ಬೆಂಗಳೂರು : ಬಜೆಟ್ ಅಧಿವೇಶನ, ಪಕ್ಷದ ಸಮಾವೇಶ, ಕುಟುಂಬ ಕಾರ್ಯಕ್ರಮ ನಿಮಿತ್ತ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಫೆಬ್ರವರಿ 11 ರಿಂದ ಫೆ. 23 ರವರೆಗೆ ಸಾರ್ವಜನಿಕರ ಸಂದರ್ಶನಕ್ಕೆ ಲಭ್ಯವಿರುವುದಿಲ್ಲ.
ಫೆ. 11ರಂದು ಕುಟುಂಬದಲ್ಲಿ ಮದುವೆ ಕಾರ್ಯಕ್ರಮ, 12 ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ, ಫೆ. 13 ಅಧಿವೇಶನ, ಫೆ. 14 ರಂದು ಲೋಕಸಭೆ ಚುನಾವಣೆ ತಯಾರಿ ಸಭೆ, ಫೆ. 15 ರಂದು ರಾಜ್ಯಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಮತ್ತು ಕುಟುಂಬದಲ್ಲಿ ವಿವಾಹ ಕಾರ್ಯಕ್ರಮ, ಫೆ. 16 ರಂದು ಲೂನವಾಲದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಸಭೆ, ಫೆ. 17 ಮಂಗಳೂರಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಫೆ. 18 ರಂದು “ಬಾಗಿಲಿಗೆ ಬಂತು ಸರಕಾರ” ಕಾರ್ಯಕ್ರಮ ಹಾಗೂ ಮಂಗಳೂರಲ್ಲಿ ಕರ್ನಾಟಕ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮ, ಫೆ. 23 ರವರೆಗೆ ವಿಧಾನ ಮಂಡಲ ಅಧಿವೇಶನ ಇರುವುದರಿಂದ ಈ ದಿನಗಳಲ್ಲಿ ಸಾರ್ವಜನಿಕರ ಸಂದರ್ಶನಕ್ಕೆ ಲಭ್ಯ ಇರುವುದಿಲ್ಲ.
ಹೀಗಾಗಿ ಸಾರ್ವಜನಿಕರು ಈ ದಿನಗಳಲ್ಲಿ ನನ್ನನ್ನು ಭೇಟಿ ಮಾಡಲು ಬೆಂಗಳೂರಿನ ನನ್ನ ನಿವಾಸಕ್ಕಾಗಲಿ/ಕಚೇರಿಗಾಗಲಿ ಬರುವ ತೊಂದರೆ ತೆಗೆದುಕೊಳ್ಳಬಾರದು ಎಂದು ಡಿಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIG NEWS: ‘ಮಂಗನ ಕಾಯಿಲೆ’ಗೆ ಹೊಸ ವ್ಯಾಕ್ಸಿನ್ ತಯಾರಿಸಲು ‘ICMR’ ಒಪ್ಪಿಗೆ – ಸಚಿವ ದಿನೇಶ್ ಗುಂಡೂರಾವ್
BREAKING: ‘ಸಾರಿಗೆ ಸಚಿವ ರಾಮಲಿಂಗಾರೆಡ್ಡಿ’ಗೆ ಜಾಮೀನು ರಹಿತ ‘ವಾರೆಂಟ್ ಜಾರಿ’