ಬಿಹಾರ: ರಾಜ್ಯದಲ್ಲಿನ ಮಹಾಘಟಬಂಧನ್ ಸರ್ಕಾರವನ್ನು ಎದುರಿಸಲು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಅಸಾಧಾರಣ ಶಕ್ತಿಯನ್ನಾಗಿ ಮಾರ್ಪಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಲ ಕಾಲ ಬಿಹಾರ ಪ್ರವಾಸ ಕೈಗೊಂಡಿದ್ದಾರೆ.

BIGG NEWS : ಕೇಂದ್ರ ಸರ್ಕಾರ ಮಹತ್ವದ ಕ್ರಮ ; ಈಗ ‘ಬ್ಯಾಂಕ್ ವಂಚನೆ’ಯಿಂದ ತಪ್ಪಿಸಿಕೊಳ್ಳೋದು ತುಂಬಾನೇ ಸುಲಭ

ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲು ಬಿಜೆಪಿಯ ಬಿಹಾರ ಘಟಕವು ರಾಜ್ಯದ ಅಭಿವೃದ್ಧಿಗಾಗಿ ಪಕ್ಷವನ್ನು ಬೆಂಬಲಿಸುವಂತೆ ಜನರನ್ನು ಒತ್ತಾಯಿಸುವ ಹೊಸ ಘೋಷಣೆಯೊಂದಿಗೆ ಬಂದಿದೆ. ಪಕ್ಷವು “ಆವೋ ಚಲೇ ಭಾಜಪ ಕೆ ಸಾಥ್, ಕರೇ ಬಿಹಾರ್ ಕಾ ವಿಕಾಸ್” (ಬಿಹಾರದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸೋಣ) ಘೋಷಣೆಯನ್ನು ಪರಿಚಯಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಬೇರ್ಪಟ್ಟಿದ್ದು,  ಆರ್‌ಜೆಡಿ, ಕಾಂಗ್ರೆಸ್ ಮತ್ತು ಇತರರೊಂದಿಗೆ ಕೈಜೋಡಿಸಿ ಮಹಾಮೈತ್ರಿಕೂಟ ಸರ್ಕಾರವನ್ನು ರಚಿಸಿದ್ದಾರೆ. ಈ ಬೆಳವಣಿಗೆ ಬಳಿಕ ಅಮಿತ್ ಶಾ ಅವರು ರಾಜ್ಯಕ್ಕೆ ಮೊದಲ ಪ್ರವಾಸ ಕೈಗೊಂಡಿದ್ದಾರೆ.

2024ರ ಲೋಕಸಭೆ ಮತ್ತು 2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಕಾರ್ಯತಂತ್ರವನ್ನು ಬಿಹಾರಕ್ಕೆ ಷಾ ಭೇಟಿ ಪ್ರತಿಬಿಂಬಿಸುತ್ತದೆ.

ಉತ್ತರ ಬಿಹಾರದ ಸೀಮಾಂಚಲ್ ಪ್ರದೇಶವು ನಾಲ್ಕು ಜಿಲ್ಲೆಗಳನ್ನು ಒಳಗೊಂಡಿದೆ. ಪೂರ್ಣಿಯಾ, ಕಿಶನ್‌ಗಂಜ್, ಕತಿಹಾರ್ ಮತ್ತು ಅರಾರಿಯಾ . ಇಲ್ಲಿ ಮುಸ್ಲಿಂ ಜನಸಂಖ್ಯೆಯು ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜಕೀಯ ಪಕ್ಷದ ಅಭ್ಯರ್ಥಿಯ ಯಶಸ್ಸಿನ ಮೇಲೆ ಪ್ರಭಾವ ಬೀರಲು ಸಾಕಷ್ಟು ಸಂಖ್ಯೆಯಲ್ಲಿದೆ. ನಾಲ್ಕು ಜಿಲ್ಲೆಗಳು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದೊಂದಿಗೆ ತಮ್ಮ ಗಡಿಯನ್ನು ಹಂಚಿಕೊಂಡಿವೆ

ನಾಲ್ಕು ಜಿಲ್ಲೆಗಳು 24 ಅಸೆಂಬ್ಲಿ ಸ್ಥಾನಗಳನ್ನು ಮತ್ತು ನಾಲ್ಕು ಸಂಸದೀಯ ಸ್ಥಾನಗಳನ್ನು ಪ್ರತಿನಿಧಿಸುತ್ತವೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಅರಾರಿಯಾದ ಕೇವಲ ಒಂದು ಸ್ಥಾನವನ್ನು ಗೆದ್ದುಕೊಂಡರೆ, ಜೆಡಿಯು ಎರಡು ಸ್ಥಾನ,  ಕಾಂಗ್ರೆಸ್ ಒಂದು ಸ್ಥಾನ ಪಡೆದಿತ್ತು. 2019 ರಲ್ಲಿ, ಬಿಜೆಪಿ ಮತ್ತು ಜೆಡಿಯು ಎರಡೂ ಮೈತ್ರಿಕೂಟಗಳಾಗಿ ಒಟ್ಟಾಗಿ ಚುನಾವಣೆಗಳನ್ನು ಎದುರಿಸಿದ್ದವು.

ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳಿದ್ದು, ಪ್ರಸ್ತುತ 17 ಬಿಜೆಪಿ ವಶದಲ್ಲಿದ್ದರೆ, ಜೆಡಿಯು 16 ಸ್ಥಾನಗಳನ್ನು ಹೊಂದಿದೆ. ಇದಲ್ಲದೆ, ಲೋಕ ಜನಶಕ್ತಿ ಪಕ್ಷವು ಆರು ಸ್ಥಾನಗಳನ್ನು ಹೊಂದಿದ್ದು, ಕಾಂಗ್ರೆಸ್ ಒಂದು ಸ್ಥಾನವನ್ನು ಹೊಂದಿದೆ.

BIG BREAKING NEWS: ಮುರುಘಾ ಶ್ರೀಗಳಿಗೆ ಬಿಗ್ ಶಾಕ್: ಜಾಮೀನು ಅರ್ಜಿ ತಿರಸ್ಕಾರ | Murugha Sri

Share.
Exit mobile version