ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು, ಶಿವಮೊಗ್ಗ ಪ್ರಾದೇಶಿಕ ಕೇಂದ್ರದಲ್ಲಿ 2023-24ನೇ ಶೈಕ್ಷಣಿಕ ಜನವರಿ ಸಾಲಿನಲ್ಲಿ ಯುಜಿಸಿಯ ಮಾನ್ಯತೆಯೊಂದಿಗೆ : 10.01.2024 ರಿಂದ ದಿನಾಂಕ:31.03.2024 ರ ವರೆಗೆ ಪ್ರಥಮ ವರ್ಷದ ಬಿ.ಎ/ಬಿ.ಕಾಂ/ಬಿ.ಬಿ.ಎ/ಬಿ.ಸಿ.ಎ/ ಬಿ.ಎಸ್ಸಿ/ಬಿ.ಎಸ್.ಡಬ್ಲ್ಯೂ/ಬಿ.ಲಿಬ್, ಪದವಿ ಹಾಗೂ ಎಂ.ಎ / ಎಂ.ಕಾಂ, / ಎಂ.ಸಿ.ಎ / ಎಂ.ಎಸ್.ಡಬ್ಲ್ಯೂ / ಎಂ.ಲಿಬ್ ಮತ್ತು ಎಂ,ಎಸ್‍ಸ್ಸಿ, ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಹಾಗೂ ಪಿ.ಜಿ ಡಿಪ್ಲೋಮ ಮತ್ತು ಡಿಪ್ಲೋಮ ಹಾಗೂ ಸರ್ಟಿಫಿಕೇಟ್ ಕೋರ್ಸ್‍ಗಳ ಪ್ರವೇಶಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿಗಳನ್ನು ನೇರವಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್‍ನಲ್ಲಿ ಭರ್ತಿ ಮಾಡಿ ಆಲ್ಕೊಳ ಸರ್ಕಲ್ ಹತ್ತಿರ ಇರುವ ಕರಾಮುವಿ ಪ್ರಾದೇಶಿಕ ಕೇಂದ್ರ ಶಿವಮೊಗ್ಗ ಇಲ್ಲಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‍ಸೈಟ್ WWW.KSOUMYSURU.AC.IN ಇಲ್ಲಿ ಹಾಗೂ ಸ್ಥಿರ ದೂರವಾಣಿ ಸಂಖ್ಯೆ 08182-250367 ಮೊ: 9164467131, 9739803295, 94807659057 ಸಂಪರ್ಕಿಸಬಹುದು.
ವಿಶೇಷ ಸೂಚನೆ: ಭಾನುವಾರ ಹಾಗೂ ಎಲ್ಲಾ ಸರ್ಕಾರಿ ರಜೆ ದಿನಗಳಂದು ಪ್ರವೇಶಾತಿಗೆ ಅವಕಾಶವಿದೆ. ಮಹಿಳಾ ಬಿ.ಪಿ.ಎಲ್ ವಿದ್ಯಾರ್ಥಿನಿಯರಿಗೆ 15% ಶುಲ್ಕ ವಿನಾಯಿತಿ ಹಾಗೂ ಆಟೋ ಹಾಗೂ ಕ್ಯಾಬ್ ಚಾಲಕರು ಹಾಗೂ ಅವರ ಮಕ್ಕಳಿಗೆ 25% ಶುಲ್ಕ ವಿನಾಯಿತಿ ಇರುತ್ತದೆ. ಡಿಫೆನ್ಸ್ / ಎಕ್ಸ್-ಸರ್ವಿಸ್‍ಮನ್‍ಗಳಿಗೆ ಪ್ರವೇಶಾತಿಯಲ್ಲಿ 15% ಶುಲ್ಕ ವಿನಾಯಿತಿ ಇರುತ್ತದೆ. ಕೋವಿಡ್‍ನಿಂದ ಮೃತರಾದ ಪೋಷಕರ ಮಕ್ಕಳಿಗೆ ಹಾಗು ದೃಷ್ಟಿಹೀನ ಅಂಧ ಮಕ್ಕಳಿಗೆ ಮತ್ತು ತೃತೀಯ ಲಿಂಗಿಗಳಿಗೆ ಪ್ರವೇಶಾತಿಯ ಪೂರ್ಣ ಶುಲ್ಕ ವಿನಾಯಿತಿ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಶೇಕಡ 25% ಶುಲ್ಕ ವಿನಾಯಿತಿ ಇರುತ್ತದೆ ಎಂದು ಕೆಎಸ್‍ಓಯು ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ‘ವಿಧಾನಸಭೆ ಚುನಾವಣೆ’ಗೆ ದಿನಾಂಕ ಪ್ರಕಟ