ಬೆಂಗಳೂರು: ಸಮುದಾಯಕ್ಕೊಂದು ಆಸ್ಪತ್ರೆಯಲ್ಲ, ಜನಸಂಖ್ಯೆ ಆಧಾರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಿದ್ದೇವೆ. ನಾವು ಅವೈಜ್ಞಾನಿಕ ನಡೆಗಳಿಗೆಲ್ಲ ಅವಕಾಶವನ್ನು ನೀಡುವುದಿಲ್ಲ ಎಂಬುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಸದಸ್ಯರೊಬ್ಬರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಯಾವುದೇ ಅಭಿವೃದ್ಧಿ ಕೆಲಸಕ್ಕೆ ಮೀಸಲಿಟ್ಟ ಹಣವನ್ನು ಮನಬಂದಂತೆ ಬಳಸಲು ಸಾಧ್ಯವಿಲ್ಲ. ಹೊಸ ಆಸ್ಪತ್ರೆಗಳ ನಿರ್ಮಾಣದ ವಿಚಾರದಲ್ಲಿ ಕೆಲವೊಂದು ನಿರ್ದಿಷ್ಟ ನಿಯಮಗಳಿವೆ ಎಂದರು.
ಆಸ್ಪತ್ರೆಗಳನ್ನು ಅಥವಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಾಗ ಆಯಾ ಭಾಗದ ಜನಸಂಖ್ಯೆ ಮತ್ತು ಅಲ್ಲಿನ ಆರೋಗ್ಯ ಸೇವೆಯ ಅಗತ್ಯತೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆಯೇ ಹೊರತು, ಯಾವುದೇ ಒಂದು ಜಾತಿಯ ಜನರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕಾಗಿ ಆಸ್ಪತ್ರೆಗಳನ್ನು ನಿರ್ಮಿಸಲು ಬರುವುದಿಲ್ಲ. ಒಟ್ಟಾರೆಯಾಗಿ, ಜನಸಾಮಾನ್ಯರ ಹಿತದೃಷ್ಟಿ ಮತ್ತು ಅಧಿಕೃತ ನಿಯಮಗಳೇ ಇಲ್ಲಿ ಅಂತಿಮ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ: ನಾಲ್ವರು ಸಾವು | US military aircraft crash
BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market








