ಬೆಂಗಳೂರು: ಉಪನ್ಯಾಸಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವಂತ 814 ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕೊರತೆ, ಖಾಲಿ ಇರುವ ವಿವಿಧ ವಿಷಯಗಳ ನೇರ ನೇಮಕಾತಿ ಕೋಟಾದಡಿ ಒಟ್ಟು 814 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ ಅಂತ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಒಟ್ಟಾರೆ 4259 ಉಪನ್ಯಾಸಕರ ಕೊರತೆ ಇದೆ. ಆದರೇ ಅವುಗಳಲ್ಲಿ ಈಗ ಸರ್ಕಾರವು 814 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದೆ ಎಂದರು.
ಯಾವ ಯಾವ ವಿಷಯದ ಉಪನ್ಯಾಸಕರ ಎಷ್ಟು ಹುದ್ದೆ ಭರ್ತಿ?
- ಕನ್ನಡ ಉಪನ್ಯಾಸಕರು – 105 ಹುದ್ದೆ
- ಇಂಗ್ಲೀಷ್ ಉಪನ್ಯಾಸಕರು – 125 ಹುದ್ದೆ
- ಇತಿಹಾಸ – 124 ಹುದ್ದೆಗಳು
- ಅರ್ಥಶಾಸ್ತ್ರ – 184 ಹುದ್ದೆ
- ಭೂಗೋಳಶಾಸ್ತ್ರ – 20
- ವಾಣಿಜ್ಯ ಶಾಸ್ತ್ರ – 100 ಹುದ್ದೆಗಳು
- ಸಮಾಜಶಾಸ್ತ್ರ ಉಪನ್ಯಾಸಕರು – 79 ಹುದ್ದೆ
- ರಾಜ್ಯಶಾಸ್ತ್ರ – 79
- ಮನಃಶಾಸ್ತ್ರ ಉಪನ್ಯಾಸಕರು – 02
- ಗಣಕ ವಿಜ್ಞಾನ ಉಪನ್ಯಾಸಕರು – 06 ಹುದ್ದೆ.
ಒಟ್ಟು ಕಲ್ಯಾಣ ಕರ್ನಾಟಕ ಭಾಗದ 36 ಉಪನ್ಯಾಸಕರ ಹುದ್ದೆ, ಕಲ್ಯಾಣ ಕರ್ನಾಟಕೇತರ 778 ಹುದ್ದೆಗಳು ಸೇರಿದಂತೆ 814 ಉಪನ್ಯಾಸಕರ ಹುದ್ದೆ ಭರ್ತಿಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
‘BBMP ವ್ಯಾಪ್ತಿ’ಯಲ್ಲಿ ಸ್ಥಗಿತಗೊಂಡಿದ್ದ ’11 ಇಂದಿರಾ ಕ್ಯಾಂಟೀನ್’ಗಳು ಪುನರಾರಂಭ | Indira Canteen
ರಾಜ್ಯದಲ್ಲಿ 6 ತಿಂಗಳಲ್ಲಿ 1,791 ಡ್ರಗ್ಸ್ ಪ್ರಕರಣಗಳು ದಾಖಲು : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ