ನಿಮ್ಮ ಮೊಬೈಲ್ ಅಪ್ಪಿತಪ್ಪಿ, ಕೈಜಾರಿ ನೀರನಲ್ಲಿ ಬಿದ್ದರೆ ಅಥವಾ ಬಾತ್ರೂಮ್ನಲ್ಲಿ ಬಿದ್ದರೆ ಮೊಬೈಲ್ ಹಾಳಾಗಿಹೋಯಿತು ಎಂದು ನೀವೇ ನಿರ್ಧಾರ ಮಾಡಬೇಡಿ. ಬದಲಾಗಿ ನಾವು ಹೇಳು ಈ ಒಂದು ಟಿಪ್ಸ್ ಫಾಲೋ ಮಾಡಿ ನೋಡಿ, ನಿಮ್ಮ ಮೊಬೈಲ್ ಮತ್ತೆ ಮೊದಲಿನಂತೆ ರೆಡಿಯಾಗಿಬಿಡುತ್ತದೆ. ಅಂದಹಾಗೆ ನಾವು ಹೇಳುವ ಈ ಕೆಲಸ ಮೊಬೈಲ್ ನೀರಿಗೆ ಬಿದ್ದ ತಕ್ಷಣವೇ ಮಾಡಬೇಕು. ತಡಮಾದೇ ಹೀಗೆ ಮಾಡಿದರೆ ಮತ್ತೆ ಎಂದಿನಂತೆ ಬಳಸಬಹುದು.
ಮೊಬೈಲ್ ನೀರಿಗೆ ಬಿದ್ದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಮೊಬೈಲ್ನ ಬ್ಯಾಟರಿ, ಬ್ಯಾಕ್ ಕ್ಯಾಪ್ ಹೀಗೆ ಎಲ್ಲ ಬಿಡಿಭಾಗಗಳನ್ನು ಬೇರ್ಪಡಿಸಿ. ನಂತರ ಒಂದು ತೆಳುವಾದ ಒಣಗಿದ ಬಟ್ಟೆಯಿಂದ ಎಷ್ಟು ಸಾಧ್ಯವೋ ಅಷ್ಟು ಒಣಗುವಂತೆ ಮೊಬೈಲ್ ಅನ್ನು ಒರೆಸಿ, ನೀರು ಹೋಗುವವರೆಗೂ ಒರೆಸಿ.
ಮೊಬೈಲ್ನ ಹೆಡ್ ಫೋನ್ ರಂದ್ರ ಹಾಗು ಸ್ಪೀಕರ್, ಚಾರ್ಜಿಂಗ್ ರಂದ್ರದಲ್ಲಿ ನೀರು ಸೇರಿದ್ದರೂ ಊದಿ ಊದಿ ಒರೆಸಿಕೊಳ್ಳಿ. ಇಷ್ಟೆಲ್ಲ ಮಾಡಿದ ನಂತರ ಅಡುಗೆಮನೆಯಲ್ಲಿರುವ ಅಕ್ಕಿಡಬ್ಬದಲ್ಲಿ ಮೊಬೈಲ್ಅನ್ನು ಎರಡು ದಿನಗಳ ಕಾಲ ಇಟ್ಟುಬಿಡಿ. ಅಕ್ಕಿಯಲ್ಲಿ ನೀರು ಹೀರುವ ಗುಣವಿದ್ದು ನಿಮ್ಮ ಮೊಬೈಲ್ನಲ್ಲಿ ಸೇರಿಕೊಂಡ ನೀರನ್ನೆಲ್ಲಾ ಅಕ್ಕಿ ಹೀರಿಕೊಳ್ಳುತ್ತದೆ. ಎರಡು ದಿನಗಳವರೆಗೂ ಇದನ್ನು ಆಚೆ ತೆಗೆಯಬೇಡಿ. ನಂತರ ಮೊಬೈಲ್ ಬಿಡಿಭಾಗಗಳನ್ನು ಜೋಡಿಸಿ ಸ್ವಿಚ್ ಆನ್ ಮಾಡಿ. ಶೇಕಡಾ ತೊಂಬತ್ತರಷ್ಟು ಮೊಬೈಲ್ಗಳು ಹೀಗೆ ಮಾಡಿ ಪುನಃ ಬಳಕೆಗೆ ಯೋಗ್ಯವಾಗಿವೆ. ಕೆವೊಮ್ಮೆ ಮೊಬೈಲ್ಗೆ ತುಂಬಾ ಡ್ಯಾಮೇಜ್ ಆಗಿದ್ದರೆ ಈ ಟಿಪ್ಸ್ ಕೆಲಸ ಮಾಡುವುದಿಲ್ಲ ಎಂದು ಸಹ ನಾವು ಹೇಳುತ್ತೇವೆ. ಆದರೆ ಎಷ್ಟೋ ಮೊಬೈಲ್ಗಳು ಹೀಗೆಯೇ ಸರಿಯಾದ ಉದಾರಣೆಗಳಿವೆ.
ಮೊಬೈಲ್ ನೀರಿಗೆ ಬಿದ್ದ ತಕ್ಷಣ ಹೀಗೆ ಹೀಗೆ ಮಾಡಿ
*ಮೊಬೈಲ್ ಫೋನ್ ನೀರಿಗೆ ಬಿದ್ದು ಒದ್ದೆಯಾದರೆ ತಕ್ಷಣ ಸ್ವಿಚ್ ಆಫ್ ಮಾಡಿ. ಹೆಚ್ಚು ನೀರು ಇದ್ದರೆ, ಅದು ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಮೊಬೈಲ್ನಲ್ಲಿ ನೀರು ಖಾಲಿಯಾದರೆ, ಗೂಗಲ್ಗೆ ಹೋಗಿ, ಫಿಕ್ಸ್ ಮೈ ಸ್ಪೀಕರ್ ಪುಟವನ್ನು ತೆರೆಯುವ ಮೂಲಕ ಮತ್ತು ಅಲ್ಲಿ ಗೋಚರಿಸುವ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಧ್ವನಿಯನ್ನು ಪಡೆಯುತ್ತೀರಿ. ಇದು ಫೋನ್ ಅನ್ನು ಕಂಪಿಸುತ್ತದೆ ಮತ್ತು ನೀರನ್ನು ಕಳುಹಿಸುತ್ತದೆ.
*ಸ್ಮಾರ್ಟ್ಫೋನ್ ಸ್ವಿಚ್ ಆಫ್ ಮಾಡಿದ ನಂತರ ಬ್ಯಾಕ್ ಕವರ್ ಕೇಸ್, ಕವರ್ಗಳು, ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ತೆಗೆದುಹಾಕಿ. ಇಂದು ಕೆಲವು ಫೋನ್ ಗಳು ರಿಮೂವ್ ಮಾಡಬಹುದಾದ ಬ್ಯಾಟರಿಗಳನ್ನು ಹೊಂದಿಲ್ಲ.ಇದನ್ನು ಮಾಡಿದ ನಂತರ ಟಿಶ್ಯೂ ಪೇಪರ್ ತೆಗೆದುಕೊಂಡು ಸ್ಕ್ರೀನ್, ಕನೆಕ್ಟಿವಿಟಿ ಪೋರ್ಟ್ಗಳು ಸೇರಿದಂತೆ ತೇವಾಂಶ ಮತ್ತು ನೀರು ಇರುವಲ್ಲಿ ಅದನ್ನು ಒರೆಸಿ.
*ಫೋನ್ ನೀರಿಗೆ ಬಿದ್ದರೆ, ಅದನ್ನು ಅಕ್ಕಿಯಲ್ಲಿ ಹಾಕುವುದರಿಂದ ತೇವಾಂಶ ಆವಿಯಾಗುತ್ತದೆ. ಇದು ಸಾಮಾನ್ಯವಾಗಿ ಬಳಸುವ ತಂತ್ರಜ್ಞಾನವಾಗಿದೆ. ಏಕೆಂದರೆ ಅಕ್ಕಿಯು ನೀರಿನ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಟೆಕ್ ತಜ್ಞರು ಹೇಳುತ್ತಾರೆ. ಅಕ್ಕಿಯನ್ನು ಚೀಲದಲ್ಲಿ ಇಡುವುದರಿಂದ ನಿಮ್ಮ ಫೋನ್ ವೇಗವಾಗಿ ಒಣಗುತ್ತದೆ.ಫೋನ್ ಒಣಗಲು ಕನಿಷ್ಠ ಒಂದು ದಿನ ತೆಗೆದುಕೊಳ್ಳುತ್ತದೆ. ತದನಂತರ ಅದನ್ನು ಆನ್ ಮಾಡಲು ಪ್ರಯತ್ನಿಸಿ. ಹಾನಿ ಕಡಿಮೆಯಿದ್ದರೆ, ಫೋನ್ ಮತ್ತೆ ಕೆಲಸ ಮಾಡುತ್ತದೆ. ಅದು ಕೆಲಸ ಮಾಡದಿದ್ದರೆ ಸೇವಾ ಕೇಂದ್ರವನ್ನು ತೆಗೆದುಕೊಳ್ಳುವುದು ಉತ್ತಮ.
*ನಿಮ್ಮ ಫೋನ್ ಆ ರೀತಿ ಕೆಲಸ ಮಾಡದಿದ್ದರೆ, ತಕ್ಷಣ ಹತ್ತಿರದ ಸೆಲ್ ಫೋನ್ ಸೇವಾ ಅಂಗಡಿಗೆ ಹೋಗಿ. ಅಲ್ಲಿ ನಿಮ್ಮ ಫೋನ್ ಸಂಪೂರ್ಣವಾಗಿ ಬೇರ್ಪಟ್ಟು ನೀರಿಲ್ಲದೆ ಸ್ವಚ್ಛಗೊಳಿಸಲ್ಪಡುತ್ತದೆ. ಇದು ನಿಮ್ಮ ಮೊಬೈಲ್ ಫೋನ್ ಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ವಾಟರ್ ರೆಸಿಸ್ಟೆನ್ಸ್ ಬ್ಯಾಕ್ ಕವರ್ ಗಳನ್ನು ಖರೀದಿಸಿ ನಿಮ್ಮ ಮೊಬೈಲ್ ಫೋನ್ ನಲ್ಲಿ ಹಾಕುವುದು ಸೂಕ್ತ.