನ ಕೇಳುತ್ತಿದ್ದು, ಎಷ್ಟು ನೀಡಲಾಗುವುದು ಎಂದಾಗ, “ನೋಡೋಣ, ಅವರು ಆಕಾಶವನ್ನು ಕೇಳುತ್ತಿದ್ದಾರೆ, ಭೂಮಿಯನ್ನು ಕೇಳುತ್ತಿದ್ದಾರೆ” ಎಂದು ತಿಳಿಸಿದರು.
ಬೆಂಗಳೂರಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50,000ದಿಂದ 1 ಲಕ್ಷ ದಂಡ ವಿಧಿಸಲು ಚಿಂತನೆ: ಡಿಸಿಎಂ ಡಿ.ಕೆ ಶಿವಕುಮಾರ್
ತೆರಿಗೆದಾರರೇ ಗಮನಿಸಿ: ಏಪ್ರಿಲ್ 1ರಿಂದ ಹೊಸ ‘ಆದಾಯ ತೆರಿಗೆ ನಿಯಮ 2026’ ಜಾರಿ; ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ








