ಬೆಂಗಳೂರು : ರಾಜ್ಯದ ವಸತಿ ಶಿಕ್ಷಣ ಶಾಲೆ, ಕಾಲೇಜುಗಳಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ವಿಶೇಷ ಮೀಸಲಾತಿಯನ್ನು ನೀಡಲಾಗುತ್ತಿದೆ.
ಈ ಕುರಿತಂತೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 826 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ ಡಾ|| ಬಿ.ಆರ್. ಅಂಬೇಡ್ಕರ್/ ಅಟಲ್ ಬಿಹಾರಿ ವಾಜಪೇಯಿ/ಶ್ರೀಮತಿ ಇಂದಿರಾಗಾಂಧಿ /ಏಕಲವ್ಯ ಮಾದರಿ ವಸತಿ ಶಾಲೆ/ಕಾಲೇಜುಗಳ ಪೈಕಿ 807 ವಸತಿ ಶಾಲೆಗಳಲ್ಲಿ 25%ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು, ಹೆಚ್‍ಐವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳುಗಳಿಗೆ ಶೇ 10% ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ 6ನೇ ತರಗತಿ ಪ್ರವೇಶ ಕಲ್ಪಿಸಲು ಅನುಮೋದನೆ ನೀಡಿ ಸರ್ಕಾರದ ಆದೇಶಿಸಿದೆ ಎಂದು ತಿಳಿಸಿದ್ದಾರೆ.
ಇನ್ನೂ ರಾಜ್ಯದ ವಿವಿಧ ಜಿಲ್ಲೆಗಳ ವಿಕಲಚೇತನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ರಾಜ್ಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆಶಿಗೆ, ತಂದುಕೊಟ್ಟಿದ್ದೇ ಚಾಲಕ ಕಾರ್ತಿಕ್: HDK ಸ್ಪೋಟಕ ಬಾಂಬ್
BREAKING: ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ‘2.5 TMC ನೀರು’ ಹರಿಸುವಂತೆ ‘CWMA ಸೂಚನೆ’