ನವದೆಹಲಿ: ಜಿಎಸ್ ಟಿ ತೆರಿಗೆ ಪಾವತಿಯಲ್ಲಿನ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.

ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಜಿಎಸ್ ಟಿ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಯನ್ನು ಮಾಡಲಾಗಿದೆ. ತೆರಿಗೆದಾರರು ಹಿಂದಿನ ತೆರಿಗೆ ಅವಧಿಯ ಜಿಎಸ್ ಟಿ ಆರ್-1 ಅನ್ನು ಮೊದಲು ಪ್ರಸ್ತುತ ಅವಧಿಯ ಜಿಎಸ್ ಟಿಆರ್-1 ಅನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದೆ.

BIGG NEWS : ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿಲ್ಲಾ. ಇದು ಟ್ರಬಲ್ ಇಂಜಿನ್ ಸರ್ಕಾರ : ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಇನ್ನೂ ಹೇಳಿದ ತೆರಿಗೆ ಅವಧಿಗೆ ಜಿಎಸ್ ಟಿಆರ್-3ಬಿ ಅನ್ನು ಸಲ್ಲಿಸುವ ಮೊದಲು ಪ್ರಸ್ತುತ ಅವಧಿಗೆ ಜಿಎಸ್ ಟಿಆರ್-1 ಅನ್ನು ಸಲ್ಲಿಸಬೇಕಾಗುತ್ತದೆ ಎಂದು ಜಿಎಸ್ ಟಿ ತೆರಿಗೆ ಪಾವತಿಯಲ್ಲಿನ ಈ ಎರಡು ಬದಲಾವಣೆ ಬಗ್ಗೆ ಮಾಹಿತಿ ನೀಡಿದೆ.

ಜಿಎಸ್ ಟಿಆರ್-1 ನಮೂನೆ ಎಂದರೇನು?

ಜಿಎಸ್ ಟಿಆರ್-1 ನಮೂನೆ ಎಂದರೇ ಹೊರಗಿನ ಸರಬರಾಜುಗಳನ್ನು ಮಾಡಿ ಸಲ್ಲಿಸಿದ ವರದಿಯಾಗಿದೆ. ಕ್ಯೂ ಆರ್ ಎಂಪಿ ತೆರಿಗೆದಾರರಿಂದ ತ್ರೈಮಾಸಿಕ ಆಧಾರದ ಮೇಲೆ ಆಗಿದ್ದರೇ, ಇತರ ತೆರಿಗೆದಾರರಿಂದ ಮಾಸಿಕ ಆಧಾರದ ಮೇಲೆ ಪಾವತಿಸುವಂತ ತೆರಿಗೆಯಾಗಿದೆ.

BREAKING NEWS : ‘ಮುರುಘಾ ಶ್ರೀ’ ಪೋಕ್ಸೋ ಕೇಸ್ : ಒಡನಾಡಿ ಸಂಸ್ಥೆಯ ನಾಲ್ವರು ಸಿಬ್ಬಂದಿ ಪೊಲೀಸ್ ವಶಕ್ಕೆ , ವಿಚಾರಣೆ

ನೀವು ಜಿಎಸ್ ಟಿಆರ್-1 ನಮೂನೆಯನ್ನು ಯಾವಾಗ ಸಲ್ಲಿಸಬೇಕು.?

ಈ ತೆರಿಗೆಯನ್ನು ಎಲ್ಲಾ ತೆರಿಗೆದಾರರು ( ಕ್ಯೂ ಆರ್ ಎಂಪಿ ತೆರಿಗೆದಾರರನ್ನು ಹೊರತುಪಡಿಸಿ), ಮುಂಬರುವ ತಿಂಗಳ 11ನೇ ತಾರೀಖಿನ ಮೊದಲು ಅಥವಾ ಅದಕ್ಕೂ ಮುಂಚಿತವಾಗಿ ಪ್ರತಿ ತಿಂಗಳು ಜಿಎಸ್ ಟಿಆರ್-1 ನಮೂನೆಯನ್ನು ಸಲ್ಲಿಸಬೇಕು.

ಕ್ಯು ಆರ್ ಎಂಪಿ ತೆರಿಗೆದಾರರು ತ್ರೈಮಾಸಿಕ ಜಿಎಸ್ ಟಿಆರ್-1 ನಮೂನೆಯನ್ನು ಸಂಬಂಧಿತ ತ್ರೈಮಾಸಿಕವನ್ನು ಅನುಸರಿಸುವ ತಿಂಗಳ 13ನೇ ತಾರೀಕಿನೊಳಗೆ ಸಲ್ಲಿಸಬೇಕು.

Share.
Exit mobile version