ಬೆಂಗಳೂರು ; 402 ಪಿಎಸ್ ಐ ಹುದ್ದೆಗಳ ನೇಮಕಾತಿಗೆ ಸೆ.22 ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಸೆಪ್ಟೆಂಬರ್ 28 ಕ್ಕೆ ಮುಂದೂಡಲಾಗಿತ್ತು. ಅಂದು ಕೂಡ ಯುಪಿಎಸ್ ಸಿ ಪರೀಕ್ಷೆ ಇರುವ ಕಾರಣ ಆ ದಿನಾಂಕವನ್ನೂ ಮುಂದೂಡಿಕೆ ಮಾಡಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಯುಪಿಎಸ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪಿಎಸ್ ಐ ಪರೀಕ್ಷೆಯನ್ನು ಸೆ.22 ರಂದು ನಿಗದಿ ಮಾಡಲಾಗಿತ್ತು. ಆದ್ದರಿಂದ ಅಭ್ಯರ್ಥಿಗಳು ಒಟ್ಟಿಗೆ ಎರಡು ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವದಿಲ್ಲ ಎಂಬ ಕಾರಣಕ್ಕೆ ಸೆ. 28 ರಂದು ಪರೀಕ್ಷೆ ನಡೆಸಲು ಯೋಜಿಸಲಾಗಿತ್ತು.
ಸೆ.28 ರಂದು ಯುಪಿಎಸ್ ಸಿ ಪರೀಕ್ಷೆ ಇದೆ. ಹೀಗಾಗಿ ಸೆ.28 ರ ಪಿಎಸ್ ಐ ಪರೀಕ್ಷೆಯನ್ನೂ ಮುಂದೂಡಲಾಗಿದ್ದು, ಶೀಘ್ರವೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.