ಬೆಂಗಳೂರು : ಮೇ-2024 ಮಾಹೆಯಲ್ಲಿ ನಡೆಯಲಿರುವ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳ ಕರಡುಪ್ರವೇಶ ಪತ್ರ ಬಿಡುಗಡೆಯಾಗಿದ್ದು, ಡೌನ್ ಲೋಡ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಮೇ-2024 ಮಾಹೆಯಲ್ಲಿ ನಡೆಯುವ ಕರ್ನಾಟಕ ಮುಕ್ತ ಶಾಲೆ (ಕೆ.ಓ.ಎಸ್) ಮುಖ್ಯ ಪರೀಕ್ಷೆಯು ದಿನಾಂಕ: 20/05/2024 ರಿಂದ 29/05/2024 ರವರೆಗೆ ನಡೆಸಲಾಗುತ್ತಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಮಂಡಳಿಯ ಜಾಲತಾಣ https://kseab.karnataka.gov.in ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಮಂಡಳಿಯ ಜಲತಾಣದಲ್ಲಿ ಕರಡು ಪ್ರವೇಶ ಪತ್ರಗಳನ್ನು ಸಂಬಂಧಿಸಿದ ಕಲಿಕಾ ಕೇಂದ್ರಗಳ ಲಾಗಿನ್‌ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಪರಿಶೀಲಿಸಿ ಈ ಕೆಳಕಂಡಂತೆ ಕ್ರಮವಹಿಸುವುದು.
1. ಕಲಿಕಾ ಕೇಂದ್ರದ ಸಮನ್ವಯಾಧಿಕಾರಿಗಳು INSTITUTE LOGIN ನಲ್ಲಿ ತಮ್ಮ ಸಂಸ್ಥೆಯ USER NAME ಹಾಗೂ PASS WORD ಬಳಸಿ ಎಲ್ಲಾ ಅಭ್ಯರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪರಿಶೀಲಿಸಬೇಕು.
2. ಕಲಿಕಾ ಕೇಂದ್ರದಿಂದ ನೋಂದಾಯಿಸಿದ ಅಭ್ಯರ್ಥಿಗಳ ಸಂಖ್ಯೆಗೆ ಅನುಸಾರ ನಿಮ್ಮ ಕಲಿಕಾ ಕೇಂದ್ರದ ಸ್ವೀಕೃತವಾದ ಪ್ರವೇಶ ಪತ್ರಗಳ ಸಂಖ್ಯೆಗಳು ತಾಳೆಯಾಗುತ್ತಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ತಾಳೆ ಹೊಂದದಿದ್ದಲ್ಲಿ ಯಾವ ಅಭ್ಯರ್ಥಿಯ ಪ್ರವೇಶ ಪತ್ರ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡು ಅಗತ್ಯ ಕ್ರಮಕ್ಕಾಗಿ ಸಮರ್ಥನೆಯೊಂದಿಗೆ/ದಾಖಲೆಗಳನ್ನು ಕಳುಹಿಸಿಕೊಡುವುದು.
3. ಕರಡು ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು/ತಂದೆ/ತಾಯಿಯ ಹೆಸರು/ಜನ್ಮದಿನಾಂಕ ಹಾಗೂ ಇತರೆ ತಿದ್ದುಪಡಿಗಳಿದ್ದಲ್ಲಿ ತಲಾ ಅಭ್ಯರ್ಥಿಗೆ ದಂಡ ಶುಲ್ಕ ರೂ.200/-ಗಳನ್ನು ನೆಫ್ಟ್ ಮೂಲಕ ಪಾವತಿಸಿ ತಿದ್ದುಪಡಿಗೆ ಸೂಕ್ತ ದಾಖಲೆಗಳೊ ដកដោះដាក់ ໖:30/04/2024 ರೊಳಗೆ ಮಂಡಲಿಯನ್ನು ಸಂಪರ್ಕಿಸುವುದು. ಬದಲಾವಣೆಗೆ ಅವಕಾಶವಿರುವುದಿಲ್ಲ. ವಿಷಯ
4. ಕಲಿಕಾ ಕೇಂದ್ರದ ಸಂಕೇತ ಹಾಗೂ ಸಂಸ್ಥೆಯ ಹೆಸರಿನಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಸಮರ್ಥನೆಯೊಂದಿಗೆ ಮಂಡಳಿಗೆ ಕಳುಹಿಸಿಕೊಡುವುದು. ಕಲಿಕಾ ಕೇಂದ್ರದಿಂದ ಆಪ್ ಲೋಡ್ ಮಾಡಿರುವಂತೆ ಅಭ್ಯರ್ಥಿಗಳ ಮಾಹಿತಿಗಳು, ಭಾವಚಿತ್ರ ಮತ್ತು ಸಹಿಯನ್ನು ಪ್ರವೇಶ ಪತ್ರದಲ್ಲಿ ಮುದ್ರಿಸಲಾಗಿದೆ. ಇವುಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಮಂಡಳಿಯನ್ನು ದಿನಾಂಕ:30/04/2024 ರ ಅಪರಾಹ್ನ 3.00 ಗಂಟೆಯೊಳಗೆ ಇ-ಮೇಲ್ ಮೂಲಕ ಅಥವಾ ಸೂಕ್ತ ದಾಖಲೆಗಳೊಂದಿಗೆ ಮಂಡಲಿಗೆ ಖುದ್ದು ಹಾಜರಾಗಿ ತಿದ್ದುಪಡಿ ಮಾಡಿಕೊಳ್ಳುವುದು. ಪ್ರವೇಶ ಪತ್ರದಲ್ಲಿ ಹಾಗೂ ಕೇಂದ್ರ ನಾಮ ಪಟ್ಟಿಯಲ್ಲಿ ಭಾವಚಿತ್ರ ಇಲ್ಲದೇ ಇರುವ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗುವುದಿಲ್ಲ. ಇದರಿಂದ ಅಭ್ಯರ್ಥಿಗೆ ಆಗುವ ತೊಂದರೆಗೆ ಸಂಬಂಧಿಸಿದ ಕಲಿಕಾ ಕೇಂದ್ರದ ಸಮನ್ವಯಾಧಿಕಾರಿಗಳು ಜವಾಬ್ದಾರರಾಗಿರುತ್ತಾರೆ ಎಂದು ಸ್ಪಷ್ಟ ಪಡಿಸಿದೆ.
5. ಯಾವುದೇ ಅಭ್ಯರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ, ಪರೀಕ್ಷೆಗೆ ಮುಂಚೆ ಮಾಡಲಾದ ಬದಲಾವಣೆಗಳನ್ನು ಮಾತ್ರ ಮಂಡಳಿಯು ಪರಿಗಣಿಸುತ್ತದೆ. ಕೇಂದ್ರ ನಾಮಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಇದ್ದಲ್ಲಿ ನಾಮಪಟ್ಟಿಯಲ್ಲಿರುವ ಭಾವಚಿತ್ರದ ಅಭ್ಯರ್ಥಿಯೇ ನೈಜ ಅಭ್ಯರ್ಥಿ