ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಹಲವು ಔಷಧಿಗಳು/ ಕಾಂತವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.
ಪಂಜಾಬ್‍ನ ಮೆ. ಮೈಕ್ರೋವಿನ್ ಲ್ಯಾಬ್ಸ್ ಪ್ರೈ. ಲಿಮಿಟೆಟ್‍ನ ಕ್ಯಾಡ್ಲಾನ್(ಕ್ಲೋರ್ಹೆಕ್ಸಿಡೈನ್ ಗ್ಲುಕೋನೆಟ್ ಸಲೂಷನ್ ಮತ್ತು ಸಿಟ್ರಿಮೈಡ್ ಆ್ಯಂಟಿಸಪ್ಟೀಕ್ ಲಿಕ್ವಿಡ್), ಉತ್ತರಖಂಡ್‍ನ ಮೆ. ನ್ಯೂಟ್ರಾ ಲೈಫ್ ಹೆಲ್ತ್‍ಕೇರ್ ಪ್ರೈ. ಲಿಮಿಟೆಡ್‍ನ ರ್ಯಾಬೆಪ್ರೋಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ 20 ಜಿ, ಹಿಮಾಚಲಪ್ರದೇಶದ ಮೆ. ಇನ್‍ಕ್ರೇಡಿಬಲ್ ಮೆಡಿಕೇರ್‍ನ ಅಸಿಯಮ್ಮರ್-ಪಿ ಟ್ಯಾಬ್ಲೆಟ್ಸ್ (ಅಸೇಕ್ಲೋಫೆನಕ್ ಮತ್ತು ಪ್ಯಾರಸೆಟಮೋಲರ್ ಟ್ಯಾಬ್‍ಲೆಟ್ಸ್), ಜಯ್‍ಪುರ್‍ದ ಮೆ. ವಿವೇಕ್ ಫಾರ್ಮಾಕೇಮ್ (ಇಂಡಿಯಾ) ಲಿಮಿಟೆಡ್‍ನ ಸಿಪ್ರೋಪ್ಲಾಕ್ಸಸಿನ್‍ನ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ ಐಪಿ 250 ಎಂಜಿ, ಸೋಲನ್‍ನ ಮೆ. ವ್ಯಾಟ್ಸ್ ಬಯೋಟೆಕ್ ಪ್ರೈ. ಲಿಮಿಟೆಡ್‍ನ ಎಸೀಫೋಲ್-ಎಕ್ಸ್ ಟಿ (ಕ್ಯಾಲ್ಸಿಯಂ ಕಾರ್ಬೋನೆಟ್, ವಿಟಮಿನ್ ಡಿ3, ಮೀಥೈಲ್ ಕೋಬಾಲಮಿನ್, ಎಲ್-ಮೀಥೈಲ್‍ಫೋಲೇಟ್ ಕ್ಯಾಲ್ಸಿಯಂ ಮತ್ತು ಫಿರಾಡೋಕ್ಸಿಲ್-5 ಫಾಸ್ಟೇಟ್ ಟ್ಯಾಬ್ಲೆಟ್ಸ್), ಅಹಮದಬಾದ್‍ನ ಮೆ. ಕ್ಯಾರೆವಿನ್ ಫಾಮಾಸ್ಯೂಟಿಕಲ್ಸ್ (ಗುಜಾ) ಪ್ರೈ. ಲಿಮಿಟೆಡ್‍ನ್ ಸೋಡಿಯಂ ಬೈಕಾರ್ಬೋನೇಟ್ ಇನ್‍ಜೆಕ್ಷನ್ ಐಪಿ (8.4% ಡಬ್ಲ್ಯೂ/ವಿ) (ಸೋಡಾಕ್ಯಾಬ್ 8.4%), ಹರಿದ್ವಾರದ ಮೆ. ಬಯೋಜೆನಟಿಕ್ ಡ್ರಗ್ಸ್ ಪ್ರೈ. ಲಿಮಿಟೆಡ್‍ನ ಐಬುಫ್ರೋಫೆಸ್ ಟ್ಯಾಬ್ಲೆಟ್ಸ್ ಐಪಿ 400 ಎಂಜಿ, ಪುಹಾನಾ ಇಕ್ಬಾಲ್‍ಪುರ್ ರೋಡ್ ರೂರ್ಕಿಯದ ಮೆ. ಸ್ಕೈಮ್ಯಾಪ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್‍ನ ಪಿಯೋಗ್ಲಿಟಜೋನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐಪಿ(ಬಯೋಡಿಬ್-15), ಸೋಲನ್ ಹೆಚ್.ಪಿಯ ಮೆ. ಬಯೋಜೆನಟಿಕ್ ಡ್ರಗ್ಸ್ ಪ್ರೈ. ಲಿಮಿಟೆಡ್‍ನ ಐಬುಫ್ರೋಫೆಸ್ ಟ್ಯಾಬ್ಲೆಟ್ಸ್ ಐಪಿ 400 ಎಂಜಿ, ಸೋಲನ್ (ಹೆಚ್.ಪಿ)ಯ ಮೆ.ಹೆಲ್ತ್‍ವೈಸ್ ಫಾರ್ಮಾದ ಮೀಥೈಲ್‍ಕೋಬಾಲಮಿನ್, ಆಲ್ಫಾ ಲಿಪೋಯಿಕ್ ಆಸಿಡ್, ಬೆನ್‍ಫೋಟಿಯಾಮೈನ್, ಫಿರಾಡಾಕ್ಸಿನ್ ಹೈಡ್ರೋಕ್ಲೋರೈಡ್, ಕ್ಯಾಲ್ಸಿಯಂ ಪ್ಯಾಟೋತೇನೆಟ್, ಪೋಲಿಕ್ ಆಸಿಡ್, ಜಿಂಕ್ ಆಕ್ಸಿಡ್, ಕ್ರೋಮಿಯಂ ಪಿಕೋಲಿನೆಟ್, ಇನೋಸಿಟಾಲ್ ಅಂಡ್ ಲುಟೀನ್ ಸಾಫ್ಟ್‍ಜೆಲ್ ಕ್ಯಾಪ್ಸೂಲ್ಸ್ (ಮ್ಯೂರೋಜೆನ್ ಪ್ಲಸ್), ಉತ್ತರಖಂಡ್‍ನ ಮೆ. ಸರ್ವ ಫಾರ್ಮಾಸ್ಯೂಟಿಕಲ್ಸ್‍ನ ಮೆಟೊಪ್ರೋಲೋಲ್‍ಸ ಸಕ್ಸೀನೇಟ್ (ಇಆರ್) ಮತ್ತು ಅಮೋಡೀಫೈನ್ ಬೇಸಿಲೇಟ್ ಟ್ಯಾಬ್ಲೆಟ್ಸ್ ಐಪಿ (ಮೆಟೋರಿಲ್-ಎಎಂ50) ಟ್ಯಾಬ್ಲೆಟ್ಸ್, ಹರಿದ್ವಾರ(ಯು.ಕೆ)ದ ಮೆ. ಪ್ರೋಗ್ರೇಸಿವ್ ಲೈಫ್‍ಸೈನ್ಸ್ ಪ್ರೈ.ಲಿ.ನ ಮೇಫೆನಾಮಿಕ್ ಆಸಿಡ್ ಮತ್ತು ಪ್ಯಾರಸೆಟಮೋಲ್ ಸಸ್‍ಫೆನಶನ್ (ಮೆಫಿಕ್ ಸ್ಫಾಸ್ ಸಸ್‍ಫೆನಶನ್), ಹರಿದ್ವಾರ(ಯು.ಕೆ)ದ ಮೆ. ಮ್ಯಾಟಿನ್ಸ್ ಹೆಲ್ತ್‍ಕೇರ್ ಪ್ರೈ.ಲಿಮಿಟೆಡ್‍ನ ನಿಮ್‍ಸುಲೈಡ್ ಮತ್ತು ಪ್ಯಾರಸೆಟಮೇಲ್ ಟ್ಯಾಬ್ಲೆಟಸ್(ನೋಮಿ-ಪಿ), ಗೋವಾದ ಮೆ. ಪುನಿಷ್ಕ ಇನ್‍ಜೆಕ್ಟಬಲ್ ಪ್ರೈ. ಲಿಮಿಟೆಡ್‍ನ ಸೋಡಿಯಂ ಕ್ಲೋರೈಡ್ ಇನ್‍ಜೆಕ್ಷನ್ ಐ.ಪಿ 0.9% ಡಬ್ಲೂ/ವಿ (ಎನ್‍ಎಸ್) ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.
ಈ ಔಷಧಿಗಳು ಮತ್ತು ಕಾಂತಿವರ್ಧಕಗಳ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಸಾರ್ವಜನಿಕರು ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಉಪಯೋಗಿಸಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂದಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ನಿಯಂತ್ರಣಾಧಿಕಾರಿ ಮತ್ತು ಉಪ ಔಷಧ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.