ಬೆಂಗಳೂರು: ಆಟೋ ಹಾಗೂ ಬೈಕ್ ಗಳನ್ನೇ ಕದಿಯುವಂತ ವೃತ್ತಿಯಲ್ಲಿ ತೊಡಗಿದ್ದಂತ, ವೃತ್ತಿಯನ್ನಾಗಿಸಿಕೊಂಡಿದ್ದಂತ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ಠಾಣೆಯ ಪೊಲೀಸರು ತಮ್ಮ ಠಾಣೆ ವ್ಯಾಪ್ತಿ ಹಾಗೂ ಅತ್ತಿಬೆಲೆ, ಆನೇಕಲ್ ನಲ್ಲಿ ಆಟೋ, ಬೈಕ್ ಕದ್ದಿದ್ದಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಈ ಸಂಬಂಧ ತನಿಖೆಗೆ ಇಳಿದು ಆಟೋ, ಬೈಕ್ ಕದಿಯೋದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಂತ ಕುಖ್ಯಾತ ಕಳ್ಳ ಅರ್ಬಾಜ್ ನನ್ನು ಬಂಧಿಸಿದ್ದಾರೆ.
ಶಾನುಭೋಗರಹಳ್ಳಿಯ ನಿವಾಸಿಯಾಗಿದ್ದ ಕುಖ್ಯಾತ ಕಳ್ಳ ಅರ್ಬಾಜ್ ನನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದನು. ಆ ಬಳಿಕವೂ ಬದಲಾಗದೇ ಮತ್ತೆ ಆಟೋ, ಬೈಕ್ ಕದಿಯೋದನ್ನೇ ತನ್ನ ಕೆಲಸವಾಗಿಸಿಕೊಂಡಿದ್ದನು. ಕೆಲ ದಿನಗಳ ಹಿಂದೆ ನಡೆದಿದ್ದಂತ ಕಳ್ಳತನ ಪ್ರಕರಣದ ತನಿಖೆ ನಡೆಸಿದ ವೇಳೆಯಲ್ಲಿ ಅರ್ಬಾಜ್ ಕೈಚಳಕ ಪತ್ತೆಯಾಗಿತ್ತು. ಇದೀಗ ಖಚಿತ ಮಾಹಿತಿ ಮೇರೆಗೆ ಬನ್ನೇರುಘಟ್ಟ ಠಾಣೆ ಪೊಲೀಸರು ದಾಳಿ ಮಾಡಿ, ಕುಖ್ಯಾತ ಕಳ್ಳ ಅರ್ಬಾಜ್ ನನ್ನು ಬಂಧಿಸಿದ್ದಾರೆ.
ಪ್ರಿಯತಮೆ ಕೈಕೊಟ್ಟಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಕರ ಚಿಕಿತ್ಸೆ ಫಲಿಸದೇ ಸಾವು
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!