ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಲ್ಲಿ Leave Management System ಅನುಷ್ಠಾನ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
eLeave ಒಂದು ಸರಳ ಹಾಗೂ ಅನುಕೂಲಕರ workflow ಆಧಾರಿತ ವ್ಯವಸ್ಥೆಯಾಗಿದ್ದು, ಇದರ ಮೂಲಕ ಆನ್‌ಲೈನ್‌ನಲ್ಲಿ ರಜೆಗೆ ಅರ್ಜಿ ಸಲ್ಲಿಸಬಹುದು, ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು, ತೆಗೆದುಕೊಂಡ ರಜೆಗಳ ವಿವರ ಹಾಗೂ ಬಾಕಿ ರಜೆಗಳ ಮಾಹಿತಿಯನ್ನು ಪಡೆಯಬಹುದು. ಪೂರ್ವ ನಿರ್ಧಾರಿತ workflow ನಲ್ಲಿರುವ ಶ್ರೇಣಿಯ ಮೂಲಕ ಸ್ವಯಂಚಾಲಿತವಾಗಿ ರಜೆ ಮಂಜೂರಾತಿ ಪ್ರಕ್ರಿಯೆ ನಡೆಯುತ್ತದೆ. ಸರ್ಕಾರದ ಪ್ರಸ್ತುತ ನಿಯಮಾವಳಿಗಳ ಪ್ರಕಾರ ರಜೆ ನಿಯಮಗಳನ್ನು ಹೊಂದಿಸಲಾಗಿದ್ದು, ಪಾತ್ರಾಧಾರಿತ ರಜೆ ಪ್ರಕ್ರಿಯೆಯನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಯು ಕಾಗದ ಅಧಾರಿತ ಅರ್ಜಿಗಳನ್ನು ತೊಡೆದುಹಾಕಿ. ವೇಗವಾದ ಮತ್ತು ಸಮಯಬದ್ಧ ಪ್ರಕ್ರಿಯೆಗೆ ನೆರವಾಗುತ್ತದೆ. ಮಂಜೂರಾತಿ ಪ್ರಾಧಿಕಾರವು ರಜೆ ಮಂಜೂರು ಮಾಡುವ ಮೊದಲು ನೌಕರರ ಬಾಕಿ ರಜೆ ಮತ್ತು ರಜೆ ವಿವರಗಳನ್ನು ವೀಕ್ಷಿಸಬಹುದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಲ್ಲಿ Leave Management System ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ, ಈ ಕೆಳಕಂಡ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ:
1. ನೋಡಲ್ ಅಧಿಕಾರಿ: ಮುಖ್ಯ ಆಡಳಿತ ಅಧಿಕಾರಿಗಳು, HFWS
2. ಸಹಾಯಕ ನೋಡಲ್ ಅಧಿಕಾರಿಗಳು:
1. ಗ್ರೂಪ್ ಎ ಅಧಿಕಾರಿಗಳಿಗೆ: ಸಹಾಯಕ ಆಡಳಿತ ಅಧಿಕಾರಿಗಳು (JRO/HRO)
ii. ಗ್ರೂಪ್ ಬಿ ಅಧಿಕಾರಿಗಳಿಗೆ: ಆಡಳಿತ ಅಧಿಕಾರಿಗಳು ಸಾಮಾನ್ಯ (AOG)
ಗ್ರೂಪ್ ಸಿ ನೌಕರರುಗಳಿಗೆ: ಆಡಳಿತ ಅಧಿಕಾರಿಗಳು ಸಾರಿಗೆ (AOT)
iv. ಗ್ರೂಪ್ ಡಿ ನೌಕರರುಗಳಿಗೆ: ಆಡಳಿತ ಅಧಿಕಾರಿಗಳು ಕುಟುಂಬ ಕಲ್ಯಾಣ (AOFW)
ಸೂಚನೆಗಳು:
1. ಸಹಾಯಕ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಧಿಕಾರಿ/ನೌಕರರ ಖಾತೆಯಲ್ಲಿರುವ ರಜೆಗಳನ್ನು Leave Management System ನಲ್ಲಿ ದಿನಾಂಕ 08.11.2024 ರೊಳಗೆ ನಮೂದಿಸತಕ್ಕದ್ದು.
2. ನೋಡಲ್ ಅಧಿಕಾರಿಗಳು ಈ ಎಲ್ಲ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸತಕ್ಕದ್ದು.
3. 3. ದಿನಾಂಕ 11.11.2024 ರಿಂದ ಎಲ್ಲಾ ಅಧಿಕಾರಿ/ನೌಕರರ ರಜೆ ನಿರ್ವಹಣೆಯನ್ನು ಕಡ್ಡಾಯವಾಗಿ Leave Management System ಮೂಲಕವೇ ನಿರ್ವಹಿಸತಕ್ಕದ್ದು.