ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ದಿನಕ್ಕೊಂದು ಸೇಬಿನ ಸೇವನೆ ವೈದ್ಯರ ಭೇಟಿಯಿಂದ ದೂರವಿಸುತ್ತದೆ ಎಂಬ ಹೆಳೆಯ ಮಾತಿದೆ. ಅದು ನಿಜ ಕೂಡ ಹೌದು. ಸೇಬು ದೇಹದ ಆರೋಗ್ಯ ಕಾಪಾಡುವಲ್ಲಿ ಉತ್ತಮ ಕೆಲಸ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಸೇಬು ತಿನ್ನುವಾಗ ಅಪ್ಪಿತಪ್ಪಿಯೂ ಅದರ ಬೀಜವನ್ನು ಸೇವಿಸಬಾರದಂತೆ.
ಹೌದು. ಸೇಬಿನ ಬೀಜ ಸೇವೆ ಕೆಲವೊಮ್ಮ ಜೀವಕ್ಕೆ ಕುತ್ತು ತರಬಹುದಂತೆ. ಇದರ ಬೀಜದಲ್ಲಿ ವಿಷಕಾರಿ ಅಂಶ ಸೂಸುವ ಶಕ್ತಿ ಇದೆ ಎಂದು ತಜ್ಞರು ಹೇಳುತ್ತಾರೆ. ಸೇಬಿನ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ಅಂಶವು ಮಾನವನ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್ ಉತ್ಪತ್ತಿಯಾಗುವ ಸಾಧ್ಯತೆ ಇದೆ ಅಂತೆ.
ಸೈನೈಡ್ ಜೀವಕ್ಕೆ ಮಾರಣಾಂತಿಕ ಎಂಬ ಅಂಶ ಎಲ್ಲರಿಗೂ ಗೊತ್ತೇ ಇದೆ. ಸೈನೈಡ್ ಸಾವು ತರಬಲ್ಲದು ಎಂದು ತಜ್ಞರು ಸಂಶೋಧನೆ ಮೂಲಕ ಕಂಡುಕೊಂಡಿದ್ದಾರೆ. ಸೈನೈಡ್ ಎಷ್ಟು ಅಪಾಯಕಾರಿ ಎಂದರೆ ಇದು ದೇಹಕ್ಕೆ ಆಕ್ಸಿಜನ್ ಪೂರೈಕೆಯನ್ನು ನಿಲ್ಲಿಸಿಬಿಡುತ್ತದೆ. ಇದರಿಂದಾಗ ಜೀವಕ್ಕೆ ಅಪಾಯ ಉಂಟಾಗುತ್ತದೆ. ಹೀಗೆ ಸೇಬು ಸೇವನೆ ಮಾಡುವಾಗ ಆದಷ್ಟು ಜಾಗರೂಕರಾಗಿರಿ. ಸೇಬಿನಿಂದ ಬೀಜವನ್ನು ಸಂಪೂರ್ಣವಾಗಿ ತೆಗೆದು ಹಾಕಿಯೇ ತಿನ್ನಿ. ಸೇಬಿನ ಬೀಜ ಸೇವನೆಯಿಂದ ಜೀವಕ್ಕೆ ಅಪಾಯ ಕಾದಿದೆ ಎಂಬ ವಿಷಯದ ತರ್ಕಕ್ಕಿಂತ ನಮ್ಮ ಜೀವ ಜೀವನ ಆರೋಗ್ಯ ಮುಖ್ಯವಾಗುತ್ತದೆ. ಹಾಗಾಗಿ ಸೇಬು ತಿಂದು ಆರೋಗ್ಯವಾಗಿರಿ ಹೊರೆತಾಗಿ ಸೇಬಿನ ಬೀಜ ತಿಂದು ದೇಹದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸೂಚಿಸಲಾಗುತ್ತಿದೆ.
ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.