Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪ್ರಧಾನಿ ಮೋದಿಗೆ ಅತ್ಯುನ್ನತ ಗೌರವ ; ‘ನೆಸ್ಸೆಟ್ ಪದಕ’ ಪಡೆದ ಮೊದಲ ಭಾರತೀಯ ಹೆಗ್ಗಳಿಕೆ!

25/02/2026 10:23 PM

‘ಅಮಾಯಕರ ಹತ್ಯೆ ಸಹಿಸಲಾಗುವುದಿಲ್ಲ’ ; ಇಸ್ರೇಲ್ ಸಂಸತ್ತಿನಲ್ಲಿ ಹಮಾಸ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ

25/02/2026 10:04 PM

‘ಕುಸುಮ ಸಂಜೀವಿನಿ ಯೋಜನೆ’ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ: ಹಿಮೋಫಿಲಿಯಾ ರೋಗಿಗಳ ಬದುಕಿಗೆ ಹೊಸ ಆಶಾಕಿರಣ

25/02/2026 9:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಮನಿಸಿ: ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ ಮತ್ತು ಮಾರ್ಗ ಬದಲಾವಣೆ | Indian Railway Update
KARNATAKA

ಗಮನಿಸಿ: ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ ಮತ್ತು ಮಾರ್ಗ ಬದಲಾವಣೆ | Indian Railway Update

By kannadanewsnow0901/05/2025 7:13 PM

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ಈ ರೈಲುಗಳ ಸಂಚಾರ ರದ್ದು, ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಮಾಡಿರುವುದಾಗಿ ನೈರುತ್ಯ ರೈಲ್ವೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್‌ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುವುದು ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ರದ್ದು: ಕೆಎಸ್ಆರ್ ಬೆಂಗಳೂರು-ಧರ್ಮಾವರಂ ನಡುವಿನ ಮೆಮು ವಿಶೇಷ ರೈಲುಗಳು (ಸಂಖ್ಯೆ 06595/06596) ಮೇ 5 ರಿಂದ 17 ರವರೆಗೆ, ಗುಂತಕಲ್-ಹಿಂದೂಪುರ (77213) ಮೇ 4 ರಿಂದ 17 ರವರೆಗೆ ಹಾಗೂ ಹಿಂದೂಪುರ-ಗುಂತಕಲ್ (77214) ನಡುವಿನ ಡೆಮು ರೈಲುಗಳು ಮೇ 5 ರಿಂದ 18 ರವರೆಗೆ ರದ್ದಾಗಿರಲಿವೆ. ಇದರೊಂದಿಗೆ ಯಶವಂತಪುರ-ಬೀದರ್ (16571) ಎಕ್ಸ್‌ಪ್ರೆಸ್ ರೈಲು ಮೇ 11, 12, 13 ಮತ್ತು 15 ರಂದು, ಬೀದರ್-ಯಶವಂತಪುರ (16572) ಎಕ್ಸ್‌ಪ್ರೆಸ್ ರೈಲು ಮೇ 12, 13, 14 ಮತ್ತು 16 ರಂದು, ಯಶವಂತಪುರ-ಲಾತೂರ್ (16583) ಎಕ್ಸ್‌ಪ್ರೆಸ್ ರೈಲು ಮೇ 10, 14, 16 ಮತ್ತು 17 ರಂದು, ಲಾತೂರ್-ಯಶವಂತಪುರ (16584) ಎಕ್ಸ್‌ಪ್ರೆಸ್ ರೈಲು ಮೇ 11, 15, 17 ಮತ್ತು 18 ರಂದು, ಸೋಲಾಪುರ-ಹಾಸನ (11311) ಎಕ್ಸ್‌ಪ್ರೆಸ್ ರೈಲು ಮೇ 11 ರಿಂದ 16 ರವರೆಗೆ ಮತ್ತು ಹಾಸನ-ಸೋಲಾಪುರ (11312) ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಮೇ 12 ರಿಂದ 17 ರವರೆಗೆ ರದ್ದುಪಡಿಸಲಾಗಿದೆ.

ನಿಯಂತ್ರಣ: ಮೇ 4 ರಿಂದ 16 ರವರೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಕೊಯಮತ್ತೂರಿಗೆ ಹೊರಡುವ ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್ (11013) ರೈಲು ಮಾರ್ಗ ಮಧ್ಯದಲ್ಲಿ ಸುಮಾರು 60 ನಿಮಿಷಗಳ ಕಾಲ, ಮೇ 4 ಮತ್ತು 11 ರಂದು ತುತಿಕೋರಿನ್‌ನಿಂದ ಓಖಾಗೆ ಪ್ರಯಾಣಿಸುವ ತುತಿಕೋರಿನ್-ಓಖಾ ವಿವೇಕ್ ಎಕ್ಸ್‌ಪ್ರೆಸ್ (19567) ರೈಲು ಸುಮಾರು 150 ನಿಮಿಷಗಳ ಕಾಲ, ಮೈಸೂರಿನಿಂದ ಜೈಪುರಕ್ಕೆ ಸಂಚರಿಸುವ ಮೈಸೂರು-ಜೈಪುರ ಎಕ್ಸ್‌ಪ್ರೆಸ್ (12975) ರೈಲು ಮೇ 8, 10, 15 ಮತ್ತು 17 ರಂದು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ಮತ್ತು ಮೇ 9 ಮತ್ತು 16 ರಂದು ಪುರಿಯಿಂದ ಹೊರಡುವ ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ್ ರಥ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ನಿಯಂತ್ರಣವಾಗುವ/ತಡವಾಗುವ ಸಾಧ್ಯತೆ ಇದೆ.

ಮಾರ್ಗ ಬದಲಾವಣೆ: ಮೇ 11 ರಿಂದ 17 ರವರೆಗೆ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್ (16591) ರೈಲು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ, ಗುಂತಕಲ್ ಮತ್ತು ಯಲಹಂಕ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ, ಅದೇ ರೀತಿ ಮೇ 11 ರಿಂದ 17 ರವರೆಗೆ ಮೈಸೂರಿನಿಂದ ಹೊರಡುವ ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಹಂಪಿ (16592) ಎಕ್ಸ್‌ಪ್ರೆಸ್ ರೈಲು ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದ್ದು, ಯಲಹಂಕ ಮತ್ತು ಗುಂತಕಲ್ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಮೇ 16 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಅಜ್ಮೀರ್ ಗರೀಬ್ ನವಾಜ್ ಎಕ್ಸ್‌ಪ್ರೆಸ್ (16532) ರೈಲು ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ, ಹಿಂದೂಪುರ ಮತ್ತು ಗುಂತಕಲ್ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಮೇ 12 ರಂದು ಅಜ್ಮೀರಿನಿಂದ ಹೊರಡುವ ರೈಲು ಸಂಖ್ಯೆ 16531 ಅಜ್ಮೀರ್-ಕೆಎಸ್ಆರ್ ಬೆಂಗಳೂರು ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ಗುಂತಕಲ್ ಮತ್ತು ಹಿಂದೂಪುರ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಮೇ 14, 2025 ರಂದು ಭಗತ್ ಕಿ ಕೋಠಿ ನಿಲ್ದಾಣದಿಂದ ಪ್ರಯಾಣಿಸುವ ರೈಲು ಸಂಖ್ಯೆ 16533 ಭಗತ್ ಕಿ ಕೋಠಿ-ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಗುಂತಕಲ್ ಮತ್ತು ಹಿಂದೂಪುರ ನಡುವಿನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರದ ಮೂಲಕ ಸಂಚರಿಸಲಿದೆ. ಅದೇ ರೀತಿ ಮೇ 12, 2025 ರಂದು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 12592 ಯಶವಂತಪುರ-ಗೋರಖ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಹಿಂದೂಪುರ ಮತ್ತು ಗುಂತಕಲ್ ನಡುವಿನ ನಿಲುಗಡೆಗಳನ್ನು ಬಿಟ್ಟು ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಬೈಪಾಸ್ ಮತ್ತು ರಾಯಚೂರು ಮೂಲಕ ಸಂಚರಿಸಲಿದೆ.

ಮೇ 14, 2025 ರಂದು ಹೌರಾದಿಂದ ಹೊರಡುವ ರೈಲು ಸಂಖ್ಯೆ 22831 ಹೌರಾ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಅನಂತಪುರದಿಂದ ಯಲಹಂಕದವರೆಗಿನ ತನ್ನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಧೋಣ, ಗುಂತಕಲ್, ಬಳ್ಳಾರಿ, ರಾಯದುರ್ಗ ಮತ್ತು ಚಿಕ್ಕಜಾಜೂರು ಮೂಲಕ ಸಂಚರಿಸಲಿದೆ. ಮೇ 16, 2025 ರಂದು ಸಾಯಿನಗರ ಶಿರಡಿ ನಿಲ್ದಾಣದಿಂದ ಆರಂಭವಾಗುವ ರೈಲು ಸಂಖ್ಯೆ 22602 ಸಾಯಿನಗರ ಶಿರಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಅನಂತಪುರದಿಂದ ಕಾಟ್ಪಾಡಿಯವರೆಗಿನ ತನ್ನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಗೂತ್ತಿ ಮತ್ತು ರೇಣಿಗುಂಟಾ ಮೂಲಕ ಸಂಚರಿಸಲಿದೆ.

ಮೇ 10, 2025 ರಂದು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16332 ತಿರುವನಂತಪುರಂ ಸೆಂಟ್ರಲ್-ಸಿಎಸ್‌ಎಂಟಿ ಮುಂಬೈ ಎಕ್ಸ್‌ಪ್ರೆಸ್ ರೈಲು ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರದ ನಿಲುಗಡೆಗಳನ್ನು ಬಿಟ್ಟು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ತುಮಕೂರು, ಅರಸಿಕೆರೆ, ರಾಯದುರ್ಗ, ಬಳ್ಳಾರಿ ಮತ್ತು ಗುಂತಕಲ್ ಮೂಲಕ ಸಂಚರಿಸಲಿದೆ. ಮೇ 4 ಮತ್ತು 11, 2025 ರಂದು ಮುಂಬೈಯ ಸಿಎಸ್‌ಎಂಟಿಯಿಂದ ಹೊರಡುವ ರೈಲು ಸಂಖ್ಯೆ 16331 ಸಿಎಸ್‌ಎಂಟಿ ಮುಂಬೈ-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ಅನಂತಪುರದಿಂದ ಬಂಗಾರಪೇಟೆಯವರೆಗಿನ ತನ್ನ ನಿಯಮಿತ ನಿಲುಗಡೆಗಳನ್ನು ಬಿಟ್ಟು ಗುಂತಕಲ್, ಗೂತ್ತಿ, ಕಡಪ, ರೇಣಿಗುಂಟಾ, ಮೇಲ್ಪಕ್ಕಂ, ಕಾಟ್ಪಾಡಿ ಮತ್ತು ಜೋಲಾರ್‌ಪೇಟೆ ಮೂಲಕ ಸಂಚರಿಸಲಿದೆ.

ಮೇ 8 ಮತ್ತು 15, 2025 ರಂದು ಬೆಂಗಳೂರಿನ ಎಸ್‌ಎಂವಿಟಿಯಿಂದ ಹೊರಡುವ ರೈಲು ಸಂಖ್ಯೆ 00635 ಎಸ್‌ಎಂವಿಟಿ ಬೆಂಗಳೂರು-ಗುವಾಹಟಿ ಪಾರ್ಸೆಲ್ ಎಕ್ಸ್‌ಪ್ರೆಸ್ ಧರ್ಮಾವರಂನಿಂದ ಗುಂಟೂರಿನವರೆಗಿನ ನಿಲುಗಡೆಗಳನ್ನು ಬಿಟ್ಟು ಎಸ್‌ಎಂವಿಟಿ ಬೆಂಗಳೂರು, ಜೋಲಾರ್‌ಪೇಟೆ, ರೇಣಿಗುಂಟಾ, ಗೂಡೂರು ಮತ್ತು ವಿಜಯವಾಡದ ಮೂಲಕ ಸಂಚರಿಸಲಿದೆ.

ಮೇ 5 ಮತ್ತು 12, 2025 ರಂದು ಗುವಾಹಟಿದಿಂದ ಹೊರಡುವ ರೈಲು ಸಂಖ್ಯೆ 00636 ಗುವಾಹಟಿ-ಎಸ್‌ಎಂವಿಟಿ ಬೆಂಗಳೂರು ಪಾರ್ಸೆಲ್ ಎಕ್ಸ್‌ಪ್ರೆಸ್ ಗುಂಟೂರಿನಿಂದ ಧರ್ಮಾವರಂವರೆಗಿನ ನಿಲುಗಡೆಗಳನ್ನು ಬಿಟ್ಟು ವಿಜಯವಾಡ, ಗೂಡೂರು, ರೇಣಿಗುಂಟಾ, ಜೋಲಾರ್‌ಪೇಟೆ ಮತ್ತು ಎಸ್‌ಎಂವಿಟಿ ಬೆಂಗಳೂರು ಮೂಲಕ ಸಂಚರಿಸಲಿದೆ.

ಮೇ 13, 2025 ರಂದು ತುಘಲಕಾಬಾದ್’ದಿಂದ ಹೊರಡುವ ರೈಲು ಸಂಖ್ಯೆ 00640 ತುಘಲಕಾಬಾದ್-ಯಶವಂತಪುರ ಪಾರ್ಸೆಲ್ ಎಕ್ಸ್‌ಪ್ರೆಸ್ ಗುಂತಕಲ್ ಬೈಪಾಸ್, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರದ ಮೂಲಕ ಸಂಚರಿಸಲಿದೆ.

BREAKING: ಪಹಲ್ಗಾಮ್ ಉಗ್ರರ ದಾಳಿ: ನ್ಯಾಯಾಂಗ ತನಿಖೆಗೆ ಕೋರಿದ್ದ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ | Pahalgam Terror Attack

ICSE 10ನೇ ತರಗತಿ ಪರೀಕ್ಷೆಯಲ್ಲಿ ಶೇ.96.8 ಅಂಕ ಗಳಿಸಿದ ಸಾಗರದ ರಾಧಾಕೃಷ್ಣ ಶಾಲೆಯ ನಿಸರ್ಗ.ಬಿ

Share. Facebook Twitter LinkedIn WhatsApp Email

Related Posts

‘ಕುಸುಮ ಸಂಜೀವಿನಿ ಯೋಜನೆ’ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ: ಹಿಮೋಫಿಲಿಯಾ ರೋಗಿಗಳ ಬದುಕಿಗೆ ಹೊಸ ಆಶಾಕಿರಣ

25/02/2026 9:59 PM2 Mins Read

BREAKING: ಪಿಜಿ ಮೆಡಿಕಲ್ 3ನೇ ಸುತ್ತಿನ ಫಲಿತಾಂಶ ಪ್ರಕಟಿಸಿದ ಕೆಇಎ

25/02/2026 9:52 PM1 Min Read

BIG NEWS : ದೇಶದ 12 ರಾಜ್ಯಗಳಲ್ಲಿ 32 ವಿಶ್ವವಿದ್ಯಾಲಯಗಳು ನಕಲಿ : ಕರ್ನಾಟಕದಲ್ಲೂ 2 ಫೇಕ್​ ಯೂನಿವರ್ಸಿಟಿ ಪತ್ತೆ!

25/02/2026 9:41 PM2 Mins Read
Recent News

BREAKING : ಪ್ರಧಾನಿ ಮೋದಿಗೆ ಅತ್ಯುನ್ನತ ಗೌರವ ; ‘ನೆಸ್ಸೆಟ್ ಪದಕ’ ಪಡೆದ ಮೊದಲ ಭಾರತೀಯ ಹೆಗ್ಗಳಿಕೆ!

25/02/2026 10:23 PM

‘ಅಮಾಯಕರ ಹತ್ಯೆ ಸಹಿಸಲಾಗುವುದಿಲ್ಲ’ ; ಇಸ್ರೇಲ್ ಸಂಸತ್ತಿನಲ್ಲಿ ಹಮಾಸ್ ವಿರುದ್ಧ ‘ಪ್ರಧಾನಿ ಮೋದಿ’ ವಾಗ್ದಾಳಿ

25/02/2026 10:04 PM

‘ಕುಸುಮ ಸಂಜೀವಿನಿ ಯೋಜನೆ’ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ: ಹಿಮೋಫಿಲಿಯಾ ರೋಗಿಗಳ ಬದುಕಿಗೆ ಹೊಸ ಆಶಾಕಿರಣ

25/02/2026 9:59 PM

BREAKING: ಪಿಜಿ ಮೆಡಿಕಲ್ 3ನೇ ಸುತ್ತಿನ ಫಲಿತಾಂಶ ಪ್ರಕಟಿಸಿದ ಕೆಇಎ

25/02/2026 9:52 PM
State News
KARNATAKA

‘ಕುಸುಮ ಸಂಜೀವಿನಿ ಯೋಜನೆ’ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ: ಹಿಮೋಫಿಲಿಯಾ ರೋಗಿಗಳ ಬದುಕಿಗೆ ಹೊಸ ಆಶಾಕಿರಣ

By kannadanewsnow0925/02/2026 9:59 PM KARNATAKA 2 Mins Read

ಬೆಂಗಳೂರು: ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಐತಿಹಾಸಿಕ ಹಾಗೂ ಮಾನವೀಯ ಮೈಲಿಗಲ್ಲಾಗುವ ಮಹತ್ವಾಕಾಂಕ್ಷಿ “ಕುಸುಮ ಸಂಜೀವಿನಿ” ಯೋಜನೆಗೆ ಇಂದು ಅಧಿಕೃತವಾಗಿ…

BREAKING: ಪಿಜಿ ಮೆಡಿಕಲ್ 3ನೇ ಸುತ್ತಿನ ಫಲಿತಾಂಶ ಪ್ರಕಟಿಸಿದ ಕೆಇಎ

25/02/2026 9:52 PM

BIG NEWS : ದೇಶದ 12 ರಾಜ್ಯಗಳಲ್ಲಿ 32 ವಿಶ್ವವಿದ್ಯಾಲಯಗಳು ನಕಲಿ : ಕರ್ನಾಟಕದಲ್ಲೂ 2 ಫೇಕ್​ ಯೂನಿವರ್ಸಿಟಿ ಪತ್ತೆ!

25/02/2026 9:41 PM

ಮಕ್ಕಳ ಆರೈಕೆ ರಜೆ ಮಗುವಿನ ಹಕ್ಕು, ರಜೆ ಮಂಜೂರು ಮಾಡಲೇಬೇಕು : ಹೈಕೋರ್ಟ್ ಖಡಕ್ ಆದೇಶ!

25/02/2026 9:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.