ಬೆಂಗಳೂರು : ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ಮಂಡಳಿಯು ವೈದ್ಯಕೀಯ ಸಹಾಯಧನವನ್ನು ನೀಡುತ್ತದೆ. ಆಸ್ಪತ್ರೆಗೆ ದಾಖಲಾದ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ವೈದ್ಯಕೀಯ ಸಹಾಯಧನ
ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ಮಂಡಳಿಯು ವೈದ್ಯಕೀಯ ಸಹಾಯಧನವನ್ನು ನೀಡುತ್ತದೆ
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
* ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ
* ರೇಷನ್ ಕಾರ್ಡ್ ಪ್ರತಿ
* ನಮೂನೆ 22A, ಆಸ್ಪತ್ರೆಯಿಂದ ಭರ್ತಿ ಮಾಡಿದ ಅರ್ಜಿ
* ಬ್ಯಾಂಕ್ ಪಾಸ್ ಬುಕ್ ಪ್ರತಿ
* ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ
* ಆಸ್ಪತ್ರೆಯ ಬಿಲ್ಲುಗಳು
* ಬಿಡುಗಡೆ ಪ್ರಮಾಣ ಪತ್ರ