ಬೆಂಗಳೂರು : ಫೆಬ್ರವರಿ 10ರಿಂದ 14 ರವರೆಗೆ ಬೆಂಗಳೂರಿನಲ್ಲಿ ಏರ್ ಶೋ ಕಾರ್ಯಕ್ರಮ ನಡೆಯಲಿದ್ದು, ಟಿಕೆಟ್ ದರ, ಟಿಕೆಟ್ ಬುಕ್ ಮಾಡುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ
ಏರ್ ಶೋ 2025 ಫೆಬ್ರವರಿ 10ರಿಂದ ಫೆಬ್ರವರಿ 14ರ ವರೆಗೆ ಪ್ರತಿದಿನವೂ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿದೆ. ಫೆಬ್ರವರಿ 13 ಹಾಗೂ 14ರಂದು ಸಾರ್ವಜನಿಕರಿಗೆ ಅವಕಾಶ ಇರಲಿದೆ.
ಟಿಕೆಟ್ ದರ ಎಷ್ಟು?
ಭಾರತೀಯರಿಗೆ 2,500 ರೂಪಾಯಿ ಇದ್ದರೆ, ವಿದೇಶಿಗರಿಗೆ 50 ಯುಎಸ್ ಡಾಲರ್ ಇರಲಿದೆ.
ಎಡಿವಿಎ ಪಾಸ್: ಭಾರತೀಯರಿಗೆ 1,000 ರೂ
ವಿದೇಶಿಗರಿಗೆ 50 ಯುಎಸ್ ಡಾಲರ್
ವ್ಯಾಪಾರ ಪಾಸ್ : ಭಾರತೀಯರಿಗೆ 5,000 ರೂ.
ವಿದೇಶಿಗರಿಗೆ : 50 ಯುಎಸ್ ಡಾಲರ್ ಇರಲಿದೆ.
ಏರ್ ಶೋ 2025ರ ಟಿಕೆಟ್ ಬುಕ್ ಮಾಡುವುದು ಹೇಗೆ?
ನೀವು ಮೊದಲು ಏರೋ ಇಂಡಿಯಾದ ವೆಬ್‌ಸೈಟ್ aeroindia.gov.in ಅನ್ನು ಓಪನ್ ಮಾಡಬೇಕು
ವೆಬ್‌ಸೈಟ್‌ನ ಹೋಮ್ ಪೇಜ್‌ನಲ್ಲಿ ಟಿಕೆಟ್ಸ್ ಅಂತ ಕಾಣಿಸುತ್ತೆ. ಅಲ್ಲಿ ವಿಸಿಟರ್ಸ್ ರಿಜಿಸ್ಟ್ರೇಶನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಯಾವ ಪಾಸ್ ಬೇಕು ಎಂದು ಆಯ್ಕೆ ಮಾಡಬೇಕು.
ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್, ಅಗತ್ಯ ವಿವರಗಳನ್ನು ಆ್ಯಡ್ ಮಾಡಬೇಕು.
ಬಳಿಕ ಹಣ ಪಾವತಿ ಮಾಡಿ. ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ್ರೆ ಟಿಕೆಟ್ ಬುಕ್ ಆಗಲಿದೆ.