ಬೆಂಗಳೂರು: ನಗರದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಇಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಅಂತ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 20-06-2024ರ ಇಂದು ಬೆಂಗಳೂರಿನ ಈ ಕೆಳಗಿನ ಪ್ರದೇಶಗಳಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಅಂತ ತಿಳಿಸಿದೆ.
ಹೆಚ್.ಬಿ.ಆರ್’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು.
ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ದಿನಾಂಕ 20.06.2024 (ಗುರುವಾರ) ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯವರೆಗೆ 66/11ಕೆವಿ ಆಸ್ಟಿನ್ ಟೌನ್ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉ೦ಟಾಗುವುದು.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು:
“ರಿಚಂಡ್ ರಸ್ತೆ, ಸಿಲ್ವರ್ ಲೇಕ್ ಅಪಾರ್ಟ್ಮೆಂಟ್, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ವಿಜಯ ಬ್ಯಾಂಕ್, ಬ್ರಿಗೇಡ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಟಾಟಾ ಲೇನ್, ಉದಯ ಟಿವಿ, ಐಟಿಸಿ, ಫೋರ್ ಸೀಸನ್ ಅಪಾರ್ಟ್ಮೆಂಟ್, ಕೆಎಸ್ಆರ್ಪಿ, ರಿಚ್ಮಂಡ್ ರಸ್ತೆ ರತ್ನ ಅವೆನ್ಯೂ, ಹೇಯ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲ ರಸ್ತೆ, ಬ್ರಿಗೇಡ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ಶಾಪರ್ ಸ್ಟಾಪ್, ಮ್ಯಾಗ್ರತ್ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಾನ್ವೆಂಟ್ ರಸ್ತೆ, ರಿಚ್ಯಂಡ್ ಸರ್ಕಲ್, ಎಂಬಸ್ಸಿ ಕಚೇರಿ, ಕಮಿಸಿರೇಟ್ ರಸ್ತೆ, ಬ್ರಂಟನ್ ರಸ್ತೆ, ಗರುಡಾ ಮಾಲ್, ಅಶೋಕನಗರ, ಪೀರನ್, ಮಾಕ್ರ್ರಮ್ ರಸ್ತೆ, ಬೋವೀ ಲೇನ್, ಮ್ಯೂಸಿಯಂ ರಸ್ತೆ, ಮದ್ರಾಸ್ ಬ್ಯಾಂಕ್ ರಸ್ತೆ ಮತ್ತು ಸುತ್ತಮುತ್ತಲಿನ ರಸ್ತೆ ಪ್ರದೇಶ.”
ವಿದ್ಯುತ್ ದೂರಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ 1912′ ಗೆ ಸಂಪರ್ಕಿಸುವುದು.