ಬೆಂಗಳೂರು: ಕೇವಲ ಸಹಕಾರ ಸಚಿವ ಕೆ.ಎನ್ ರಾಜಣ್ಣನ ಮೇಲೆ ಮಾತ್ರವೇ ಅಲ್ಲದೇ, ಅವರ ಪುತ್ರ ಎಂಎಸ್ಸಿ ರಾಜೇಂದ್ರ ರಾಜಣ್ಣ ಅವರ ಮೇಲೂ ಹನಿಟ್ರ್ಯಾಪ್ ಮಾಡಿರೋ ಗಂಭೀರ ಆರೋಪ ಸದನದಲ್ಲಿ ಪ್ರತಿಧ್ವನಿಸಿತು.
ಈ ಬಗ್ಗೆ ಸದನದಲ್ಲಿ ಮಾತನಾಡಿದಂತ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ನನ್ನ ವಿರುದ್ಧ ಮಾತ್ರವೇ ಹನಿಟ್ರ್ಯಾಪ್ ಮಾಡೋದಕ್ಕೆ ಯತ್ನಿಸಿದ ಪುರಾವೆಗಳು ಇದ್ದಾವೆ. ಈ ಬಗ್ಗೆ ಲಿಖಿತ ದೂರು ನೀಡುವುದಾಗಿ ಸದನದಲ್ಲಿ ತಿಳಿಸಿದರು.
ಇನ್ನೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡೋದಕ್ಕೆ ಪ್ರಯತ್ನಿಸಿರೋದಷ್ಟೇ ಅಲ್ಲ. ಅವರ ಪುತ್ರ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರ ಮೇಲೂ ಈ ಯತ್ನ ನಡೆಸಲಾಗಿದೆ. ಈ ಮಾತನ್ನು ಸ್ವತಹ ಎಂಎಲ್ಸಿ ರಾಜೇಂದ್ರ ರಾಜಣ್ಣ ತಿಳಿಸಿದ್ದಾರೆ.
ನನಗೆ ಈ ಸಂಬಂಧ ಹಲವು ವೀಡಿಯೋ ಕಾಲ್, ಮಸೇಜ್ ಗಳು ಬರುತ್ತಿವೆ. ಕಳೆದ ಆರು ತಿಂಗಳಿನಿಂದ ಹನಿಟ್ರ್ಯಾಪ್ ಗೆ ಸಿಲುಕಿಸಲು ಪ್ರಯತ್ನಿಸಲಾಗಿದೆ. ಹನಿಟ್ರ್ಯಾಪ್ ಬಹಳ ದಿನಗಳಿಂದ ನಡೆಯುತ್ತಿದೆ. ನಮ್ಮ ತಂದೆಯವರ ಮೇಲೆ ಮಾತ್ರವಲ್ಲ, ನನ್ನ ಮೇಲೂ ಯತ್ನಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ.
BIG BREAKING: ‘ಹನಿಟ್ರ್ಯಾಪ್’ ಆರೋಪ: ರಾಜ್ಯ ಸರ್ಕಾರದಿಂದ ‘ಉನ್ನತ ಮಟ್ಟದ ತನಿಖೆ’ಗೆ ಆದೇಶ