Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶ

08/03/2026 9:53 AM

ಮಹಿಳೆಯರೇ ಗಮನಿಸಿ : ನಿಮ್ಮ ಸುರಕ್ಷತೆಗಾಗಿ ಮೊಬೈಲ್ ನಲ್ಲಿ ತಪ್ಪದೇ ಇಟ್ಟುಕೊಳ್ಳಲೇಬೇಕು ಈ 3 ಆ್ಯಪ್‌ ಗಳು!

08/03/2026 9:53 AM

ರಾಜ್ಯದ ಗ್ರಾಮೀಣ ಯುವಕರೇ ಗಮನಿಸಿ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

08/03/2026 9:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನುಂಗಣ್ಣ ಸಿಎಂ ಸಿದ್ದರಾಮಯ್ಯ ಜನರನ್ನು ಲೂಟಿ ಮಾಡುತ್ತಿದ್ದಾರೆ, ದಂಗೆ ಎದ್ದು ಸರ್ಕಾರವನ್ನು ಕಿತ್ತು ಹಾಕಬೇಕಿದೆ: ಆರ್‌.ಅಶೋಕ್
KARNATAKA

ನುಂಗಣ್ಣ ಸಿಎಂ ಸಿದ್ದರಾಮಯ್ಯ ಜನರನ್ನು ಲೂಟಿ ಮಾಡುತ್ತಿದ್ದಾರೆ, ದಂಗೆ ಎದ್ದು ಸರ್ಕಾರವನ್ನು ಕಿತ್ತು ಹಾಕಬೇಕಿದೆ: ಆರ್‌.ಅಶೋಕ್

By kannadanewsnow0917/06/2024 4:58 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನುಂಗಣ್ಣನಂತೆ ಎಲ್ಲವನ್ನೂ ನುಂಗುತ್ತಿದ್ದಾರೆ. ಅದರ ಜೊತೆಗೆ ತೈಲ ದರ ಏರಿಕೆ ಮಾಡಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಜನರು ದಂಗೆ ಎದ್ದು ಸರ್ಕಾರವನ್ನು ಕಿತ್ತುಹಾಕಬೇಕಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎರಡು ನಾಲಿಗೆ ಇದೆ. ಬಿಜೆಪಿ ಸರ್ಕಾರ ಪೆಟ್ರೋಲ್‌ ದರ ಏರಿಸಿದ್ದಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನೆ ಮಾಡಿದ್ದರು. ಈಗ ಮೂರು ರೂಪಾಯಿ ಹೆಚ್ಚು ಮಾಡಿದ ಕಾಂಗ್ರೆಸ್‌ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಈಗ ಸಿದ್ದರಾಮಯ್ಯ ಎಂದರೆ ನುಂಗಣ್ಣ ಎಂದು ವ್ಯಂಗ್ಯವಾಡಿದರು.

ತೈಲ ಬೆಲೆ ಏರಿಯಾದರೆ ಸಿಮೆಂಟ್‌, ತರಕಾರಿ ಎಲ್ಲ ಬೆಲೆಯೂ ಏರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಯಾವ ಬೆಲೆಗಳು ಹೆಚ್ಚಲಿದೆ ಎಂದು ತಿಳಿಸಲಿ. ಗ್ಯಾರಂಟಿ ಯೋಜನೆಗಳೆಂದು ಹೇಳಿ ಎಲ್ಲರಿಗೂ ಒಂದು ಲಕ್ಷ, ಎರಡು ಸಾವಿರ ಕೋಡುತ್ತೇವೆ ಎಂದರು. ರಾಹುಲ್‌ ಗಾಂಧಿ ಇನ್ನೂ ಮುಂದೆ ಹೋಗಿ ಟಕಾಟಕ್‌ ಎಂದು ಹಾಕುತ್ತೇನೆ ಎಂದರು. ಆದರೆ ಟಕಾಟಕ್‌ ಎಂದು ಜೇಬಿಗೆ ಕತ್ತರಿ ಹಾಕಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಬಸ್‌ ಟಿಕೆಟ್‌ ದರ ಏರಿಕೆ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದು, ಟಿಕೆಟ್‌ ದರ ಶೇ.12 ರಷ್ಟು ಹೆಚ್ಚಿಸಲು ಚರ್ಚೆಯಾಗಿದೆ. ಕಾಫಿ ಟೀ ದರ ಕೂಡ ಹೆಚ್ಚಲಿದೆ. ಕಾಂಗ್ರೆಸ್‌ ಸತ್ತರೆ ತಿಥಿಗೆ ಮಾಡುವ ಉದ್ದಿನ ವಡೆಯ ಬೆಲೆ ಕೂಡ ಹೆಚ್ಚಾಗಲಿದೆ ಎಂದರು.

ಗ್ಯಾರಂಟಿಗೆ 55,000 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದಿದ್ದರು. ಬಳಿಕ ನಮ್ಮದೇ ಹಣವನ್ನು ದರೋಡೆ ಮಾಡಿ ನಮಗೆ ಮರಳಿ ನೀಡುತ್ತಿದ್ದಾರೆ. ಒಂದು ವರ್ಷವಾದರೂ ಅಭಿವೃದ್ಧಿ ಕಾರ್ಯ ನಡೆದಿಲ್ಲ, ಶಿಕ್ಷಕರಿಗೆ ಸಂಬಳ ನೀಡಿಲ್ಲ, ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿಲ್ಲ. ಬೆಂಗಳೂರನ್ನು ಬ್ರ್ಯಾಂಡ್‌ ಮಾಡುತ್ತೇನೆಂದು ಹೇಳಿ ಭಾಗ ಮಾಡಲು ಮುಂದಾಗಿದ್ದಾರೆ. ಬೆಂಗಳೂರನ್ನು ಭಾಗ ಮಾಡಿದರೆ ಕಾಂಗ್ರೆಸ್‌ ಕಚೇರಿಯನ್ನು ಜನರು ಭಾಗ ಮಾಡುತ್ತಾರೆ. ಈಗ ಚುನಾವಣೆ ನಡೆದರೆ ಕಾಂಗ್ರೆಸ್‌ ಠೇವಣಿ ಕಳೆದುಕೊಳ್ಳಲಿದೆ. ಲೋಕಸಣೆ ಚುನಾವಣೆಯಲ್ಲಿ 143 ಕ್ಷೇತ್ರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲೂ ಹೆಚ್ಚು ಮತಗಳು ಬಿಜೆಪಿಗೆ ಬಂದಿದೆ ಎಂದರು.

ದಲಿತರ ಹಣ ನುಂಗಿದ ಮುಖ್ಯಮಂತ್ರಿ

ದಲಿತರ 187 ಕೋಟಿ ರೂಪಾಯಿ ನುಂಗಿ ಸಚಿವ ಬಿ.ನಾಗೇಂದ್ರ ಔಟ್‌ ಆಗಿದ್ದಾರೆ. ಇನ್ನು ಎರಡನೇ ವಿಕೆಟ್‌ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿದೆ. ಸಚಿವ ನಾಗೇಂದ್ರ 20 ಪರ್ಸೆಂಟ್‌ ಜೇನು ಕಿತ್ತಿದ್ದು ಮಾತ್ರ, ಆದರೆ 80 ಪರ್ಸೆಂಟ್‌ ಜೇನನ್ನು ಸಿಎಂ ಸಿದ್ದರಾಮಯ್ಯ ಹೊಡೆದಿದ್ದಾರೆ. ಈ ಹಣ ತೆಲಂಗಾಣಕ್ಕೆ ಹೋಗಿ, ಬಳಿಕ ಬಾರ್‌ಗಳಿಗೆ ಹೋಗಿದೆ. ದಲಿತರ ಉದ್ಯಮಗಳಿಗೆ, ಅಂಗಡಿಗಳಿಗೆ, ಅವರ ಮಕ್ಕಳ ಸ್ಕಾಲರ್‌ಶಿಪ್‌ಗೆ ಈ ಹಣ ಕೊಡಬೇಕಿತ್ತು. ಚೆಕ್‌ನಲ್ಲೇ ಹಗಲು ದರೋಡೆ ಮಾಡಿದ್ದಾರೆ. ಇದರಿಂದಾಗಿ ನಿಷ್ಠಾವಂತ ಅಧಿಕಾರಿ ಸತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಜನರು ಕಲುಷಿತ ನೀರು ಕುಡಿದು ಸಾಯುತ್ತಿದ್ದರೂ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರಿ ಆಸ್ಪತ್ರೆಗೆ ಔಷಧಿ ಖರೀದಿಗೆ, ಶಾಲೆಗೆ ಪುಸ್ತಕ ಕೊಡಲು ಹಣವಿಲ್ಲ. ಇದಕ್ಕಾಗಿಯೇ ತೈಲ ಬೆಲೆ ಏರಿಕೆ ಮಾಡಿ ಹಣ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.

ಬಂಡವಾಳ ಬಯಲು ಮಾಡುತ್ತೇವೆ

ಕಾಂಗ್ರೆಸ್‌ ಸರ್ಕಾರದ ದುರಾಡಳಿತದ ವಿರುದ್ಧ ಹಾಗೂ ಸರ್ಕಾರದ ಬಂಡವಾಳ ಬಯಲು ಮಾಡಲು ಬಿಜೆಪಿ ಇನ್ನಷ್ಟು ಹೋರಾಟ ಮಾಡಲಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆಯನ್ನು ದಿವಾಳಿಯಾಗಿಸಿದ್ದಾರೆ. ಸಾಲ ಪಡೆಯಲು ಬಿಬಿಎಂಪಿ ಕಚೇರಿಗಳನ್ನು ಅಡಮಾನ ಇಡಲು ಮುಂದಾಗಿದ್ದಾರೆ. ಹೀಗೆಯೇ ಬಿಟ್ಟರೆ ವಿಧಾನಸೌಧವನ್ನೂ ಅಡ ಇಡುತ್ತಾರೆ. ಎಲ್ಲರೂ ದಂಗೆ ಎದ್ದು ಈ ಸರ್ಕಾರವನ್ನು ಕಿತ್ತು ಹಾಕಬೇಕಿದೆ ಎಂದು ಕರೆ ನೀಡಿದರು.

Good News: ರಾಜ್ಯ ಸರ್ಕಾರದಿಂದ 1,419 ಸರ್ಕಾರಿ ಶಾಲೆಗಳಲ್ಲಿ ‘ಆಂಗ್ಲ ಮಾಧ್ಯಮ ತರಗತಿ’ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್

ದೇಶದ ರೈತರಿಗೆ ಗುಡ್ ನ್ಯೂಸ್ ; ನಾಳೆ ‘ಪಿಎಂ ಕಿಸಾನ್ 17ನೇ ಕಂತು’ ಬಿಡುಗಡೆ, ಅನ್ನದಾತರ ಖಾತೆಗೆ ₹2000 ಜಮೆ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶ

08/03/2026 9:53 AM1 Min Read

ಮಹಿಳೆಯರೇ ಗಮನಿಸಿ : ನಿಮ್ಮ ಸುರಕ್ಷತೆಗಾಗಿ ಮೊಬೈಲ್ ನಲ್ಲಿ ತಪ್ಪದೇ ಇಟ್ಟುಕೊಳ್ಳಲೇಬೇಕು ಈ 3 ಆ್ಯಪ್‌ ಗಳು!

08/03/2026 9:53 AM2 Mins Read

ರಾಜ್ಯದ ಗ್ರಾಮೀಣ ಯುವಕರೇ ಗಮನಿಸಿ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

08/03/2026 9:49 AM2 Mins Read
Recent News

BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶ

08/03/2026 9:53 AM

ಮಹಿಳೆಯರೇ ಗಮನಿಸಿ : ನಿಮ್ಮ ಸುರಕ್ಷತೆಗಾಗಿ ಮೊಬೈಲ್ ನಲ್ಲಿ ತಪ್ಪದೇ ಇಟ್ಟುಕೊಳ್ಳಲೇಬೇಕು ಈ 3 ಆ್ಯಪ್‌ ಗಳು!

08/03/2026 9:53 AM

ರಾಜ್ಯದ ಗ್ರಾಮೀಣ ಯುವಕರೇ ಗಮನಿಸಿ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

08/03/2026 9:49 AM

​’ಭಾರತದ ಏಳಿಗೆಯನ್ನು ನಿರ್ಧರಿಸುವುದು ನಾವೇ’: ಅಮೆರಿಕ ಅಧಿಕಾರಿಯ ‘ಆರ್ಥಿಕ ಪೈಪೋಟಿ’ ಹೇಳಿಕೆಗೆ ಜೈಶಂಕರ್ ಖಡಕ್ ಪ್ರತ್ಯುತ್ತರ!

08/03/2026 9:41 AM
State News
KARNATAKA

BIG NEWS : ರಾಜ್ಯದಲ್ಲಿ 20 ವರ್ಷ ಸೇವೆ ಪೂರೈಸಿರುವ ವೈದ್ಯಾಧಿಕಾರಿಗಳಿಗೆ ಗುಡ್ ನ್ಯೂಸ್ : `ವೇತನ ಮುಂಬಡ್ತಿ’ ನೀಡಿ ಸರ್ಕಾರ ಆದೇಶ

By kannadanewsnow5708/03/2026 9:53 AM KARNATAKA 1 Min Read

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ಇಲಾಖೆಯಲ್ಲಿ…

ಮಹಿಳೆಯರೇ ಗಮನಿಸಿ : ನಿಮ್ಮ ಸುರಕ್ಷತೆಗಾಗಿ ಮೊಬೈಲ್ ನಲ್ಲಿ ತಪ್ಪದೇ ಇಟ್ಟುಕೊಳ್ಳಲೇಬೇಕು ಈ 3 ಆ್ಯಪ್‌ ಗಳು!

08/03/2026 9:53 AM

ರಾಜ್ಯದ ಗ್ರಾಮೀಣ ಯುವಕರೇ ಗಮನಿಸಿ : ‘ಗ್ರಾಮ ಒನ್’ಕೇಂದ್ರ ಆರಂಭಿಸಲು ಸುವರ್ಣಾವಕಾಶ, ಅರ್ಜಿ ಸಲ್ಲಿಕೆ ಕುರಿತು ಇಲ್ಲಿದೆ ಮಾಹಿತಿ

08/03/2026 9:49 AM

SHOCKING : ಕಲಬುರಗಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ‘ಲೈಂಗಿಕ ದೌರ್ಜನ್ಯ’ : ಆರೋಪಿ ಪರಾರಿ!

08/03/2026 9:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.