ಬೆಂಗಳೂರು: ರಾಜ್ಯದ ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಸಿರುವ ಸ್ಮಾರ್ಟ್ ಕಾರ್ಡ್ ಮಾನ್ಯತಾ ಉಚಿತ ಬಸ್ ಪಾಸ್ ಅವಧಿಯನ್ನು ಮೇ.31ರವರೆಗೆ ವಿಸ್ತರಿಸಿ ಕೆಎಸ್ಆರ್ ಟಿಸಿ ಆದೇಶಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದು ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್‌ಾರ್ಡ್ ಅವಧಿಯು ದಿನಾಂಕ: 31.12.2023 ಕ್ಕೆ ಕೊನೆಗೊಂಡಿದ್ದು, ಉಲ್ಲೇಖಿತ-1 ರ ಪತ್ರದಲ್ಲಿ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಸದರಿ ಸ್ಮಾರ್ಟ್‌ಕಾರ್ಡ್ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದ ಮೇರೆಗೆ ಉಲ್ಲೇಖ-2 ರಲ್ಲಿ ಸೂಕ್ತಾಧಿಕಾರಿಗಳ ಅನುಮೋದನೆಯನ್ವಯ ದಿನಾಂಕ: 29.02.2024 ರವರೆಗೆ ಅವಧಿಯನ್ನು ವಿಸ್ತರಿಸಲು ಕ್ರಮವಹಿಸಲಾಗಿತ್ತು ಎಂದಿದ್ದಾರೆ.
ಮುಂದುವರೆದು, ಆಡಳಿತಾತ್ಮಕ ಕಾರಣಗಳಿಂದಾಗಿ, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಕಾರ್ಡ್ ಪಡೆದ ಪತ್ರಕರ್ತರಿಗೆ ಕ.ರಾ.ರ.ಸಾ.ನಿಗಮದ ವತಿಯಿಂದ ವಿತರಿಸಲಾಗಿರುವ ಸ್ಮಾರ್ಟ್‌ಕಾರ್ಡ್ ಬಸ್‌ಪಾಸ್‌ಗಳ ಮಾನ್ಯತಾ ಅವಧಿಯನ್ನು ಸೂಕ್ತಾಧಿಕಾರಿಗಳ ಅನುಮೋದನೆ ಉಲ್ಲೇಖ-3 ರಂತೆ ದಿನಾಂಕ: 31.05.2024 ರವರೆಗೆ ವಿಸ್ತರಿಸುವುದು, ಈ ಬಗ್ಗೆ ನಿಗಮದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಹಾಗೂ ಸಂಚಾರ ಮೇಲ್ವಿಚಾರಕರಿಗೆ ಸೂಕ್ತ ತಿಳುವಳಿಕೆ ನೀಡುವುದು ಮತ್ತು ದಿನಾಂಕ: 31.12.2023 ರವರೆಗೆ ಚಾಲ್ತಿಯಲ್ಲಿರುವ ಸ್ಮಾರ್ಟ್ ಕಾರ್ಡ್ ಬಸ್ ಪಾಸ್‌ಗಳನ್ನು ಹೊಂದಿರುವ ಪತ್ರಕರ್ತರುಗಳನ್ನು ದಿನಾಂಕ: 31.05.2024 ರವರೆಗೆ ಕ.ರಾ.ರ.ಸಾ.ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿಸುವುದು. ಈ ಬಗ್ಗೆ ಯಾವುದೇ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವುದು ಹಾಗೂ ಘಟಕಗಳ ಸೂಚನಾ ಫಲಕದಲ್ಲಿ ದೂರುಗಳಿಗೆ ಪ್ರದರ್ಶಿಸುವುದು ಎಂದು ತಿಳಿಸಿದ್ದಾರೆ.