ಬೆಂಗಳೂರು: ಹಾವೇರಿ ಮತ್ತು ಬ್ಯಾಡಗಿ ನಿಲ್ದಾಣಗಳ ನಡುವೆ ರೈಲು ಹಳಿಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುವುದರಿಂದ, ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಏಪ್ರಿಲ್ 23, 2025 ರಂದು ಪ್ರಕಟಿಸಲಾದ ಪತ್ರಿಕಾ ಪ್ರಕಟಣೆ ಸಂಖ್ಯೆ 38ರಲ್ಲಿ ತಿಳಿಸಿದಂತೆ, ಏಪ್ರಿಲ್ 28, 29; ಮೇ 1, 2, 4, 5, 6, 8, 9, 11, 12, 13, 15 ಮತ್ತು 16, 2025 ರಂದು ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯೆ ಸುಮಾರು 105 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ತಿಳಿಸಲಾಗಿತ್ತು.
ಆದರೆ, ಈಗ ರೈಲಿನ ನಿರ್ಗಮನ ಸಮಯ ಮತ್ತು ಮಾರ್ಗಮಧ್ಯೆ ನಿಯಂತ್ರಣದ ಅವಧಿಯಲ್ಲಿ ಬದಲಾಯಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಈ ರೈಲು (17325) ಬೆಳಗಾವಿಯಿಂದ ತನ್ನ ನಿಗದಿತ ನಿರ್ಗಮನ ಸಮಯವಾದ 06:15 ಗಂಟೆಯ ಬದಲು 07:15 ಗಂಟೆಗೆ ಹೊರಡಲಿದೆ. ಅಲ್ಲದೆ, ಈ ದಿನಗಳಲ್ಲಿ ಮಾರ್ಗಮಧ್ಯೆ ರೈಲನ್ನು ಸುಮಾರು 45 ನಿಮಿಷಗಳ ಕಾಲ ನಿಯಂತ್ರಿಸಲಾಗಿದೆ.