ನವದೆಹಲಿ : ದೇಶದ ಅತಿದೊಡ್ಡ ಹಿಂದೂ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿಯನ್ನ ಬುಧವಾರ (ಫೆಬ್ರವರಿ 26) ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಈ ಸಂದರ್ಭದಲ್ಲಿ ದೇಶಾದ್ಯಂತ ಬ್ಯಾಂಕ್ ರಜೆ ಘೋಷಿಸಲಾಗಿದೆ. ಫೆಬ್ರವರಿ 26ರಂದು ಬ್ಯಾಂಕ್’ಗಳು ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ. ಆದರೆ, ಕೆಲವು ರಾಜ್ಯಗಳು ಮಾತ್ರ ಬ್ಯಾಂಕ್’ಗಳಿಗೆ ರಜೆ ನೀಡಿವೆ.
ಕರ್ನಾಟಕ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಕೇರಳ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಬ್ಯಾಂಕ್’ಗಳು ಮುಚ್ಚಲ್ಪಡುತ್ತವೆ.
ಶಿವರಾತ್ರಿಯು ಉಪವಾಸ, ಶಿವನ ಭಕ್ತಿಪೂರ್ವಕ ಪೂಜೆ ಮತ್ತು ಜಾಗರಣೆಯ ದಿನವಾಗಿದೆ. ಶಿವನ ನೆಚ್ಚಿನ ದಿನವಾದ ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಭಕ್ತರು ನಂಬುತ್ತಾರೆ. ಸಾಮಾನ್ಯವಾಗಿ ಶಿವರಾತ್ರಿಯ ನಂತರದ ದಿನದಂದು ರಜೆ ನೀಡಲಾಗುತ್ತದೆ. ಆದರೆ, ಈ ಬಾರಿ ಶಿವರಾತ್ರಿಯ ದಿನದಂದು ಆರ್‌ಬಿಐ ರಜೆ ಘೋಷಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್ ಪ್ರಕಾರ, ಫೆಬ್ರವರಿ 26 ಬುಧವಾರದಂದು ಕೆಲವು ರಾಜ್ಯಗಳಲ್ಲಿ ಮತ್ತು ಫೆಬ್ರವರಿ 28 ಶುಕ್ರವಾರದಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟಿದ್ದರೂ, ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಪ್ಲಾಟ್‌ಫಾರ್ಮ್’ಗಳು ಮತ್ತು ಎಟಿಎಂಗಳ ಮೂಲಕ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.
ಪೋಷಕರೇ ಎಚ್ಚರ ; ‘ಕಿಂಡರ್ಜಾಯ್’ ತಿನ್ನುವ ಮಕ್ಕಳಿಗೆ ‘ಬ್ಯಾಕ್ಟೀರಿಯಾ ಸೋಂಕು’ ಬರುವ ಅಪಾಯ, ‘WHO’ ಎಚ್ಚರಿಕೆ
ಫೆ.26 ರಿಂದ 28 ರವರೆಗೆ ಕರ್ನಾಟಕ ಇಂಟರನ್ಯಾಶನಲ್ ಟೂರಿಸಂ ಎಕ್ಸಪೋ ಆಯೋಜನೆ: ಸಚಿವ ಎಚ್.ಕೆ.ಪಾಟೀಲ