ಬೆಂಗಳೂರು: ಏಪ್ರಿಲ್ 20, 21ರಂದು ನಿಗದಿಯಾಗಿದ್ದಂತ ಸಿಇಟಿ-2024ರ ಪರೀಕ್ಷೆಯನ್ನು ಎರಡು ದಿನ ಮೊದಲೇ ನಿಗದಿ ಪಡಿಸಲಾಗಿದೆ. ಏಪ್ರಿಲ್.18, 19ರಂದೇ ಸಿಇಟಿ ಪರೀಕ್ಷೆಯನ್ನು ನಿಗದಿ ಪಡಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾಹಿತಿ ಹಂಚಿಕೊಂಡಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎರಡು ದಿನಗಳ ಮುಂಚಿತವಾಗಿ, ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಯನ್ನು ನಿಗದಿ ಮಾಡಿದೆ ಎಂದು ತಿಳಿಸಿದೆ.
ಏಪ್ರಿಲ್ 21ರಂದು ಎನ್‌ಡಿಎ ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಂತ ಹೇಳಿದೆ.
ಈ ಮೊದಲು ಏಪ್ರಿಲ್.20, 21ಕ್ಕೆ ಪರೀಕ್ಷಎ ನಿಗದಿಯಾಗಿತ್ತು. ಈಗ ಈ ಪರೀಕ್ಷೆಯನ್ನು ಏಪ್ರಿಲ್.18, 19ಕ್ಕೆ ಸಿಇಟಿ ಪರೀಕ್ಷೆಯನ್ನು ನಿಗದಿ ಪಡಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-23460460, 9741388123.
ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎರಡು ದಿನಗಳ ಮುಂಚಿತವಾಗಿ, ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಯನ್ನು ನಿಗದಿ ಮಾಡಿದೆ.
ಏಪ್ರಿಲ್ 21ರಂದು ಎನ್‌ಡಿಎ ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ.… pic.twitter.com/hOxfZ8UgbO
— DIPR Karnataka (@KarnatakaVarthe) January 10, 2024