ದಕ್ಷಿಣ ಕನ್ನಡ: ಜಿಲ್ಲೆಯ ಪ್ರಸಿದ್ಧ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ಒಂದು ರುಡ್ ಸೆಟ್ ಸಂಸ್ಥೆಯೂ ಒಂದಾಗಿದೆ. ಈ ಸಂಸ್ಥೆಯಿಂದ ಉಚಿತ ಎಸಿ ಮತ್ತು ರೆಫ್ರಿಜರೇಟರ್ ತರಬೇತಿಗೆ ( AC and Refrigerator Repair Training ) ಅರ್ಜಿಯನ್ನು ಸ್ವ-ಉದ್ಯೋಗಾಕಾಂಕ್ಷಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 19-01-2024ರಿಂದ 17-01-2024ರವರೆಗೆ 30 ದಿನಗಳ ಕಾಲ ಉಚಿತ ಎಸಿ ಮತ್ತು ರೆಫ್ರಿಜರೇಟರ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.
ಈ ತರಬೇತಿಗೆ 18 ರಿಂದ 45 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ನೀಡಲಾಗುತ್ತದೆ. ತರಬೇತಿಯ ಬಳಿಕ ಸ್ವ ಉದ್ಯೋಗ ಕೈಗೊಳ್ಳೋದಕ್ಕೆ ಬ್ಯಾಂಕ್ ನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದಿದೆ.
ಅರ್ಹ ಆಸಕ್ತ ಸ್ವ ಉದ್ಯೋಗಾಕಾಂಕ್ಷಿಗಳು ವಾಟ್ಸ್ ಆಪ್ ಮೂಲಕವೂ ತಮ್ಮ ಅರ್ಜಿಯನ್ನು 6364561982 ಸಂಖ್ಯೆಗೆ ಸಲ್ಲಿಸಬಹುದಾಗಿದೆ. ಅಲ್ಲದೇ ಆನ್ ಲೈನ್ ಮೂಲಕ www.rudsetitraining.org ಗೆ ಭೇಟಿ ನೀಡಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9591044014, 900793675, 9448484237 ಗೆ ಕರೆ ಮಾಡಿ ಪಡೆಯಬಹುದಾಗಿದೆ. ಪೋನ್ ಮಾಡೋರು ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯ ಒಳಗಾಗಿ ಕರೆ ಮಾಡುವಂತೆ ವಿನಂತಿಸಿದೆ.
‘ವಿಕಲಚೇತನ’ರ ಗಮನಕ್ಕೆ: ರಾಜ್ಯ ಸರ್ಕಾರದಿಂದ ‘ವಿವಿಧ ಯೋಜನೆ’ಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
BREAKING: ಇಸ್ರೋದ ಮೊದಲ ಸೂರ್ಯ ಮಿಷನ್ ಯಶಸ್ವಿ: ಅಂತಿಮ ಕಕ್ಷೆಗೆ ಆದಿತ್ಯ ಎಲ್1 ಸೇರ್ಪಡೆ | Aditya L-1