ಬೆಂಗಳೂರು : ಹಿಂದು ವಿವಾಹ ಕಾಯ್ದೆ 1955ರಡಿಯಲ್ಲಿ ವಿವಾಹ ನೊಂದಣಿ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ಸರ್ಕಾರವು ಮಹತ್ವದ ಆದೇಶ ಪ್ರಕಟಿಸಿದ್ದು, REGISTRATION OF HINDU MARRIAGE (KARNATAKA) RULES, 1966 ರ ನಿಯಮ 4 ರನ್ವಯ ವಿವಾಹ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರಿಂದ ಈ ಕೆಳಕಂಡ ದಾಖಲೆಗಳ ಪ್ರತಿಯನ್ನು ಮಾತ್ರ ಪಡೆಯತಕ್ಕದ್ದು.
1) ವಧುವರರರು ಸಹಿ ಹಾಕಿದ ಭರ್ತಿ ಮಾಡಿದ ಅರ್ಜಿ.
2) ವಧುವರರ ವಿಳಾಸದ ದಾಖಲೆಗಳು: ( ಆಧಾರ್ ಕಾರ್ಡ್ ಪ್ರತಿ/ ನೀರಿನ ಬಿಲ್ಲು/ ದೂರವಾಣಿ ಬಿಲ್ / ವಿದ್ಯುಚಕ್ತಿ ಬಿಲ್/ ಚುನಾವಣಾ ಗುರುತಿನ ಚೀಟಿ/ ಗ್ಯಾಸ್ ಕನೆಕ್ಷನ್ ಸರ್ಟಿಫಿಕೇಟ್/ ಬಾಡಿಗೆ ಕರಾರು ಪತ್ರದ ಪ್ರತಿ/ ಆದಾಯ ಮೌಲ್ಯಮಾಪನ ಆದೇಶ/ ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ಪಡೆದ ದೃಢೀಕರಣ ಪತ್ರ/ ದಂಪತಿಗಳ ರಹದಾರಿ ಪರವಾನಗಿ (ಅರ್ಜಿದಾರರ ಹೆಸರನ್ನು ಕುಟುಂಬದ ವಿವರಗಳನ್ನು ಒಳಗೊಂಡಂತೆ ಮೂದಲ ಮತ್ತು ಕೊನೆಯ ಪುಟ, ಪಾಸ್‌ಪೋರ್ಟ್ ಸಂಗಾತಿಯಂತೆ ಅರ್ಜಿದಾರರು ಒದಗಿಸಿದ ಅರ್ಜಿದಾರರ ವಿಳಾಸವು ಸಂಗಾತಿಯ ಪಾಸ್‌ಪೋರ್ಟ್‌ನಲ್ಲಿ ತಿಳಿಸಲಾದ ವಿಳಾಸವನ್ನು ಹೋಲುವಂತಿರಬೇಕು) / ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ನಕಲು ಪ್ರತಿ ನಿಗದಿತ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳು – ನಿಗಧಿತ ಖಾಸಗಿ ವಲಯ ಭಾರತೀಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮಾತ್ರ
3) ವಧುವರರ ವಯೋಮಿತಿಯ ದಾಖಲೆ- 10ನೇ ತರಗತಿಯ ಅಂಕಪಟ್ಟಿ/ ಪಾಸ್‌ಪೋರ್ಟ್/ ಸ್ಥಳೀಯ ಪ್ರಾಧಿಕಾರದಿಂದ ಹೊರಡಿಸಿದ ಜನನ ನೋಂದಣೆ ಪ್ರಮಾಣ ಪತ್ರ
4) ವಧುವರರ ಗುರುತಿನ ದಾಖಲೆ-ಆಧಾರ್ ಕಾರ್ಡ್/ ಪಾಸ್‌ಪೋರ್ಟ್/ ಪ್ಯಾನ್ ಕಾರ್ಡ್/ ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್.
5) ವಧುವರರ ಜಂಟಿ ಭಾವಚಿತ್ರ
6) ವಿವಾಹ ನಂತರ ವಧುವಿನ ಹೆಸರು ಬದಲಾವಣೆ ಆಗಿದ್ದಲ್ಲಿ ಅಫಿಡೆವಿಟ್, ಸ್ಥಳೀಯ ದಿನಪತ್ರಿಕೆಗಳಲ್ಲಿ ಸದರಿ ಮಾಹಿತಿಯನ್ನು ಪ್ರಕಟಿಸಿರುವ ಬಗ್ಗೆ ದಾಖಲೆ.
ಸೂಚನೆ: ದಾಖಲಾತಿಗಳ ಎಲ್ಲಾ ಪ್ರತಿಗಳನ್ನು ಅರ್ಜಿದಾರರು ಸ್ವಯಂ ದೃಢೀಕರಿಸತಕ್ಕದ್ದು.