ಬೆಂಗಳೂರು : ಸುಳ್ಳು ಸುದ್ದಿ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಲು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಸುದ್ದಿಗಳನ್ನು ಈ ಲಿಂಕ್ ನಲ್ಲಿ ಹಂಚಿಕೊಳ್ಳುವ ಮೂಲಕ ನಿಖರ ಮಾಹಿತಿ ತಿಳಿದುಕೊಳ್ಳಬಹುದು.
ಹೌದು, ರಾಜ್ಯ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಸತ್ಯಾಸತ್ಯತೆ ತಿಳಿಯಯಲು ಹೊಸದಾಗಿ ವೆಬ್ ಸೈಟ್ ವೊಂದನ್ನು ಸಿದ್ದಪಡಿಸಿದ್ದು, ಇದರ ಮೂಲಕ ನೀವು ಮಾಹಿತಿಯ ಸತ್ಯಾಸತ್ಯತೆ ತಿಳಿಯಬಹುದಾಗಿದೆ. ಹಾಗಿದ್ದಲ್ಲಿ ವಿಡಿಯೋ/ಚಿತ್ರ/ಪೋಸ್ಟ್ ಲಿಂಕ್ ಅನ್ನು https://satya.karnataka.gov.in/ ಜೊತೆ ಹಂಚಿಕೊಳ್ಳಿ. ಪರಿಶೀಲಿಸಿ, ನಿಖರ ಮಾಹಿತಿಯನ್ನು ತಿಳಿದುಕೊಳ್ಳಿ. ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಸುದ್ದಿಗಳನ್ನು ನಂಬದಿರಿ, ನಂಬಿ ಮೋಸ ಹೋಗದಿರಿ. ಸತ್ಯ ಶೋಧನೆಯ ನಿಖರ ಮಾಹಿತಿಗಾಗಿ sathya.karnataka.gov.in ವೆಬ್ತಾಣಕ್ಕೆ ಭೇಟಿ ನೀಡಿ.