ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈಂಡ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಬಗ್ಗೆ ಮಹತ್ವದ ಆದೇಶವನ್ನುತಿಳಿಸಿದೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈಂಡ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಸಂಬಂಧ ಈಗಾಗಲೇ ಬೆಂಗಳೂರು ಮತ್ತು ಮೈಸೂರು ವಿಭಾಗದ ಜಿಲ್ಲೆಗಳಿಂದ ಪುಸ್ತಾವನೆಗಳು ಭೌತಿಕವಾಗಿ ಸ್ವೀಕೃತವಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಎಲ್ಲಾ ಪ್ರಸ್ತಾವನೆಗಳ ಸಾಫ್ಟ್ ಪ್ರತಿಯನ್ನು ಸಲ್ಲಿಸಲು ಸೂಚಿಸಿರುತ್ತಾರೆ.ಪುಯುಕ್ತ, ಬೆಂಗಳೂರು ಮೈಸೂರು ವಿಭಾಗದ ಉಪನಿರ್ದೇಶಕರುಗಳು ತಮ್ಮ ಜಿಲ್ಲೆಗೆ ಸಂಬಂಧಿಸಿದ ಪುಸ್ತಾವನೆಗಳನ್ನು ಶಿಕ್ಷಕರುವಾರು ತಾಲ್ಲೂಕುವಾರು ಪ್ರತ್ಯೇಕವಾಗಿ 50 MB ಗಳಿಗಿಂತ ಕಡಿಮೆ ಇರುವಂತೆ ಪರಿಷ್ಕರಿಸಿ ಸ್ಕ್ಯಾನ್ ಮಾಡಿ ಸಾಫ್ಟ್ ಪರಿಷ್ಕೃತ ಪ್ರತಿಯನ್ನು ದಿನಾಂಕ: 23-08-2024 ರೊಳಗೆ ಈ ಕಛೇರಿಗೆ ಮುದ್ರಾಂ ಸಲ್ಲಿಸಲು ತಿಳಿಸಿದೆ.
ಮುಂದುವರೆದು, ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಿರುವ ಜಿಲ್ಲೆಯವರು, ಸದರಿ ಪುಸ್ತಾವನೆಗಳನ್ನು ಕಛೇರಿಯಿಂದ ಹಿಂಪಡೆದು, ಈ ಮೇಲೆ ಸೂಚಿಸಿರುವಂತೆ ತುರ್ತಾಗಿ ಕ್ರಮವಹಿಸಿ ನಿಗದಿತ ದಿನಾಂಕದೊಳಗೆ ಭೌತಿಕ ಮತ್ತು ಸಾಫ್ಟ್ ಪುಸ್ತಾವನೆಗಳನ್ನು ಕಛೇರಿಗೆ ಮರುಸಲ್ಲಿಸಲು ಸಲ್ಲಿಸಲು ತಿಳಿಸಿದೆ. ಇದು ಕಾಲಮಿತಿ ಪಕರಣವಾಗಿದ್ದು, ಯಾವುದೇ ವಿಳಂಬಕ್ಕೆ ಈ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.
Good news for government primary school teachers Important details of old friend pension facility[/caption]