ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಭಾವಚಿತ್ರವಿರುವ ಮತದಾರರ ಪಟ್ಟಿಯ ಸಂಕ್ಷಿಪ್ತ ವಿಶೇಷ ಪರಿಷ್ಕರಣೆಗೆ ಅವಕಾಶ ಕಲ್ಪಿಸಿದ್ದು 2025 ರ ಜನವರಿ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದಾಗಿದೆ.
ಪ್ರಸ್ತುತ 17 ವರ್ಷ ತುಂಬಿದ್ದು 18 ವರ್ಷಗಳಲ್ಲಿ ನಡೆಯುತ್ತಿದ್ದು ಬರುವ ಜನವರಿ 1 ಕ್ಕೆ 18 ವರ್ಷ ತುಂಬುವ ಎಲ್ಲಾ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಬಹುದಾಗಿದೆ.
ಹೊಸದಾಗಿ ನೊಂದಾಯಿಸಲು ನಮೂನೆ-6, ಹೆಸರು ಕೈಬಿಡಲು ನಮೂನೆ-7, ತಿದ್ದುಪಡಿ, ಸ್ಥಳಾಂತರ, ವಿಶೇಷ ಚೇತನರ ಗುರುತಿಸುವಿಕೆಗೆ ನಮೂನೆ-8, ವಿದೇಶದಲ್ಲಿ ನೆಲೆಸಿರುವ ಭಾರತೀಯವರು ನಮೂನೆ-6ಎ ರಡಿ ವಿವರವನ್ನು ಭರ್ತಿ ಮಾಡಿ ಮತದಾರರ ನೊಂದಣಾಧಿಕಾರಿಗಳಿಗೆ ನೀಡಬೇಕು.
ವೋಟರ್ ಹೆಲ್ಪ್ ಲೈನ್ ಆಪ್ ಅಥವಾ http;//voters.eci.gov.in/ ವೆಬ್‍ಸೈಟ್ ಮೂಲಕವೂ ನೊಂದಣಿ, ತಿದ್ದುಪಡಿ, ವರ್ಗಾವಣೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದೆ.
ಪರಿಷ್ಕರಣೆ ಅವಧಿ; ಮತದಾರರ ಪಟ್ಟಿಯ ಕರಡು ಪಟ್ಟಿಯನ್ನು 2024 ರ ಅಕ್ಟೋಬರ್ 29 ರಂದು ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ 2024 ರ ನವೆಂಬರ್ 28 ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿನ ಎರಡನೇ ಶನಿವಾರ, ಭಾನುವಾರ ರಜಾ ದಿನಗಳಂದು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಸಲ್ಲಿಕೆಯಾಗುವ ಎಲ್ಲಾ ಆಕ್ಷೇಪಣೆಗಳನ್ನು 2024 ರ ಡಿಸೆಂಬರ್ 24 ರೊಳಗಾಗಿ ಇತ್ಯರ್ಥ ಮಾಡಿ 2025 ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.