ಬೆಂಗಳೂರು: ರಾಜ್ಯ ಸರ್ಕಾರದಿಂದ ಶಿಕ್ಷಕರ ವರ್ಗಾವಣೆ ( Teacher Transfer ) ಬಿಲ್ ವಿಧೇಯಕವನ್ನು ವಿಧಾನಸಭೆಯಲ್ಲಿ ( Karnataka Assembly ) ಅಂಗೀಕರಿಸಲಾಗಿತ್ತು. ಈ ಬಳಿಕ, ರಾಜ್ಯ ಸರ್ಕಾರದಿಂದ ಈಗ ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕವನ್ನು ಅಧಿಕೃತವಾಗಿ ಗೆಜೆಟ್ ಅಧಿಸೂಚನೆಯಲ್ಲಿ ( Gazette Notification ) ಪ್ರಕಟಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ( Karnataka Government ) ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಕಟಿತ ಅಧಿಸೂಚನೆಯಲ್ಲಿ ಕನಿಷ್ಠ ಸೇವಾವಧಿಯನ್ನು ಶಿಕ್ಷಕರು ಮರು ನಿಯೋಜನೆ ಹೊಂದಿರುವ ಶಾಲೆಯಲ್ಲಿ ಸಲ್ಲಿಸಿದ ಸೇವೆಯೂ ಒಳಗೊಂಡಂತೆ ಮೂರು ವರ್ಷಗಳ ನಿರಂತರ ಸೇವೆಯನ್ನು ವರ್ಗಾವಣೆಗೆ ಪರಿಗಣಿಸಲು ತಿಳಿಸಲಾಗಿದೆ.

BIG BREAKING NEWS: ಮುರುಘಾ ಶ್ರೀಗಳಿಗೆ ಬಿಗ್ ಶಾಕ್: ಜಾಮೀನು ಅರ್ಜಿ ತಿರಸ್ಕಾರ | Murugha Sri

ಇದಲ್ಲದೇ ಆದ್ಯತೆಯ ಕ್ರಮದಂತೆ ಕೌನ್ಸಿಲಿಂಗ್ ಉದ್ದೇಶಕ್ಕಾಗಿ ನಿಯಮಿಸಬಹುದಾದ ಮಾನದಂಡದ ಅನುಸಾರವಾಗಿ ಶಿಕ್ಷಕನು ಗಳಿಸಿದ ಕೃಪಾಂಕದ ( Weighted Score ) ಆಧಾರದ ಮೇಲೆ ಸಿದ್ಧಪಡಿಸಿದ ಶಿಕ್ಷಕರ ಆದ್ಯತಾ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಸಂಬಂಧ 4, 5 ಮತ್ತು 6ನೇ ಪ್ರಕರಣಗಳ ಅಡಿಯಲ್ಲಿ ಶಿಕ್ಷಕರ ವರ್ಗಾವಣೆಯನ್ನು ವರ್ಷದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಸಾರ್ವತ್ರಿಕ ವರ್ಗಾವಣೆಯ ವೇಳೆಯು ಸಾಮಾನ್ಯವಾಗಿ ಗಣಕೀಕೃತ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ನಿಯಮಿಸಬಹುದಾಗಿ ಎಂದಿದೆ.

ಇದಲ್ಲದೇ ಏಪ್ರಿಲ್ ಮತ್ತು ಮೇ ತಿಂಗಳಿನ ತರುವಾಯವೂ ವಿಶೇಷ ಸನ್ನಿವೇಶಗಳಲ್ಲಿ ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ರಾಜ್ಯ ಸರ್ಕಾರದ ನಿರ್ದೇಶನದ ಮೇಲೆ ವರ್ಗಾವಣೆಯನ್ನು ಮಾಡಬಹುದು ಎಂದು ತಿದ್ದಪಡಿ ವಿಧೇಯಕದ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

BIGG NEWS : ಕೇಂದ್ರ ಸರ್ಕಾರ ಮಹತ್ವದ ಕ್ರಮ ; ಈಗ ‘ಬ್ಯಾಂಕ್ ವಂಚನೆ’ಯಿಂದ ತಪ್ಪಿಸಿಕೊಳ್ಳೋದು ತುಂಬಾನೇ ಸುಲಭ

ಯಾವೊಬ್ಬ ಶಿಕ್ಷಕನು ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡದಿದ್ದರೇ ಮತ್ತು ಅದನ್ನು ಶಿಷ್ಯ-ಶಿಕ್ಷಕ ಅನುಪಾತದ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಭರ್ತಿ ಮಾಡುವುದು ಅಗತ್ಯವಾಗಿದ್ದರೇ, ರಾಜ್ಯ ಸರ್ಕಾರವು ನಿಯಮಿಸಬಹುದಾದ ಷರತ್ತುಗಳಿಗೆ ಒಳಪಟ್ಟು, ಕನಿಷ್ಠ ಸೇವಾವಧಿಯನ್ನು ಪೂರೈಸಿದ ಯಾವೊಬ್ಬ ಶಿಕ್ಷಕನನ್ನು ಅಂಥ ಸ್ಥಳಕ್ಕೆ ವರ್ಗಾವಣೆ ಮಾಡಬಹುದಾಗಿದೆ.

ಸಮರ್ಪಕ ಮರುಹಂಚಿಕೆ ಮತ್ತು ವಲಯವಾರು ವರ್ಗಾವಣೆ ಎರಡಕ್ಕೂ ಹಾಗೂ ಕೋರಿಕೆ ವರ್ಗಾವಣೆ ಅಡಿಯಲ್ಲಿ ಆದ್ಯತೆಗೆ ಕೂಡ ಅರ್ಹರಾಗತಕ್ಕದ್ದು. ಆದ್ಯತೆಗಳನ್ನು ಶಿಕ್ಷಕನ ಸೇವಾವಧಿಯಲ್ಲಿ ಒಂದು ಬಾರಿ ಮಾತ್ರವೇ ಕ್ಲೇಮು ಮಾಡುವುದು ಎನ್ನಲಾಗಿದೆ.

ಇನ್ನೂ ಶಿಕ್ಷಕರಿಗೆ ಕೋರಿಕೆ ವರ್ಗಾವಣೆಯ ಅವಧಿಯಲ್ಲಿ ಪ್ರಾಶಸ್ತ್ಯವನ್ನು ನೀಡತಕ್ಕದ್ದು. ಶಿಕ್ಷಕನು, ಆತನ ಪತ್ನಿ ಅಥವಾ ಆಕೆಯ ಪತಿಯು ಕಾರ್ಯನಿರ್ವಹಿಸುತ್ತಿರುವ ತಾಲೂಕಲ್ಲದ ಬೇರೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಆತನ ಪತ್ನಿ ಅಥವಾ ಆಕೆಯ ಪತಿಯು ಕಾರ್ಯನಿರ್ವಹಿಸುತ್ತಿರುವ ತಾಲೂಕಿಗೆ ಮಾತ್ರವೇ ವರ್ಗಾವಣೆಯನ್ನು ಕೋರುವುದಕ್ಕೆ ಅನುಮತಿಸಲಾಗಿದೆ.

BIGG NEW : ಎರಡು ದಿನಗಳ ಬಿಹಾರ ಪ್ರವಾಸದಲ್ಲಿರುವ ಕೇಂದ್ರ ಸಚಿವ ಅಮಿತ್ ಶಾ: ಹೊಸ ಘೋಷಣೆಯೊಂದಿಗೆ ಪ್ರಚಾರಕ್ಕೆ ಮುಂದಾದ ಬಿಜೆಪಿ |2024 Lok Sabha Elections

ಒಂದು ವೇಳೆ ಇಬ್ಬರೂ ಅದೇ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಆಗ ಆದ್ಯತೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅವರು ಅರ್ಹರಾಗತಕ್ಕದ್ದಲ್ಲ ಎಂದು ತಿಳಿಸಲಾಗಿದೆ.

ಸಮರ್ಪಕ ಮರುಹಂಚಿಕೆ ಮತ್ತು ವಲಯವಾರು ವರ್ಗಾವಣೆಗಳ ಅವಧಿಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ಆತನ ಪತ್ನಿ ಅಥವಾ ಆಕೆಯ ಪತಿಯು ಕಾರ್ಯನಿರ್ವಹಿಸುತ್ತಿರುವ ತಾಲೂಕಿನೊಳಗೆ ಸ್ಥಳ ನಿಯುಕ್ತಿಗೊಳಿಸಬೇಕು ಎಂಬ ನಿಯಮ ರೂಪಿಸಲಾಗಿದೆ.

BREAKING NEWS: ರಾಜ್ಯ ‘ಸರ್ಕಾರಿ ನೌಕರ’ರಿಗೆ ಭರ್ಜರಿ ಸಿಹಿಸುದ್ದಿ: ‘ಪ್ರಭಾರ ಭತ್ಯೆ ದರ’ ಪರಿಷ್ಕರಿಸಿ ಸರ್ಕಾರ ಆದೇಶ

ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಯ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ 2019-20ನೇ ವರ್ಷದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನ ಸಂದರ್ಭದಲ್ಲಿ ತಾಲೂಕಿನ ಹೊರಗೆ ಅಥವಾ ಪ್ರೌಢಶಾಲಾ ಶಿಕ್ಷಕನ ಸಂದರ್ಭದಲ್ಲಿ ಜಿಲ್ಲೆಯ ಹೊರಗೆ ವರ್ಗಾವಣೆಗೊಂಡ ಶಿಕ್ಷಕನ ಸಂಬಂಧದಲ್ಲಿ, ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಆ ಸಂಬಂಧಪಟ್ಟ ತಾಲೂಕು, ಜಿಲ್ಲೆಯೊಳಗೆ ವರ್ಗಾವಣೆಗಳಿಗೆ ಪೂರ್ವದಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು ಅವರು ಕಾರ್ಯನಿರ್ವಹಿಸುತ್ತಿರುವ ತಾಲೂಕು, ಜಿಲ್ಲೆಯೊಳಗೆ ಒಂದು ಸಲ ಕ್ರಮವಾಗಿ ನಿಯಮಿಸಬಹುದಾಂತ ರೀತಿಯಲ್ಲಿ ವರ್ಗಾವಣೆಯ ಸ್ಥಳವನ್ನು ಆಯ್ಕೆ ಮಾಡಲು ಅವಕಾಶವನ್ನು ಒದಗಿಸಲಾಗಿದೆ.

ವರದಿ : ವಸಂತ ಬಿ ಈಶ್ವರಗೆರೆ

Share.
Exit mobile version