ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವಂತ ವಿಶೇಷ ಮೆಮು ರೈಲನ್ನು ನಾಯಂಡಹಳ್ಳಿ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ ಮಾಡಲಾಗಿದೆ.
ರೈಲುಗಳ ಸಂಖ್ಯೆ 06525/06526 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮತ್ತು ಮೈಸೂರು ನಿಲ್ದಾಣಗಳ ನಡುವೆ ಚಲಿಸುವ ಮೆಮು ವಿಶೇಷ ರೈಲುಗಳನ್ನು ನಾಯಂಡಹಳ್ಳಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ ಆರು ತಿಂಗಳ ಕಾಲ ಅಂದರೆ ಮಾರ್ಚ್ 21, 2024 ರಿಂದ ಸೆಪ್ಟೆಂಬರ್ 20, 2024 ರವರೆಗೆ ಪ್ರಸ್ತುತ ಸಮಯದೊಂದಿಗೆ ಮುಂದುವರಿಸಲು ನಿರ್ಧರಿಸಲಾಗಿದೆ.
II. ರೈಲುಗಳ ಸಂಚಾರ ಅವಧಿ ವಿಸ್ತರಣೆ
ರೈಲು ಸಂಖ್ಯೆ 07335/07336 ಬೆಳಗಾವಿ-ಭದ್ರಾಚಲಂ ರೋಡ ನಿಲ್ದಾಣಗಳ ನಡುವೆ ಚಲಿಸುವ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ವಿಸ್ತರಣೆ ಸೇವೆಯ ವಿವರಗಳು ಈ ಕೆಳಗಿನಂತಿವೆ:
1. ರೈಲು ಸಂಖ್ಯೆ 07335 ಬೆಳಗಾವಿ-ಭದ್ರಾಚಲಂ ರೋಡ್ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ಏಪ್ರಿಲ್ 1 ರಿಂದ ಏಪ್ರಿಲ್ 30, 2024 ರವರೆಗೆ ವಿಸ್ತರಿಸಲಾಗುತ್ತಿದೆ, ಈ ಮೊದಲು ಮಾರ್ಚ್ 31, 2024 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.
2. ರೈಲು ಸಂಖ್ಯೆ 07336 ಭದ್ರಾಚಲಂ ರೋಡ್-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ಏಪ್ರಿಲ್ 2 ರಿಂದ ಮೇ 1, 2024 ರವರೆಗೆ ವಿಸ್ತರಿಸಲಾಗುತ್ತಿದೆ, ಈ ಮೊದಲು ಏಪ್ರಿಲ್ 1, 2024 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು.
ನಾನೊಬ್ಬ ಸ್ಟ್ರಾಂಗ್ CM, ನಿಮ್ಮ ಹಾಗೆ ವೀಕ್ PM ಅಲ್ಲ: ‘ಮೋದಿ’ ವಿರುದ್ಧ ಸಿದ್ಧರಾಮಯ್ಯ ವಾಗ್ಧಾಳಿ