ತಿರುಮಲ: ತಿರುಪತಿ ತಿರುಮಲ ಲಡ್ಡು ಪ್ರಸಾದ ಈಗ ವಿವಾದದ ಸ್ವರೂಪ ಪಡೆದಿದೆ. ಜೊತೆ ಜೊತೆಗೆ ದನದ ಕೊಬ್ಬು ಮಾತ್ರವೇ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಕೆ ಮಾತ್ರ ಆಗುತ್ತಿಲ್ಲ. ಇದರೊಂದಿಗೆ ಇತರೆ ಕೊಬ್ಬಿನ ಅಂಶಗಳು ಕೂಡ ಬಳಕೆಯಾಗಿರುವುಂತ ಆಘಾತಕಾರಿ ಮಾಹಿತಿಯು ಲ್ಯಾಬ್ ರಿಪೋರ್ಟ್ ವರದಿಯಿಂದ ಬಹಿರಂಗವಾಗಿದೆ.
ಹೌದು ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶವಷ್ಟೇ ಅಲ್ಲದೇ ಇತರೆ ಕೊಬ್ಬಿನ ಅಂಶಗಳು ಪತ್ತೆಯಾಗಿರುವುದಾಗಿ ಲ್ಯಾಬ್ ವರದಿಯಿಂದ ತಿಳಿದು ಬಂದಿದೆ. ಇದಕ್ಕೆ ಕಲಬೆರೆಕೆಯ ತುಪ್ಪ ಸರಬರಾಜು ಕಾರಣ ಎಂಬುದಾಗಿ ಟಿಟಿಡಿ ಕಾರ್ಯಕಾರಿ ಅಧಿಕಾರಿ ಶ್ಯಾಮಲಾ ರಾವ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ತಿರುಪತಿ ತಿರುಮಲ ಪ್ರಸಾದವಾದಂತ ಲಡ್ಡು ತಯಾರಿಕೆಗಾಗಿ ಎಆರ್ ಡೈರಿಯಿಂದ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಕಲಬೆರೆಕೆಯಿಂದ ಕೂಡಿರುವ ಅನುಮಾನದಿಂದ ಗುಜರಾತ್ ನಲ್ಲಿನ ಸರ್ಕಾರಿ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು ಎಂದಿದ್ದಾರೆ.
ಲ್ಯಾಬ್ ರಿಪೋರ್ಟ್ ನೋಡಿ ನಮಗೆ ಶಾಕ್ ಆಗಿದೆ. ವರದಿಯಂತೆ ತಿರುಪತಿ ತಿರುಮಲ ಲಡ್ಡು ಪ್ರಸಾದಕ್ಕೆ ಎಆರ್ ಡೈರಿಯಿಂದ ಸರಬರಾಜಂತ ತುಪ್ಪವು ಕನಿಷ್ಠ ಮಟ್ಟದಿಂದ ಕೂಡಿದೆ. ಕಲಬೆರೆಕೆಯ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಅಷ್ಟೇ ಅಲ್ಲ ಇತರೆ ಕೊಬ್ಬು ಪತ್ತೆ
ತಿರುಪತಿ ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರೆಕೆಯ ತುಪ್ಪವೇ ಕಾರಣ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ದನದ ಕೊಬ್ಬಷ್ಟೇ ಅಲ್ಲದೇ ತುಪ್ಪದಲ್ಲಿ ಮೀನಿ ಎಣ್ಣೆ, ಪಾಮ್ ಆಯಿಲ್, ಭೀಪ್, ಹಂದಿ ಕೊಬ್ಬು, ಸೋಯಾಬಿನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಮೆಕ್ಕೆ ಜೋಳದ ಎಣ್ಣೆ ಬೆರೆಸಿರುವುದಾಗಿ ಲ್ಯಾಬ್ ರಿಪೋರ್ಟ್ ನಿಂದ ತಿಳಿದು ಬಂದಿದೆ.
BIG NEWS : 3 ತಿಂಗಳಲ್ಲಿ ಪ್ರಪಂಚದ ವಿನಾಶ ಪ್ರಾರಂಭವಾಗುತ್ತದೆ : `ಬಾಬಾ ವಂಗಾ’ ಶಾಕಿಂಗ್ ಭವಿಷ್ಯವಾಣಿ!