ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯದ ವಿಷಯಗಳು ವೀಡಿಯೋಗಳ ಮೂಲಕ ದಿನಕ್ಕೊಂದು ಬಹಿರಂಗವಾಗುತ್ತಿವೆ. ಈಗ ನಾನ್ ವೆಜ್, ಎಣ್ಣೆ, ಪುಲ್ ಮೋಜು-ಮಸ್ತಿಯೊಂದಿಗೆ ಕೈದಿಗಳು ಭರ್ಜರಿ ಡ್ಯಾನ್ಸ್ ಮಾಡಿದಂತ ವೀಡಿಯೋ ವೈರಲ್ ಆಗಿದೆ.
ಹೌದು.. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದ್ಯ ಕುಡಿದು ಕೈದಿಗಳು ಭರ್ಜರಿ ಡ್ಯಾನ್ಸ್ ಮಾಡಿರುವಂತ ವೀಡಿಯೋ ವೈರಲ್ ಆಗಿದೆ. ಜೈಲಿನಲ್ಲಿರುವಂತ ಡ್ರಮ್, ತಟ್ಟೆಗಳನ್ನೇ ವಾದ್ಯದ ವಸ್ತುಗಳನ್ನಾಗಿ ಬಡಿದುಕೊಂಡು, ಕುಡಿದು ಡ್ಯಾನ್ಸ್ ಮಾಡಿರುವುದು ವೀಡಿಯೋದಲ್ಲಿನ ದೃಶ್ಯಗಳಲ್ಲಿ ಕಂಡು ಬಂದಿದೆ.
ಜೈಲಿನ ವೈರಲ್ ವೀಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನದ್ದಾ ಅಥವಾ ಬೇರೆಯ ಜೈಲಿನದ್ದಾ ಎನ್ನುವ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಇದೆಲ್ಲದರ ನಡುವೆ ಪರಪ್ಪನ ಅಗ್ರಹಾರದ ಕರ್ಮಕಾಂಡ ಮಾತ್ರ ಬಗೆದಷ್ಟು ಬಯಲಾಗುತ್ತಿದೆ.
BIG NEWS: ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿಗೆ ‘ಬಾಲಾಪರಾಧಿ’ ಎನ್ನುವಂತಿಲ್ಲ: ಮಕ್ಕಳ ರಕ್ಷಣಾ ನಿರ್ದೇಶನಾಲಯ
BREAKING: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರದ ತಡೆ: ಪರಿಸರವಾದಿಗಳ ಹೋರಾಟಕ್ಕೆ ಗೆಲುವು








