ಬೆಂಗಳೂರು: ಮಳೆಗಾಲದಲ್ಲಿ ವಾಹನ ಚಲಾಯಿಸುವಾಗ ಅಥವಾ ನಡೆದಾಡುವಾಗ ಸುತ್ತಮುತ್ತಲ ವಿದ್ಯುತ್ ತಂತಿಗಳ ಬಗ್ಗೆ ಗಮನವಿರಲಿ. ಭಾರಿ ಗಾಳಿ – ಮಳೆಯಿಂದ ವಿದ್ಯುತ್ ಕಂಬಗಳು ಅಥವಾ ತಂತಿಗಳು ಬೀಳುವ ಸಂಭವವಿರುತ್ತದೆ.
ವಿದ್ಯುತ್ ತಂತಿ / ಕಂಬಗಳು ತುಂಡಾಗಿ ಬಿದ್ದಿರುವುದು ಕಂಡುಬಂದಲ್ಲಿ ಕೂಡಲೇ ಬೆಸ್ಕಾಂನ 24×7 ಸಹಾಯವಾಣಿ 1912ಕ್ಕೆ ಕರೆ ಮಾಡಿ
ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪಯಾರ್ಯ ವಾಟ್ಸ್ ಆಪ್ ಸಂಖ್ಯೆಗಳನ್ನು ನೀಡಲಾಗಿದೆ. ಈ ವಾಟ್ಸ್ಆಪ್ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಾಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿದರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಬೆಸ್ಕಾಂಗೆ ಸಹಾಯವಾಗಲಿದೆ. ಈ ಮೊಬೈಲ್ ಸಂಖ್ಯೆಗಳು ಅಂದರೆ, 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119 ಗಳನ್ನು ಕೇವಲ ಎಸ್ಎಂಎಸ್ ಗಳಿಗೆ ಮಾತ್ರ ಮೀಸಲಿಡಲಾಗಿದೆ.
ಪ್ರಿಯ ಗ್ರಾಹಕರೇ,
ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕಾರ್ಯನಿರತವಾಗಿದ್ದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಎಸ್.ಎಂ.ಎಸ್ ಅನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ದೂರನ್ನು ದಾಖಲಿಸಬಹುದು.
ಇಂತಿ,
ಬೆಸ್ಕಾಂ ಸಹಾಯವಾಣಿ
(1912) pic.twitter.com/Yf9sYiLBhk— Namma BESCOM | ನಮ್ಮ ಬೆಸ್ಕಾಂ (@NammaBESCOM) May 7, 2024
ಪ್ರಿಯ ಗ್ರಾಹಕರೇ,
ನಿಮ್ಮ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳನ್ನು ಫೋಟೋ ಅಥವಾ ವಿಡಿಯೋ ಹಾಗೂ ಸಂದೇಶಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸುವ ಮೂಲಕ ದೂರನ್ನು ದಾಖಲಿಸಬಹುದು.
ಇಂತಿ,
ಬೆಸ್ಕಾಂ ಸಹಾಯವಾಣಿ
(1912) pic.twitter.com/cPidlZvert— Namma BESCOM | ನಮ್ಮ ಬೆಸ್ಕಾಂ (@NammaBESCOM) May 7, 2024