ಬೆಂಗಳೂರು : ಬಾಲ್ಯ ವಿವಾಹ ತಡೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಬಾಲ್ಯ ವಿವಾಹ ಕಂಡು ಬಂದ್ರೆ ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮದುವೆ ಮಾಡಿಸುವುದು ಕಾನೂನಿಗೆ ವಿರುದ್ಧವಾಗಿದೆ. ಬಾಲ್ಯ ವಿವಾಹವು ತಾಯಿ ಮತ್ತು ಶಿಶು ಮರಣ ಪ್ರಮಾಣ ಏರಿಕೆಯಾಗುವುದಕ್ಕೂ ಪ್ರಮುಖ ಕಾರಣವಾಗಿದೆ.
ಎಲ್ಲಿಯೇ ಬಾಲ್ಯವಿವಾಹ ಕಂಡು ಬಂದರೂ ತಕ್ಷಣವೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ದೂರು ದಾಖಲಿಸಿ. ಬಾಲ್ಯ ವಿವಾಹ ತಡೆಗೆ ಕೈ ಜೋಡಿಸಿ.