ಭುವನೇಶ್ವರ(ಒಡಿಶಾ): ಒಡಿಯಾ ನಟ ಬಾಬುಸನ್ ಮೊಹಾಂತಿ, ಅವರ ಪತ್ನಿ ತೃಪ್ತಿ ಮತ್ತು ನಟಿ ಪ್ರಕೃತಿ ಮಿಶ್ರಾ ಶನಿವಾರ ಬೆಳಿಗ್ಗೆ ಜನನಿಬಿಡ ಭುವನೇಶ್ವರ ಬೀದಿಯಲ್ಲಿ ಜಗಳವಾಡಿದ್ದು, ಇದೀಗ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ.

ಏನಿದು ಘಟನೆ?

ಬಾಬುಶಾನ್ ನಟಿ ಪ್ರಕೃತಿ ಮಿಶ್ರಾ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತೃಪ್ತಿ ಸತಪತಿ ಆರೋಪಿಸಿದ್ದು, ನಿನ್ನೆ ಇವರಿಬ್ಬರನ್ನೂ ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದಾರೆ. ಈ ವೇಳೆ ಪ್ರಕೃತಿಯು ತೃಪ್ತಿಯ ಕೂದಲನ್ನು ಹಿಡಿದು ಎಳೆದಿದ್ದಾಳೆ. ನಂತ್ರ, ಇಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪ್ರಕೃತಿ ಅಲ್ಲಿಂದ ಕಾಲ್ಕಿತ್ತು ಅಲ್ಲೇ ಇದ್ದ ಆಟೋ ಹತ್ತಿದ್ದಾಳೆ. ಆದ್ರೂ, ಅವಳನ್ನೇ ಹಿಂಬಾಲಿಸಿದ ತೃಪ್ತಿ ಪ್ರಕೃತಿನ್ನು ಆಟೋ ರಿಕ್ಷಾವನ್ನು ಹತ್ತದಂತೆ ತಡೆದು ʻತನ್ನ ಕುಟುಂಬವನ್ನು ಹಾಳುಮಾಡಿದ್ದಾಳೆʼ ತೃಪ್ತಿ ನಡು ರಸ್ತೆಯಲ್ಲೇ ಕಿರುಚಾಡಿದ್ದಾಳೆ.

ಈ ಘಟನೆಯ ದೃಶ್ಯಾವಳಿಯನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಾಬುಶಾನ್ ಇತ್ತೀಚಿನ ಒಡಿಯಾ ಚಲನಚಿತ್ರ “ಪ್ರೇಮಂ” ನಲ್ಲಿ ಪ್ರಕೃತಿಯೊಂದಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಟಿ ಪ್ರಕೃತಿ ಅವರ ತಾಯಿ ಕೃಷ್ಣಪ್ರಿಯಾ ಮಿಶ್ರಾ ಖರವೇಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಕೆಲವು ಜನರು ತಮ್ಮ ಮಗಳು ಕೆಲಸಕ್ಕೆ ಹೋಗುತ್ತಿದ್ದ ವಾಹನವನ್ನು ತಡೆದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಭುವನೇಶ್ವರ್ ಡಿಸಿಪಿ ಪ್ರತೀಕ್ ಸಿಂಗ್ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನಮಗೆ ಸಿಗುವ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Good News : ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ : 5,159 ಅತಿಥಿ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ ಬಿಡುಗಡೆ

BIGG BREAKING NEWS : ದೇಶದಲ್ಲಿ ಮತ್ತೆ ಇಳಿಕೆ ಕಂಡ ಕೊರೊನಾ : 24 ಗಂಟೆಯಲ್ಲಿ 20,279 ಕೇಸ್ ಪತ್ತೆ

Big news:‌ 2025ರ ವೇಳೆಗೆ ಭಾರತದಲ್ಲಿ ʻಶ್ವಾಸಕೋಶದ ಕ್ಯಾನ್ಸರ್ʼ ಪ್ರಕರಣಗಳು 7 ಪಟ್ಟು ಏರಿಕೆ ಸಾಧ್ಯತೆ: ಅಧ್ಯಯನ

Share.
Exit mobile version