ಬೆಂಗಳೂರು: ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾನ್ಸೂನ್ ವೇಳಾಪಟ್ಟಿಯನ್ನು ಜೂನ್ 10 ರಿಂದ ಅಕ್ಟೋಬರ್ 31, 2024 ರವರೆಗೆ ಜಾರಿಗೆ ತರಲಾಗುವುದು ಎಂದು ಕೊಂಕಣ ರೈಲ್ವೆ ಸೂಚಿಸಿದೆ.
ಮಾನ್ಸೂನ್ ವೇಳಾಪಟ್ಟಿಗೆ ಅನುಗುಣವಾಗಿ ಈ ಕೆಳಗಿನ ರೈಲುಗಳು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತವೆ:
- ರೈಲು ಸಂಖ್ಯೆ 12741/12742 ವಾಸ್ಕೋ-ಡ-ಗಾಮಾ-ಪಾಟ್ನಾ-ವಾಸ್ಕೋ-ಡ-ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್
- ರೈಲು ಸಂಖ್ಯೆ 16515/16516 ಯಶವಂತಪುರ-ಕಾರವಾರ-ಯಶವಂತಪುರ ಎಕ್ಸ್ ಪ್ರೆಸ್
- ರೈಲು ಸಂಖ್ಯೆ 11097/11098 ಪುಣೆ-ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್
- ರೈಲು ಸಂಖ್ಯೆ 16595/16596 ಕೆಎಸ್ಆರ್ ಬೆಂಗಳೂರು-ಕಾರವಾರ-ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್
- ರೈಲು ಸಂಖ್ಯೆ 16586/16585 ಮುರುಡೇಶ್ವರ-ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್ ಪ್ರೆಸ್
ಈ ಅವಧಿಯಲ್ಲಿ, ಈ ಐದು ಜೋಡಿ ರೈಲುಗಳು ಮಾನ್ಸೂನ್ ಸಮಯಕ್ಕೆ ಅನುಗುಣವಾಗಿ ಚಲಿಸುತ್ತವೆ. ಪ್ರಯಾಣಿಕರು ಕೆಳಗೆ ನೀಡಲಾದ ಪರಿಷ್ಕೃತ ಸಮಯವನ್ನು ಗಮನಿಸಲು ಸೂಚಿಸಲಾಗಿದೆ.
ಪ್ರಯಾಣಿಕರು ಈ ಮೇಲಿನ ರೈಲುಗಳ ಮಾನ್ಸೂನ್ ವೇಳಾಪಟ್ಟಿ ತಿಳಿಯಲು https://swr.indianrailways.gov.in/view_detail.jsp?lang=0&dcd=7326&id=0,4,268 ಮೇಲೆ ಕ್ಲಿಕ್ ಮಾಡಿ. ಇಲ್ಲವೇ www.enquiry.indianrail.gov.in ಭೇಟಿ ನೀಡಿ.
ಯುವ, ಮಹಿಳಾ ಮತ್ತು ಹೊಸ ಮುಖಗಳಿಗೆ ‘ಲೋಕಸಭಾ ಟಿಕೆಟ್’ ಹಂಚಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್
Job Alert : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : 364 `ಭೂಮಾಪಕರ’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ