ನವದೆಹಲಿ : NPSನಿಂದ ಹಣವನ್ನ ಭಾಗಶಃ ಹಿಂತೆಗೆದುಕೊಳ್ಳುವ ನಿಯಮಗಳನ್ನ ಈ ತಿಂಗಳು ಬದಲಾಯಿಸಲಾಗಿದೆ. ಇದಾದ ಬಳಿಕ ಎನ್‍ಪಿಎಸ್’ನಿಂದ ಹಣ ಹಿಂಪಡೆಯುವ ವಿಧಾನ ಸಂಪೂರ್ಣ ಬದಲಾಗಿದೆ. ಈ ನಿಯಮವನ್ನ ಪರಿಚಯಿಸಿದ ನಂತರ, ನಿಮ್ಮ ಕೊಡುಗೆಯ ಒಂದು ಭಾಗವನ್ನ ಮಾತ್ರ ನೀವು ಹಿಂಪಡೆಯಬಹುದು. ಹೀಗಾಗಿ NPS ನಿಂದ ಹಣವನ್ನ ಹಿಂತೆಗೆದುಕೊಳ್ಳುವ ಯೋಚನೆಯಲ್ಲಿದ್ರೆ ನೀವು ಈ ನಿಯಮದ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು.
NPSನಿಂದ ಹಣ ಹಿಂಪಡೆಯಲು ಹೊಸ ನಿಯಮವೇನು.?
PFRDA ಹೊರಡಿಸಿದ ನಿಯಮಗಳ ಪ್ರಕಾರ, ಈಗ ನೀವು NPS ಖಾತೆಯನ್ನ ತೆರೆದ ಮೂರು ವರ್ಷಗಳ ನಂತರ ಮಾತ್ರ ಭಾಗಶಃ ಹಿಂಪಡೆಯಬಹುದು. ಇದು ನೀವು ಪಿಂಚಣಿ ಖಾತೆಗೆ ನೀಡಿದ ಕೊಡುಗೆಯ 25 ಪ್ರತಿಶತವನ್ನ ಮೀರುವಂತಿಲ್ಲ. ಈ ನಿಯಮವನ್ನ ಜನವರಿ 12, 2024ರಂದು PFRDA ಹೊರಡಿಸಿದೆ ಮತ್ತು ಇದು ಫೆಬ್ರವರಿ 1, 2024 ರಿಂದ ಜಾರಿಗೆ ಬಂದಿದೆ.
ಉದಾಹರಣೆ : ಎನ್ಪಿಎಸ್ ಖಾತೆಯನ್ನ ತೆರೆದ ಮೂರು ವರ್ಷಗಳಲ್ಲಿ ನೀವು 8 ಲಕ್ಷ ರೂ.ಗಳನ್ನು ಕೊಡುಗೆ ನೀಡಿದ್ದರೆ ಮತ್ತು ಈ ಅವಧಿಯಲ್ಲಿ ನಿಧಿಯಲ್ಲಿನ ಹಣವು 15 ಲಕ್ಷ ರೂ.ಗೆ ಏರಿದ್ದರೆ, ನೀವು ನಿಮ್ಮ ಕೊಡುಗೆಯ 25 ಪ್ರತಿಶತವನ್ನ (8 ಲಕ್ಷ) ಮಾತ್ರ ಹಿಂಪಡೆಯಬಹುದು.
NPS ನಿಂದ ನೀವು ಎಷ್ಟು ಬಾರಿ ಹಿಂಪಡೆಯಬಹುದು.?
NPS ಅನ್ನು ತೆರೆದ ನಂತರ, ನಿಮ್ಮ ಪಿಂಚಣಿ ಖಾತೆಯಿಂದ ನೀವು ಗರಿಷ್ಠ ಮೂರು ಬಾರಿ ಮಾತ್ರ ಹಣವನ್ನು ಹಿಂಪಡೆಯಬಹುದು. ಎರಡು ಹಿಂಪಡೆಯುವಿಕೆಗಳ ನಡುವೆ ಕನಿಷ್ಠ 5 ವರ್ಷಗಳ ಅಂತರ ಇರಬೇಕು ಎಂಬ ನಿಯಮವೂ ಇದೆ. ಆದಾಗ್ಯೂ, ನೀವು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು ಗಂಭೀರವಾದ ಅನಾರೋಗ್ಯವನ್ನು ಹೊಂದಿದ್ದರೆ ಈ ನಿಯಮವು ಅನ್ವಯಿಸುವುದಿಲ್ಲ.
NPS ನಿಂದ ನೀವು ಯಾವಾಗ ಹಣವನ್ನ ಹಿಂಪಡೆಯಬಹುದು.?
* ಮಕ್ಕಳ ಉನ್ನತ ಶಿಕ್ಷಣ
* ಮಕ್ಕಳ ಮದುವೆ
* ನಿಮ್ಮ ಮೊದಲ ಮನೆಯನ್ನು ಖರೀದಿಸಲು
* ಒಂದು ನಿರ್ದಿಷ್ಟ ಕಾಯಿಲೆಗೆ
* ವೈದ್ಯಕೀಯ ವೆಚ್ಚಗಳಿಗೆ
* ಹೊಸ ವ್ಯವಹಾರ ಮತ್ತು ಸ್ಟಾರ್ಟ್ ಅಪ್ ಪ್ರಾರಂಭಿಸುವುದು
ನಾನು ಹೇಗೆ ಹಿಂಪಡೆಯಬಹುದು?
NPS ಹಣವನ್ನು ಹಿಂಪಡೆಯಲು, ನೀವು ಸ್ವಯಂ ಘೋಷಣೆ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ಇದನ್ನು CIA ಅಥವಾ ಪಾಯಿಂಟ್ ಆಫ್ ಪ್ರೆಸೆನ್ಸ್ ಮೂಲಕ ಠೇವಣಿ ಇಡಬೇಕಾಗುತ್ತದೆ. ಚಂದಾದಾರರು ಯಾವುದೇ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರು ತಮ್ಮ ಕುಟುಂಬ ಸದಸ್ಯರ ಮೂಲಕ ಹಿಂಪಡೆಯಲು ಅರ್ಜಿಯನ್ನ ಸಲ್ಲಿಸಬಹುದು.