ಬೆಂಗಳೂರು: ತತ್ಕಾಲ್ ಪೋಡಿ, 11ಇ ನಕ್ಷೆ ಒಳಗೊಂಡು ಜಮೀನು ಅಳತೆಗಾಗಿ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ಸೇವಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಜನಮ 1ರಿಂದಲೇ ಪರಿಷ್ಕೃತ ದರಗಳು ಜಾರಿಗೆ ಬಂದಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.
11ಇ ಸ್ಕೆಚ್, ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಪ್ರಕರಣಗಳಲ್ಲಿ ಗ್ರಾಮೀಣ ಭಾಗದ ಅರ್ಜಿದಾರರಿಗೆ ನಿಗದಿಯಾಗಿದ್ದ 2,000 ರೂ. ಸೇವಾ ಶುಲ್ಕವನ್ನು 1,500 ರೂ.ಗೆ ಇಳಿಸಲಾಗಿದೆ. ನಗರ ಪ್ರದೇಶದ ಅರ್ಜಿದಾರರಿಗೆ 2,500 ರೂ. ಶುಲ್ಕವೇ ಮುಂದುವರಿಯಲಿದೆ. ಹದ್ದುಬಸ್ತು ಪ್ರಕರಣಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿನಿಗದಿಯಾಗಿದ್ದ,500 ರೂ. ಶುಲ್ಕವನ್ನು 500 ರೂ.ಗೆ ಇಳಿಸಲಾಗಿದೆ. ನಗರ ಪ್ರದೇಶದಲ್ಲಿ 2,000 ರೂ. ಶುಲ್ಕವೇ ಮುಂದುವರಿಯಲಿದೆ. ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪಹಣಿಯ (ಆರ್‌ಟಿಸಿ) ಕಾಲಂ -9 ರಲ್ಲಿನ ಅರ್ಜಿದಾರರ ಹಕ್ಕಿನ ವಿಸ್ತೀರ್ಣಕ್ಕೆ ಮಾತ್ರ ಪಾವತಿಸಿಕೊಳ್ಳಲು ಆದೇಶಿಸಲಾಗಿದೆ. ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಈಶುಲ್ಕ ಪರಿಷ್ಕರಣೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.