ಆಧಾರ್ ಕಾರ್ಡ್ ಭಾರತದ ಅತ್ಯಂತ ಪ್ರಮುಖ ಗುರುತಿನ ಚೀಟಿಯಾಗಿದೆ. ಪ್ರತಿಯೊಂದು ಪ್ರಮುಖ ಕೆಲಸಕ್ಕೂ ಆಧಾರ್ ಅಗತ್ಯವಿದೆ. ಆದಾಗ್ಯೂ, ಆಧಾರ್ ಕಾರ್ಡ್ ಫೋಟೋಗಳನ್ನು ಬದಲಾಯಿಸುವ ಪ್ರಕ್ರಿಯೆಯ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ.
ಹೌದು, ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋಟೋಗಳನ್ನು ನೀವು ತುಂಬಾ ಸರಳವಾಗಿ ಬದಲಾಯಿಸಬಹುದು. ಆಧಾರ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸಲು, ಮೊದಲು UIDAI ವೆಬ್‌ಸೈಟ್ uidai.gov.in ಗೆ ಲಾಗಿನ್ ಮಾಡಿ. ನೀವು ಅದರಲ್ಲಿ ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ವಿವರಗಳನ್ನು ನಮೂದಿಸಿ ಆಧಾರ್ ಕೇಂದ್ರಕ್ಕೆ ಸಲ್ಲಿಸಿ.
ನಂತರ, ಆಧಾರ್ ದಾಖಲಾತಿ ಕೇಂದ್ರದ ಸಿಬ್ಬಂದಿ ನಿಮ್ಮ ಬಯೋಮೆಟ್ರಿಕ್ ವಿವರಗಳು ಮತ್ತು ನಿಮ್ಮ ಛಾಯಾಚಿತ್ರವನ್ನು ತೆಗೆದುಕೊಳ್ಳುತ್ತಾರೆ. 25 ರೂಪಾಯಿ ಕೊಟ್ಟರೆ ಹೊಸ ಫೋಟೋ ಅಪ್ಡೇಟ್ ಆಗುತ್ತೆ.
URN ಇರುವ ಸ್ಲಿಪ್ ನೀಡಲಾಗುವುದು. ನಿಮ್ಮ ಆಧಾರ್ ಕಾರ್ಡ್ ಫೋಟೋ ಬದಲಾಗಿದೆಯೇ ಎಂದು ನೀವು ಪರಿಶೀಲಿಸಬಹುದು. ನವೀಕರಿಸಿದ ನಂತರ ನೀವು ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.