ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, ಕೆಳಗಿನ ರೈಲುಗಳ ಸೇವೆಗಳನ್ನು ಮರುನಿಗದಿ, ನಿಯಂತ್ರಣ ಮತ್ತು ಭಾಗಶಃ ರದ್ದುಪಡಿಸಲಾಗುವುದು.
ರೈಲುಗಳ ಮರುನಿಗದಿ
1. ರೈಲು ಸಂಖ್ಯೆ 16552 ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 40 ನಿಮಿಷ ತಡವಾಗಿ ಹೊರಡಲಿದೆ.
2. ರೈಲು ಸಂಖ್ಯೆ 66554 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 45 ನಿಮಿಷ ತಡವಾಗಿ ಹೊರಡಲಿದೆ.
ರೈಲುಗಳ ನಿಯಂತ್ರಣ
1. ರೈಲು ಸಂಖ್ಯೆ 16586 ಮುರ್ಡೇಶ್ವರ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, ದಿನಾಂಕ 28, 30 ಅಕ್ಟೋಬರ್, 18, 20, 25, 27 ನವೆಂಬರ್ ಮತ್ತು 16, 18 ಡಿಸೆಂಬರ್ 2025 ರಂದು ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
2. ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್, ದಿನಾಂಕ 28, 30 ಅಕ್ಟೋಬರ್, 18, 20, 25, 27 ನವೆಂಬರ್ ಮತ್ತು 16, 18 ಡಿಸೆಂಬರ್ 2025 ರಂದು ಮಾರ್ಗಮಧ್ಯೆ 100 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
3. ರೈಲು ಸಂಖ್ಯೆ 66579 ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
ರೈಲುಗಳ ಭಾಗಶಃ ರದ್ದು
1. ರೈಲು ಸಂಖ್ಯೆ 66579 ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಪಾಂಡವಪುರ – ಅಶೋಕಪುರಂ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಪಾಂಡವಪುರದಲ್ಲೇ ಅಂತ್ಯಗೊಳ್ಳುತ್ತದೆ.
2. ರೈಲು ಸಂಖ್ಯೆ 66554 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂ – ಪಾಂಡವಪುರ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ನಿಗದಿತ ಸಮಯದಂತೆ ಅಶೋಕಪುರಂ ಬದಲು ಪಾಂಡವಪುರದಿಂದ ಹೊರಡುತ್ತದೆ.
2027ರ ಸೆಪ್ಟೆಂಬರ್ ಹೊತ್ತಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂಪಾಯಿ ಸಾಧ್ಯತೆ
SHOCKING: ಇನ್ಟಾಗ್ರಾಂನಲ್ಲಿ ಪರಿಚಿತವಾದ ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಪೋಕ್ಸೋ ಕೇಸ್ ದಾಖಲು








