ಬೆಂಗಳೂರು : ಅಡುಗೆ ಮನೆಯಲ್ಲಿ ಗ್ಯಾಸ್‌ ಲೀಕ್‌ ಅಥವಾ ಸೋರಿಕೆ ವಾಸನೆ ಬಂದ ತಕ್ಷಣ ಗೊಂದಲವಾಗಬೇಡಿ. ಬದಲಾಗಿ ಈ ಕೆಳಗೆ ಸೂಚಿಸಿದಂತೆ ಕೆಲ ಸೂಕ್ಷ್ಮ ಜಾಗರೂಕವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಇದರಿಂದ ಅಪಾವನ್ನು ತಡೆಯಬಹುದು.

ಗ್ಯಾಸ್‌ ಲೀಕ್‌ ಆಗುತ್ತಿದ್ದರೆ ಪ್ರಪ್ರಥಮ ಬಾರಿಗೆ ಮಾಡಬೇಕಾದ ಕೆಲಸ ಅಂದರೆ ಮನೆಯ ಮೇನ್‌ ವಿದ್ಯುತ್‌ ಸಂಪರ್ಕವನ್ನು ಕಡಿತ ಗೊಳಿಸಿ. ಅಂದರೆ ಮನೆಯ ಮೇನ್‌ ಸ್ವಿಚ್‌ ಆಫ್‌ ಮಾಡಿ. ವಿದ್ಯುತ್‌ ನಿಂತಾಗ ಬೆಂಕಿಯ ಕಿಡಿ ಹತ್ತುವುದು ತಪ್ಪುತ್ತದೆ.

ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಮನೆಯ ತುಂಬೆಲ್ಲಾ ಗ್ಯಾಸ್‌ ವಾಸನೆ ಸೇರಿಕೊಂಡಿದ್ದರೆ, ಮನೆಯ ತುಂಬೆಲ್ಲಾ ಗ್ಯಾಸ್‌ ವಾಸನೆ ಸೇರಿಕೊಂಡಿದ್ದರೆ ಆಗ ಮನೆ ತುಂಬೆಲ್ಲಾ ಸರಿಯಾಗಿ ಗಾಳಿ ಆಡುವಂತೆ ನೋಡಿಕೊಳ್ಳಿ. ಸೋರಿಕೆಯಾದ ಗ್ಯಾಸ್‌ ಆಚೆ ಹೋಗಲು ಅನುಕೂಲ ಮಾಡಿಕೊಡಿ.

ಮನೆಯ ಮೇನ್‌ ವಿದ್ಯುತ್‌ ಸ್ವಿಚ್‌ ಆಫ್‌ ಮಾಡಿ, ಬಾಗಿಲು ಕಿಟಿಕಿಗಳನ್ನು ತೆರೆದ ನಂತರ ಕೂಡಲೇ ಮನೆಯಿಂದ ಆಚೆ ಬಂದುಬಿಡಿ. ಚಿಕ್ಕ ಮಕ್ಕಳು, ವಯಸ್ಕರನ್ನು ಮೊದಲು ಆಚೆ ಹೋಗಲು ಹೇಳಿ. ಮನೆಯಲ್ಲಿ ಗ್ಯಾಸ್‌ ವಾಸನೆ ಹರಡಿಕೊಂಡಿದ್ದು, ನೀವೂ ಸಹ ಅಲ್ಲೇ ಇದ್ದರೆ ಆ ವಾಸನೆ ಸೇವಿಸಿದರೆ ಉಸಿರಾಟದ ಮೇಲೆ ತೊಂದರೆಯುಂಟಾಗಬಹುದು. ಹಾಗು ಆ ವಾಸನೆಯಿಂದ ತಲೆಸುತ್ತು, ವಾಕರಿಕೆದಂತಹ ಸಮಸ್ಯೆ ಕಾಡಬಹುದು. ಕೆಲವೊಮ್ಮೆ ತಲೆಸುತ್ತು ಬಂದು ಅಲ್ಲಿಯೇ ಬೀಳುವ ಸಾಧ್ಯತೆ ಕೂಡ ಇರುತ್ತದೆ.

ಹೀಗೆ ಮನೆಯೊಳಗೆ ಗ್ಯಾಸ್‌ ಲೀಕಾದಾಗ ಕೆಲವೊಮ್ಮೆ ಯಾವ ಕ್ಷಣದಲ್ಲಾದರೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇರುತ್ತದೆ ಹಾಗಾಗಿ ಯಾವುದೇ ಬೆಂಕಿ ಹತ್ತಿಕೊಳ್ಳುವಂತಹ ಸಾಧನಗಳನ್ನು ಇರಿಸದಂತೆ ನೋಡಿಕೊಳ್ಳಿ. ಅಂದರೆ ಲೈಟರ್‌, ಬೆಂಕಿ ಪೊಟ್ಟಣ, ಏರ್‌ ಫ್ರೆಶ್ನರ್‌, ಡಿಯೋಟ್ರೆಂಟ್‌ ಇವುಗಳನ್ನು ಆದಷ್ಟು ಮನೆಯಿಂದ ಹೊರಹಾಕಿ.

ಈ ಎಲ್ಲಾ ಮುಂಜಾಗೃತೆಗಳನ್ನು ಮಾಡುತ್ತಾ ಫೈಯರ್‌ ಇಂಜಿನ್‌ಗೆ ಕಾಲ್‌ ಮಾಡಿ. ಹಾಗು ತಜ್ಞರನ್ನು ಕರೆಸಿ ಗ್ಯಾಸ್‌ ಬಳಕೆ ಹಾಗು ಅದರ ಸುರಕ್ಷತೆಯ ಕುರಿತು ಮನೆಮಂದಿಯಲ್ಲಾ ತಿಳಿದುಕೊಳ್ಳಿ.

Share.
Exit mobile version