ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳಸಿಕೊಳ್ಳಲು ಎನ್.ಎಸ್.ಎಸ್. ಸಹಕಾರಿ. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಎನ್.ಎಸ್.ಎಸ್. ಸೇರುವ ಮೂಲಕ ಸಾಮಾಜಿಕ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಎಸ್.ಎಸ್.ಬೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಲ್ಲಿಬೀಡು ಗ್ರಾಮದಲ್ಲಿ ಹೆಗ್ಗೋಡಿನ ಎಸ್.ರೂಪಶ್ರೀ ಪದವಿಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಒಂದು ವಾರಗಳ ಎನ್.ಎಸ್.ಎಸ್. ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಬೆಳೆಸುವಲ್ಲಿ ಎನ್.ಎಸ್.ಎಸ್. ಪ್ರಮುಖಪಾತ್ರ ವಹಿಸುತ್ತದೆ. ಸಾರ್ವಜನಿಕ ಬದುಕು, ಪರಿಸರ ಸ್ವಚ್ಚತೆ, ಕೃಷಿ, ಮನುಷ್ಯ ಸಂಬಂಧ, ಜೀವನ ರೂಪಿಸಿಕೊಳ್ಳುವುದು ಸೇರಿ ವಿವಿಧ ಹಂತದಲ್ಲಿ ಸಹಕಾರಿಯಾಗುತ್ತದೆ. ಶಿಕ್ಷಣದ ಜೊತೆಗೆ ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯ ಪಾಲ್ಗೊಳ್ಳಬೇಕು. ಬಹುತೇಕ ಮಕ್ಕಳಿಗೆ ಗ್ರಾಮೀಣ ಬದುಕಿನ ಪರಿಚಯ ಇರುವುದಿಲ್ಲ. ಎನ್.ಎಸ್.ಎಸ್. ಗ್ರಾಮೀಣ ಬದುಕಿನ ಚಿತ್ರಣ ತೆರೆದಿಡುತ್ತದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಕೇಶವ ಸಂಪೆಕೈ, ವಿದ್ಯಾರ್ಥಿಗಳಲ್ಲಿ ನಾನು ಎನ್ನುವ ಮನೋಭಾವ ಹೋಗಿ, ನಾವು ಎನ್ನುವ ಮನಸ್ಥಿತಿ ಜಾಗೃತವಾಗಬೇಕು. ಸಮೂಹದ ಪರಿಕಲ್ಪನೆಯನ್ನು ಎನ್.ಎಸ್.ಎಸ್. ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. ರೂಪಶ್ರೀ ಪದವಿಪೂರ್ವ ಕಾಲೇಜು ಮಕ್ಕಳ ಶೈಕ್ಷಣಿಕ ಪ್ರಗತಿ ಜೊತೆಗೆ ಅವರಲ್ಲಿ ಸಾಮಾಜಿಕ ಮನೋಭಾವ ಬಿತ್ತುವ ಕೆಲಸ ಮಾಡುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತಿ ಆದಿತ್ಯ, ಸದಸ್ಯ ರಾಮಚಂದ್ರ ಹಾಬಿಗೆ, ಪ್ರಾಚಾರ್ಯ ತಿಮ್ಮಪ್ಪ ಎಂ.ಎಂ., ವಿನಯಕುಮಾರ್ ಕೆ.ಆರ್., ಇದೇ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಪುತ್ರ ವಿಯಾನ್ ಕಾರ್ಣಿಕ್, ಹಿರಿಯ ಉಪನ್ಯಾಸಕ ರಾಜಪ್ಪ ಎನ್.ಜೆ. ಅವರನ್ನು ಸನ್ಮಾನಿಸಲಾಯಿತು. ಕುಶ ಎಂ.ಆರ್. ಸ್ವಾಗತಿಸಿದರು. ಅರ್ಚನಾ ವಂದಿಸಿದರು. ವಿಷ್ಣುಮೂರ್ತಿ ನಿರೂಪಿಸಿದರು.
BIG NEWS: ಕೊಲೆಯಾದವನ ಬರ್ತ್‌ಡೇ ದಿನವೇ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ
ಅಂತರರಾಷ್ಟ್ರೀಯ ಸಂಸ್ಥೆ ಸಿಐಟಿಎಸ್ ನಿಂದ ವಂತಾರ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಶ್ಲಾಘನೆ








